ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ : ನಗರದ ಕೆಎಸ್ ಆರ್‌ಟಿಸಿ ಬಸ್‌ನಿಲ್ದಾಣ ಮುಂಭಾಗದ ಮೀನು ಗಾರರ ಬೀದಿಯ ಶ್ರೀಮಾರಿಯಮ್ಮ ದೇವಸ್ಥಾನದ ಮುಂಭಾಗದಲ್ಲಿ ಇತ್ತೀಚೆಗೆ ಸಾಲು ಮರಗಳನ್ನು ಕಡಿದು ವಿಶಾಲಗೊಳಿಸಿ ಮಹಾದ್ವಾರ ನಿರ್ಮಿಸಿ ಜಾತ್ರೆ ಸಹ ನಡೆಸ ಲಾಗಿದ್ದು, ನಿನ್ನೆ ಸಂಜೆ ಸದರಿ ಜಾಗಕ್ಕೆ ಕಿರಿದಾಗಿ ತಡೆಗೋಡೆ ನಿರ್ಮಿಸಲು ಮುಂದಾ ದಾಗ ಆಟೋಚಾಲಕರು ಮತ್ತು ಅಲ್ಲಿನ ನಿವಾಸಿಗಳ ನಡುವೆ ಮಾತಿನ ಚಕಮಕಿ ನಡೆದು ನೂರಾರು ಮಂದಿ ಜಮಾಯಿಸಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಮಹಿಳೆಯರು ನಗರಸಭಾ ಸದಸ್ಯ ಮಾಜಿ ಬಾಲಕೃಷ್ಣ ಅಲಿಯಾಸ್ ಮಟನ್‌ಬಾಲು ಹಾಗೂ ಆಟೋ ಚಾಲಕರ ಸಂಘದ ಅಧ್ಯಕ್ಷ ಸಹೋದರ ಲಕ್ಷ್ಮಣ ಹಾಗೂ ಪುತ್ರ ಸೇರಿದಂತೆ ನಾಲ್ವರ ವಿರುದ್ಧ ದೂರು ನೀಡಿದ್ದು, ನಿನ್ನೆ ರಾತ್ರಿ ಕಾರ್ತಿಕ ಮತ್ತು ಇತರರು ಬಾಲಕೃಷ್ಣ ಮೇಲೆ ಹಲ್ಲೆ ನಡೆಸಿರುತ್ತಾರೆ ಎಂದು ದೂರಲಾಗಿದೆ.
ರಾಜಕೀಯ ಕುಮ್ಮಕ್ಕಿನಿಂದ ಬಾಲಕೃಷ್ಣ ಮತ್ತು ಲಕ್ಷ್ಮಣ ಹಾಗೂ ಇತರರ ವಿರುದ್ದ ಸುಳ್ಳು ಪ್ರಕರಣ ದಾಖಲಿಸಿಕೊಂಡು ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕೃಷ್ಣ ರವರನ್ನು ಸಂಜೆ ಪೊಲೀಸರು ಬ೦ಧಿಸಿರುವ ಕ್ರಮವನ್ನು ಖಂಡಿಸಿ ಶುಕ್ರವಾರ ಸಂಜೆ ನ್ಯೂಟೌನ್ ಪೊಲೀಸ್ ಠಾಣೆ ಎದುರು ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತ ರು ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಮುತ್ತಿಗೆ ಹಾಕಿ ಬಾಲಕೃಷ್ಣ ರವರ ಮೇಲೆ ರಾಜಕೀಯ ಕುಮ್ಮಕ್ಕಿ ನಿಂದ ಹಲ್ಲೆ ನಡೆಸಿರುವರ ವಿರುದ್ಧ ಪ್ರಕರಣ ದಾಖಲಿಸಿ ತಕ್ಷಣ ಆರೋಪಿ ಗಳನ್ನು ದಸ್ತಗಿರಿ ಮಾಡುವಂತೆ ಪ್ರತಿಭಟಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಪಕ್ಷದ ಮುಖಂಡ ರಾದ ಎಂ.ಎ.ಅಜಿತ್, ನ್ಯಾಯವಾದಿಗಳಾದ ವೆಂಕಟೇಶ್, ಟಿ.ಚಂದ್ರೇ ಗೌಡ, ಡಿ.ಆನಂದ್, ಮಧುಸೂಧನ್, ಕುಮರಿ ಚಂದ್ರಣ್ಣ, ನಗರ ಸಭಾ ಮಾಜಿ ಸದಸ್ಯರುಗಳಾದ ಸಾವಿತ್ರಮ್ಮ, ವಿಶಾಲಾಕ್ಷಿ, ಆನಂದ್, ವಿಶ್ವೇಶ್ವರರಾವ್ ಗಾಯಕ್‌ವಾಡ್, ಮಂಜುನಾಥ್, ಸುರೇಶ್, ಧರ್ಮರಾಜ್, ರಾಮಕೃಷ್ಣ ಮತ್ತಿತರೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.