ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಸ್ವಾಮಿ ವಿವೇಕಾನಂದರು ಇಡೀ ವಿಶ್ವಕ್ಕೆ ಶಾಂತಿ ಮತ್ತು ಮಾನವೀಯತೆಯನ್ನು ಸಾರಿದ ರಾಯಭಾರಿ ಎಂದು ಹೊಳೆಹೊನ್ನೂರು ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲೇಶಪ್ಪ ಹೇಳಿದರು.ಕಲ್ಲಿಹಾಳ್ ವೃತ್ತದಲ್ಲಿ ಸ್ವಾಮಿ ವಿವೇಕಾನಂದರ 161ನೇ ಜಯಂತಿ ಪ್ರಯುಕ್ತ ಆಯೋಜಿಸಿದ್ದ ವಾಕಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಿಶ್ವ ಕಂಡ ಅತ್ಯಂತ ಶ್ರೇಷ್ಠ ಮಹನೀಯರಲ್ಲಿ ವಿವೇಕಾನಂದರು ಒಬ್ಬರು. ಅವರ ಜೀವನ ಇಂದು ಮತ್ತು ಮುಂದಿನ ಪೀಳಿಗೆಗೆ ಮಾದರಿ. ಭಾರತ ದೇಶದಲ್ಲಿ ಮಾತ್ರವಲ್ಲದೆ ಇಡೀ ವಿಶ್ವವೇ ಇಂದು ಅವರ ಜಯಂತೋತ್ಸವ ವನ್ನು ಆಚರಿಸುತ್ತಿದೆ. ಅವರ ಮಾರ್ಗದರ್ಶನ ಯುವ ಪೀಳಿಗೆಯಲ್ಲಿ ನವ ಚೈತನ್ಯವನ್ನು ಮೂಡಿಸುತ್ತದೆ ಎಂದರು.
ಹೊಳೆಹೊನ್ನೂರು ಯುವಮೋರ್ಚಾದ ಅಧ್ಯಕ್ಷ ಪಿ.ಎಸ್.ಕಿರಣ್ ಕುಮಾರ್ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ವಿವೇಕಾನಂದರು ಹಾಕಿಕೊಟ್ಟ ಮಾರ್ಗದಲ್ಲಿ ನಮ್ಮ ಯುವ ಸಮೂಹ ಸಾಗಬೇಕಾಗಿದೆ. ಮಹನೀಯರ ಜಯಂತಿಗಳು ಅವರ ಸಾಧನೆಗಳನ್ನು ಮೆಲುಕು ಹಾಕುವುದರ ಜೊತೆಗೆ ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಕಾರಿ ಯಾಗಿವೆ ಎಂದರು.
ಸಮಾರಂಭದಲ್ಲಿ ಮುಖಂಡರಾದ ಉಜ್ಜಿನಪ್ಪ, ನಾಗರಾಜಪ್ಪ, ಪ್ರಧಾನ ಕಾರ್ಯದರ್ಶಿ ಚಂದ್ರುಕುಮಾರ್, ಅರಬಿಳಚಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎ.ಎಮ್.ಚಂದ್ರಶೇಖರ್, ಯುವಮೊರ್ಚಾ ಪ್ರಧಾನ ಕಾರ್ಯದರ್ಶಿ ಚಂದ್ರು, ನಂಜುಂಡಿ, ಅನೂಪ್ ಪಟೇಲ್, ಚಂದು ಸೇರಿದಂತೆ ಇತರರು ಇದ್ದರು.