ಸಕಾಲದಲ್ಲಿ ಮೂಳೆ ಸಾಂದ್ರತೆ ಪರೀಕ್ಷೆ ಅಗತ್ಯ:ಡಾ.ಹೆಚ್.ಸಿ. ಶಿವಕುಮಾರ್

ವಿಜಯ ಸಂಘರ್ಷ ನ್ಯೂಸ್ 
ಶಿವಮೊಗ್ಗ: 40 ವರ್ಷಗಳ ಮೇಲ್ಪಟ್ಟ ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಳ್ಳುವುದರ ಜೊತೆಗೆ ಸಕಾಲದಲ್ಲಿ ಮೂಳೆ ಸಾಂದ್ರತೆ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಮ್ಯಾಕ್ಸ್ ಆಸ್ಪತ್ರೆಯ ಖ್ಯಾತ ಕೀಲು ಮೂಳೆ ತಜ್ಞ ಡಾ.ಹೆಚ್.ಸಿ. ಶಿವ ಕುಮಾರ್ ತಿಳಿಸಿದರು.

ಅವರು ಇಂದು ಶಿವಮೊಗ್ಗ ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾದ ಉಚಿತ ಮೂಳೆ ತಪಾಸಣೆ, ಶಿಬಿರ ಉದ್ಘಾಟಿಸಿ ಮಾತನಾಡಿದರು. 

ಇಂದು ಶೇಕಡ 30ರಷ್ಟು ಜನರು ಮೂಳೆ ತೊಂದರೆಯಿಂದ ಬಳಲುತ್ತಿ ದ್ದಾರೆ. ಪ್ರಾರಂಭಿಕ ಹಂತದಲ್ಲಿಯೇ ಕಾಯಿಲೆ ಪತ್ತೆ ಹಚ್ಚಿ ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಂಡರೆ ರೋಗ ಗುಣಪಡಿಸಿ ಕೊಳ್ಳಬಹುದು ಎಂದು ತಿಳಿಸಿದರು.

 ಪ್ರತಿನಿತ್ಯ ವ್ಯಾಯಾಮ ಯೋಗ ಪ್ರಾಣಾಯಾಮ ಹಾಗೂ ಪೌಷ್ಟಿಕಾಂಶ ಆಹಾರ ಪದಾರ್ಥಗಳ ಸೇವನೆಯಿಂದ ಕೀಲು ಮೂಳೆ ಗಳು ಸದೃಢವಾಗಿ ರುತ್ತವೆ. ಆದ್ದರಿಂದ ಇಂತಹ ಶಿಬಿರದಲ್ಲಿ ಸಾರ್ವಜನಿಕರು ಭಾಗವಹಿಸಿ ಉಚಿತ  ಮೂಳೆ ಸಾಂದ್ರತೆ ತಪಾಸಣೆ ಮಾಡಿಸಿ ಕೊಳ್ಳುವುದರ ಜೊತೆಗೆ ಅಗತ್ಯ ಮಾಹಿತಿ ಪಡೆದುಕೊಳ್ಳಬೇಕುಎಂದರು.

ಅಧ್ಯಕ್ಷ ಕೆ ಸೂರ್ಯನಾರಾಯಣ ಉಡುಪ ಮಾತನಾಡಿ ಇಂತಹ ಪರೀಕ್ಷೆ ಬೇರೆಡೆ ಮಾಡಿಸಿಕೊಂಡಾಗ 2 ರಿಂದ 3 ಸಾವಿರ ರೂ ವ್ಯಯವಾಗಲಿದ್ದು,ಇಲ್ಲಿ ಸಂಪೂರ್ಣವಾಗಿ ಉಚಿತವಾಗಿ ಮಾಡುತ್ತಿರುವುದರಿಂದ ಇಂತಹ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

 ಕಾರ್ಯದರ್ಶಿ ಎನ್.ಜಿ.ಉಷಾ, ಸಹಾಯಕ ಮಾಜಿ ಗೌರ್ನರ್ ವಿಜಯಕುಮಾರ್ ಜಿ, ಮಹಾ ಬಲೇಶ್ವರ ಭಟ್ ಎನ್ ವಿ ಭಟ್ ಗಾಯತ್ರಿ ಸುಮತಿಂದ್ರ ಸಿ.ವಿಜಯ ಕುಮಾರ್ ಕಿಶೋರ್ ಶೀರ್ ನಾಳಿ, ಶೈಲಿನ್ ಮುಂತಾದ ಸದಸ್ಯರು, ಆಸ್ಪತ್ರೆ ಸಿಬ್ಬಂದಿಯವರು ಉಪಸ್ಥಿತರಿದ್ದರು.90 ಜನ ನಾಗರಿಕರು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಂಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು