ಭದ್ರಾವತಿ-ಲಕ್ಷಾಂತರ ರೂ ಮೌಲ್ಯದ ಅಡಿಕೆ ಕಳುವು: ಮಾಲು ಸಹಿತ ಕಳ್ಳರ ಬಂಧನ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಮನೆಯಲ್ಲಿಟ್ಟಿದ್ದ ಅಡಿಕೆ ತುಂಬಿದ ಚೀಲಗಳನ್ನು ಕಳ್ಳತನ ಮಾಡಿಕೊಂಡು ಹೋಗ ಲಾಗಿದೆ ಎಂಬ ದೂರಿನನ್ವಯ ಕಾರ್ಯತತ್ಪರ ರಾದ ತಾಲ್ಲೂಕಿನ ಹೊಳೆಹೊನ್ನೂರು ಪೊಲೀಸರು ಮೂವರನ್ನು ಬಂಧಿಸಿ ಒಟ್ಟು 6,93,000/-ರೂಗಳ ಮಾಲನ್ನು ಅಮಾನತು ಪಡಿಸಿಕೊಂಡಿದ್ದಾರೆ.ಡಿ.19ರಂದು ಈ ಕಳ್ಳತನ ಸಂಭವಿಸಿದೆ ಎಂದು ಶ್ರೀನಿವಾಸಪುರದ ವಾಸಿ ರಮೇಶ್ ದೂರು ನೀಡಿದ್ದರು. ತನಿಖಾ ತಂಡವು ಜ.11 ರಂದು ಆರೋಪಿತರಾದ ಭದ್ರಾವತಿಯ ಖಾಜಿ ಮೊಹಲ್ಲಾದ, ಸಾಜಿದ್ ಅಲಿಯಾಸ್ ಸಾದಿಕ್ (25), ಕೂಡ್ಲಿಯ ಶೇಖ್ ಅಲಿಯಾಸ್ ಅಡ್ಡು (24) ಮತ್ತು ಚನ್ನಗಿರಿಯ ಮಹಮದ್ ಮುಹೀಬುಲ್ಲಾ (23) ಇವರನ್ನು ದಸ್ತಗಿರಿ ಮಾಡಿ ಮಾಲು ಸಹಿತ ವಶಕ್ಕೆ ಪಡೆದಿದ್ದಾರೆ.

 ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ವರದಿಯಾದ 2023ನೇ ಸಾಲಿನ ಒಂದು ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣ, 2024ನೇ ಸಾಲಿನ ಎರಡು ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ಮತ್ತು ಒಂದು ಅಡಿಕೆ ಕಳ್ಳತನ ಪ್ರಕರಣ ಸೇರಿದಂತೆ ಒಟ್ಟು 4 ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ.

ಇದಕ್ಕೆ ಸಂಬಂಧಿಸಿದ ಅಂದಾಜು ಮೌಲ್ಯ 3ಲ. ರೂ. ಮೌಲ್ಯದ 6 ಕ್ವಿಂಟಾಲ್ ಅಡಿಕೆ, ಅಂದಾಜು ಮೌಲ್ಯ 1.93 ಲ ರೂ.ನ 3ದ್ವಿಚಕ್ರ ವಾಹನ ಹಾಗೂ ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ 2 ಲಕ್ಷ ರೂ. ನ ಓಮಿನಿ ವಾಹನ ಸೇರಿದಂತೆ ಒಟ್ಟು 6,93,000 ರೂ. ಮಾಲನ್ನು ಅಮಾನತು ಪಡಿಸಿಕೊಂಡಿದ್ದಾರೆ.

ಹೊಳೆಹೊನ್ನೂರು ಸಿಪಿಐ ಲಕ್ಷ್ಮಿಪತಿ ಆರ್. ನೇತೃತ್ವದಲ್ಲಿ ಪಿಎಸ್‌ಐಗಳಾದ ರಮೇಶ, ಮಂಜುನಾಥ ಎಸ್ ಕುರಿ, ಕೃಷ್ಣ ನಾಯ್ಕ ಹಾಗೂ ಸಿಬ್ಬಂದಿಗಳಾದ ಹೆಚ್ಸಿ ಅಣ್ಣಪ್ಪ, ಪ್ರಕಾಶ ನಾಯ್ಕ, ಮಂಜುನಾಥ, ಪ್ರಸನ್ನ ಮತ್ತು ಪಿಸಿ ವಿಶ್ವನಾಥ ತಂಡ ಕಳ್ಳರನ್ನು ಪತ್ತೆ ಮಾಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು