ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಪ್ರತಿಯೊಬ್ಬರೂ ಎಲ್ಲಾ ವ್ಯವಹಾರಗಳಲ್ಲಿ ಜಾಗರೂಕರಾಗಿರ ಬೇಕು. ಸೈಬರ್ ಅಪರಾಧದ ನಿದರ್ಶನಗಳು ವರದಿಯಾದಾಗ ಪೊಲೀಸರಿಗೆ ತಿಳಿಸಲು ಅಥವಾ ಟೋಲ್ ಫ್ರೀ ಸಂಖ್ಯೆ 1930 ನ್ನು ಸಂಪರ್ಕಿಸಲು ಸೈಬರ್ ಕ್ರೈಮ್ ಪೊಲೀಸ್ ಉಪ ಅಧೀಕ್ಷಕ ಕೆ.ಕೃಷ್ಣಮೂರ್ತಿ ತಿಳಿಸಿದರು.
ನಗರದ ವಿಐಎಸ್‌ಎಲ್ ನ ಮಾನವ ಸಂಪನ್ಮೂಲ ಕಲಿಕೆ ಮತ್ತು ಅಭಿವೃದ್ಧಿ ವಿಭಾಗದಿಂದ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾಗೃತಿ, ಸೈಬರ್ ಕ್ರೈoಜಾಗೃತಿ ತೆಗೆದು ಕೊಳ್ಳ ಬೇಕಾದ ಮುನ್ನೆಚ್ಚರಿಕೆಗಳು ಮತ್ತು ತಡೆಗಟ್ಟುವ ಕ್ರಮಗಳ ಕುರಿತು ಆಯೋಜಿಸಲಾಗಿದ್ದ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
ಸೈಬರ್ ಕ್ರಿಮಿನಲ್‌ಗಳಿಂದ ವಂಚನೆ ಗೊಳಗಾದವರು ಅನುಭವಗಳನ್ನು ಹಂಚಿಕೊಳ್ಳಲು ಹಿಂಜರಿಯಬಾರದು. ಅಪರಾಧ ನಡೆದ ಸಮಯದಿಂದ 1 ಘಂಟೆ ಒಳಗಡೆ ದೂರನ್ನು ದಾಖಲಿಸಿ ದ್ದಲ್ಲಿ ಕಳೆದುಕೊಂಡ ಹಣವನ್ನು ಹಿಂದಿರುಗಿ ಪಡೆಯುವ ಸಾಧ್ಯತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಸ್ತುತ ದಾಖಲಾಗಿ ರುವ ದೂರುಗಳು, ಅರಿವು ಮೂಡಿಸುವ ವೀಡಿಯೋಗಳು ಮತ್ತು ಕಾರ್ಯಾಗಾರದಲ್ಲಿ ಭಾಗವಹಿಸಿದವ ರೊಂದಿಗೆ ಮುಖಾಮುಖಿ ಸಂವಾದ ಗಳು ನಡೆದವು.
ಸಹಾಯಕ ಪೊಲೀಸ್ ಉಪನಿರೀಕ್ಷಕ ವಿರೂಪಾಕ್ಷಪ್ಪ ಉಪಸ್ಥಿತರಿದ್ದರು.103 ಕಾರ್ಮಿಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.