ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಮಾನವೀಯ ಮೌಲ್ಯಗಳು ಇಂದು ಕಣ್ಮರೆಯಾಗುತ್ತಿದ್ದು, ಮಕ್ಕಳಲ್ಲಿ ಅವನ್ನು ಬಿತ್ತುವ ಕಾರ್ಯ ನಡೆಯ ಬೇಕಿದ್ದು ಶಿಕ್ಷಕರು ಆ ಕೆಲಸ ತಪ್ಪದೇ ಮಾಡಬೇಕಿದೆ. ತಮ್ಮ ನಡೆ ನುಡಿ ಆದರ್ಶಗಳ ಮೂಲಕ ಮಕ್ಕಳಲ್ಲಿ ದಯೆ, ಪ್ರೀತಿ, ಸಹನೆ, ಸಹಕಾರ, ಸೌಜನ್ಯ ಇವೇ ಮೊದಲಾದ ಗುಣ ಗಳನ್ನು ಬೆಳೆಸಬೇಕು ಎಂದು ವಾಣಿಜ್ಯ ತೆರಿಗೆ ಉಪ ಆಯುಕ್ತ ಅಶೋಕ್ ಹೇಳಿದರು.
ಅವರು ತಾಲೂಕಿನ ಯರೇಹಳ್ಳಿ ಶಾಲೆಯಲ್ಲಿ ನಡೆದ ಶಾಲಾ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯರೇಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಮಾಲತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ಪ್ರತಿಭೆ ಬೆಳಗಲು ಪ್ರತಿವರ್ಷ ಇಂತಹ ಕಾರ್ಯಗಳೂ ನಡೆಯಬೇಕು ಎಂದರು.
ಎಸ್ ಡಿ ಎಂ ಸಿ ಅಧ್ಯಕ್ಷ ಕೃಷ್ಣಮೂರ್ತಿ ಶಾಲಾ ಹಬ್ಬದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಶೇಖರ್, ಸರೋಜಮ್ಮ,ಎಸ್ ಡಿ ಎಂ ಸಿ ಸದಸ್ಯ ಬಸವರಾಜ್,ತಾ ಪಂ ಮಾಜಿ ಸದಸ್ಯ ಮಾವಿನಕೆರೆ ರಮೇಶ್, ಉದ್ಯಮಿ ಬಿ.ಕೆ.ಜಗನ್ನಾಥ್, ಗಾಂಧಿನಗರ ರಮೇಶ್, ವಿಠಲ್ ರಾವ್, ಪರುಸೋಜಿ ರಾವ್, ಪ್ರಕಾಶ್, ರಾಮಸಂಜೀವಯ್ಯ ಸೇರಿದಂತೆ ಅನೇಕರು ಇದ್ದರು.
ಅರಿವು ಕೇಂದ್ರದ ಮೇಲ್ವಿಚಾರಕಿ ಮಾಲಾ, ಅಂಗನವಾಡಿ ಪುಟ್ಟಕ್ಕ ಸೇರಿದಂತೆ ಶಾಲಾ ಎಲ್ಲಾ ಶಿಕ್ಷಕರು, ಪೋಷಕರು,ಗ್ರಾಮಸ್ಥರಿದ್ದರು. ಶಿಕ್ಷಕಿ ವಾಣಿಶ್ರೀ ಸ್ವಾಗತಿಸಿ, ಸುಮಾ ವಂದಿಸಿದರೆ,ಮುಖ್ಯ ಶಿಕ್ಷಕ ಕೋಗಲೂರು ತಿಪ್ಪೇಸ್ವಾಮಿ ನಿರೂಪಿಸಿದರು.
ಇದೆ ಸಂದರ್ಭದಲ್ಲಿ ವಿವಿಧ ಆಟೋಟ ಸ್ಪರ್ಧೆ ಗಳಲ್ಲಿ ವಿಜೇತರಾದ ಮಕ್ಕಳು ಮತ್ತು ಪೋಷಕರಿಗೆ ಬಹುಮಾನ ವಿತರಿಸಲಾಯಿತು.ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.