ಭಾರತ್ ಸ್ಕೌಟ್ಸ್-ಗೈಡ್ಸ್ ಸಂಸ್ಥೆಗೆ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ: ಪಿ ಜಿ ಆರ್ ಸಿಂಧ್ಯಾ

ವಿಜಯ ಸಂಘರ್ಷ ನ್ಯೂಸ್ 

ಶಿವಮೊಗ್ಗ: ಕರ್ನಾಟಕ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ರಾಷ್ಟ್ರಮಟ್ಟದಲ್ಲಿ ಪ್ರಬಲ ರಾಜ್ಯಗಳಾದ ರಾಜಸ್ಥಾನ, ಮಧ್ಯ ಪ್ರದೇಶ, ಛತ್ತಿಸ್ಗಡ್ ಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ರಾಜ್ಯದ ರಾಜ್ಯ ಮುಖ್ಯ ಆಯುಕ್ತರು, ಮಾಜಿ ಸಚಿವರೂ ಆದ ಪಿ. ಜಿ. ಆರ್. ಸಿಂಧ್ಯಾ ಹೇಳಿದರು. 

ಅವರು ಜಿಲ್ಲಾ ಸಂಸ್ಥೆಗೆ ಭೇಟಿ ನೀಡಿ ಜಿಲ್ಲಾ ಪದಾಧಿಕಾರಿಗಳೊಂದಿಗೆ ವಿಚಾರ ವಿನಿಮಯ ಮಾಡಿ ನಂತರ ಮಾತನಾಡಿ,ಗಣತಿ, ಮಕ್ಕಳ ಕಾರ್ಯಾಚಟುವಟಿಕೆ ಅಯೋಜನೆ, ವಯಸ್ಕ ನಾಯಕರ ತರಬೇತಿ ಆಯೋಜನೆಯಲ್ಲಿ ರಾಜ್ಯ ಸಂಸ್ಥೆಯು ಸಾಧಿಸಿರುವ ಪ್ರಗತಿಯ ಮಾನದಂಡದ ಮೇಲೆ ರಾಷ್ಟ್ರ ಸಂಸ್ಥೆಯು ಗುರುತಿಸಿ ಗೌರವಿಸಿದೆ ಎಂದರು.

ತಮಿಳುನಾಡಿನ ತಿರುಚಿಯಲ್ಲಿ ಏರ್ಪಡಿಸಿರುವ, ರಾಷ್ಟ್ರದ್ಯಂತ ಸುಮಾರು 25 ಸಾವಿರ ಮಕ್ಕಳು ಭಾಗವಹಿಸುತ್ತಿರುವ ಅಮೃತ ಮಹೋತ್ಸವ ರಾಷ್ಟ್ರೀಯ ಜಂಬೂರೀ ಯಲ್ಲಿ ಜಿಲ್ಲೆಯೂ ಸೇರಿದಂತೆ ರಾಜ್ಯದಿಂದ ಸುಮಾರು ಎಂಟುನೂರು ಮಕ್ಕಳು ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಕಾರ್ಯದರ್ಶಿ ಚಂದ್ರ ಶೇಖರಯ್ಯ 2024-25ನೇ ಸಾಲಿನಲ್ಲಿ ನಡೆಸಿದ ಕಾರ್ಯಾಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು. ಆಯುಕ್ತ ಕೆ. ರವಿ ಜಿಲ್ಲಾ (ರೋವರ್) ಮುಂದಿನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. 

ರಾಜ್ಯ ಸಂಘಟನಾ ಆಯುಕ್ತ (ಸ್ಕೌಟ್) 
ಎಂ. ಪ್ರಭಾಕರ್ ಭಟ್ ರಾಜ್ಯ ಸಂಸ್ಥೆಯ ವತಿಯಿಂದ ಮುಂದಿನ ದಿನಗಳಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳ ಮಾಹಿತಿ ನೀಡಿ ಜಿಲ್ಲಾ ಸಂಸ್ಥೆಯೂ ಅರ್ಹ ಶಿಭಾರಾರ್ಥಿ ಗಳನ್ನು ನಿಯೋಜಿಸಲು ಕೋರಿದರು. 

ಜಿಲ್ಲಾ ಆಯುಕ್ತರು ವಯಸ್ಕ ಸಂಪನ್ಮೂಲ ( ಗೈಡ್) ಸರಸ್ವತಿ ನಾಗರಾಜ್ ಮಾತನಾಡುತ್ತ, ಸಿಂಧ್ಯಾ ರವರು ರಾಜ್ಯದ ಚುಕ್ಕಾಣಿ ಹಿಡಿದಂದಿ ನಿಂದ ರಾಜ್ಯವು ಬಹಳಷ್ಟು ಪ್ರಗತಿ ಸಾದಿಸಿದ್ದದ್ದಕ್ಕಾಗಿ ಅವರನ್ನು ಅಭಿನಂದಿಸಿದರು.

ವೈ ಆರ್ ವೀರೇಶಪ್ಪ, ಚೂಡಾಮಣಿ ಈ ಪವಾರ್, ಜಿ.ವಿಜಯ್ ಕುಮಾರ್, ಆರ್. ರಾಘವೇಂದ್ರ, ದೇವಯ್ಯ, ಭರತ್ ಉಪಸ್ಥಿತರಿದ್ದರು.ಎಸ್. ಜಿ. ಆನಂದ್ ಸ್ವಾಗತಿಸಿ, ರಾಜೇಶ್ ವಿ ಅವಲಕ್ಕಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು