ವಿಶ್ವ ಜಲ ದಿನಾಚರಣೆ: ಕೆರೆಗಳ ಅಭಿವೃದ್ಧಿಗೆ ಅಧಿಕಾರಿಗಳ ಸಭೆ ನಡೆಸಲು ಮನವಿ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಮುಂಬರುವ ವಿಶ್ವ ಜಲ ದಿನಾಚರಣೆ ಅಂಗವಾಗಿ ಕೆರೆ ಕಟ್ಟೆಗಳ ಉತ್ಸವ ನಡೆಯಲಿರುವುದರಿಂದ ಹಾಗು ಈ ಕಾರ್ಯಕ್ರಮಕ್ಕೆ ಜಲಸಂಪ ನ್ಮೂಲ ಸಚಿವರಾದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ರವರು ಆಗಮಿಸುವ ನಿರೀಕ್ಷೆ ಇದ್ದು, ಈ ಹಿನ್ನಲೆಯಲ್ಲಿ ತಾಲೂಕು ಆಡಳಿತ ಕೆಲವು ಬೇಡಿಕೆಗಳನ್ನು ಈಡೇರಿಸು ವಂತೆ ಒತ್ತಾಯಿಸಿ ಶ್ರೀ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ವತಿಯಿಂದ ನೂತನ ತಹಸೀಲ್ದಾ‌ರ್ ಪರಶುರಾಮ್‌ರವರಿಗೆ ಮನವಿ ಸಲ್ಲಿಸಲಾಗಿದೆ.

ಸದ್ಯದಲ್ಲೇ ಜಿಲ್ಲಾಧಿಕಾರಿಗಳವರ ಸಮ್ಮುಖ ದಲ್ಲಿ ತಾಲೂಕು ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಒಂದು ಸಭೆ ನಡೆಯಲಿ ರುವುದರಿಂದ ತಾಲೂಕಿನಲ್ಲಿ ರುವ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ರುವ ಕೆರೆಗಳ ಪಟ್ಟಿಯನ್ನು ನೀಡುವುದು ಹಾಗೂ ಇತ್ತೀಚೆಗೆ ಸರ್ವೆ ನಡೆದಿರುವ ಕಸಬಾ-1 ಸೀಗೆಬಾಗಿ ಗ್ರಾಮ ಸರ್ವೆ ನಂ.57ರ ಬೆಂಡಿಕಟ್ಟೆ ಕೆರೆಯ ದಾಖಲೆ ಹಾಗೂ ಈ ಸಂಬಂಧ ತಮ್ಮ ಕಛೇರಿ ಯಿಂದ ಕ್ರಮ ತೆಗೆದು ಕೊಂಡಿರುವ ಬಗ್ಗೆ ಮಾಹಿತಿ ನೀಡುವುದು. ತಾಲೂಕಿನ ಕಲ್ಲಹಳ್ಳಿ ಗ್ರಾಮಪಂಚಾಯತಿ ಸಿರಿಯೂರು ಸರ್ವೆ ನಂ.೪ರ ಬೌಂಡರಿ ನಿಗದಿಪಡಿಸಿ ಒತ್ತುವರಿ ತೆರವುಗೊಳಿ ಸುವ ಬಗ್ಗೆ ಗ್ರಾಮಪಂಚಾಯತಿ ವತಿಯಿಂದ ತಾಲೂಕು ಕಛೇರಿಗೆ ಬಂದಿರುವ ಪತ್ರದ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಲು ಮನವಿಯಲ್ಲಿ ಕೋರಲಾಗಿದೆ.

ತಾಲ್ಲೂಕಿನ ದೊಣಬಘಟ್ಟ ಸರ್ವೆ ನಂ.36ರ ದೊಡ್ಡಕೆರೆ, ತಡಸ ಸರ್ವೆ ನಂ.72ರ ಕೆರೆ, ಹೊಳೆನೇರಳಕೆರೆ ಸರ್ವೆ ನಂ:50ರ ದೊಡ್ಡಕೆರೆ ಹಾಗು ನಂಜಾಪುರ ಸರ್ವೆ, ನಂ.1ರ ಸರ್ಕಾರಿ ಕೆರೆ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಬರುವ ಸಿದ್ದಾಪುರ ಸರ್ವೆ ನಂ.63 ಹಾಗೂ ಇದಕ್ಕೆ ಲಗತ್ತಾಗಿರುವ ಸರ್ವೆ ನಂಬರಿನ ಕೆರೆಗಳು ಮತ್ತು ಸರ್ವೆ ನಂ.110 ರ ಸರ್ಕಾರಿ ಕೆರೆ, ಜನ್ನಾಪುರ ಸರ್ವೆ ನಂ:90ರ ಕೆರೆ ಮತ್ತು ಸೀಗೆಬಾಗಿ ಸರ್ವೆ ನಂ.33ರ ಕೆರೆ ಸೇರಿದಂತೆ ಇನ್ನಿತರ ಕೆರೆಗಳ ಬೌಂಡರಿ ಕಾರ್ಯ ತುರ್ತಾಗಿ ನಿಗದಿಪಡಿಸಿ ಒತ್ತುವರಿ ತೆರವುಗೊಳಿಸುವ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗಿದೆ.

ಟ್ರಸ್ಟ್ ಛೇರ್ಮನ್ ಆರ್. ವೇಣು ಗೋಪಾಲ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚನ್ನಪ್ಪ, ಟ್ರಸ್ಟ್ ವೈಸ್ ಛೇರ್ಮನ್ ಎನ್.ಎಲ್. ರಮಾದೇವಿ, ಗೌರವಾಧ್ಯಕ್ಷ ವಿಶ್ವೇಶ್ವರರಾವ್ ಗಾಯಕ್ವಾಡ್, ಪ್ರಧಾನ ಕಾರ್ಯದರ್ಶಿ ಬಿ.ವಿ ಗಿರಿ, ಸಂಚಾಲಕ ಎಂ.ವಿ ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿ ಕೆ.ಎಸ್ ಶೈಲಜಾ, ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು