ಭದ್ರಾವತಿ ಆಕಾಶವಾಣಿ ವಜ್ರಮಹೋತ್ಸವ ಸಂಭ್ರಮ: ಕಾರ್ಯಕ್ರಮಗಳು ಸ್ಪಷ್ಟತೆಯಿಂದ ಕೂಡಿವೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಆಕಾಶವಾಣಿ ಕಾರ್ಯ ಕ್ರಮಗಳು ಹೆಚ್ಚು ನಿಖರ ಮತ್ತು ಸ್ಪಷ್ಟತೆಯಿಂದ ಕೂಡಿದ್ದು ಈ ಹೊತ್ತಿಗು ಸಹ ತನ್ನ ಛಾಪನ್ನ ಉಳಿಸಿ ಕೊಂಡು ಬಂದಿದೆ ಎಂದು ಕುವೆಂಪು ವಿವಿ ವಿಶ್ರಾಂತ ಕುಲಸಚಿವ ಡಾ.ಶ್ರೀಕಂಠ ಕೂಡಿಗೆ ಹೇಳಿದರು.ಅವರು ಶುಕ್ರವಾರ ಆಕಾಶವಾಣಿ ಕೇಂದ್ರಕ್ಕೆ 60ವರ್ಷ ತುಂಬಿದ ಹಿನ್ನಲೆಯಲ್ಲಿ ಹಮ್ಮಿಕೊಂಡ ವಜ್ರಮಹೋತ್ಸದ ಕಾರ್ಯಕ್ರಮದಲ್ಲಿ ಮಾತನಾಡಿದರು. 

1965ರಲ್ಲಿ ಆರಂಭಗೊoಡ ಆಕಾಶ ವಾಣಿ ಅಂದಿನಿoದಲೂ ಇಂದಿನವರೆಗೆ ಹಲವು ನಿರ್ದೇಶಕರು ಹಾಗು ಸಿಬ್ಬಂದಿ ತಮ್ಮದೆ ಆದ ಕೊಡುಗೆ ನೀಡಿದ್ದಾರೆ ಎಂದರು.

 ಎಸ್.ಆರ್.ಭಟ್ ಅವರ ಕಲ್ಪನೆಯ ಹಲವು ವಿಶೇಷ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ದೇಶ ವಿದೇಶಗಳಲ್ಲಿ ಆಕಾಶವಾಣಿ ಕಾರ್ಯಕ್ರಮಗಳ ಕಂಪು ಪಸರಿಸಿವೆ ಎಂದರು.
 
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಡಾ.ಕೆ.ಸಿ.ಶಶಿಧರ್ ಮಾತನಾಡಿ, ದೇಶದಲ್ಲಿ ಕೃಷಿಗೆ ಸಂಬoಧಿ ಸಿದoತೆ ರೈತಬಂಧುಗಳಿಗೆ ಉಪಯುಕ್ತ ಮಾಹಿತಿಯನ್ನ ನೀಡಿ ಸ್ವಾವಲಂಭನೆ ಬದುಕಿಗೆ ಬಹುದೊಡ್ಡ ಕೊಡುಗೆ ಆಕಾಶವಾಣಿ ನೀಡಿದೆ ಎಂದರು. 

ಕುವೆಂಪು ವಿಶ್ವವಿದ್ಯಾಲಯದ ಉಪ ಕುಲಸಚಿವ ಡಾ.ಕೆ.ಆರ್. ಮಂಜುನಾಥ್ ಮಾತನಾಡಿ ಎಲೆಮರೆಕಾಯಿಯಂತಿರುವ ಎಷ್ಟೋ ಪ್ರತಿಭೆಗಳಿಗೆ ಆಕಾಶವಾಣಿಯು ವೇದಿಕೆಯನ್ನು ಕೊಟ್ಟು ರಾಜ್ಯ ಮತ್ತು ರಾಷ್ಠçಮಟ್ಟದಲ್ಲಿ ಗುರುತಿಸುವುಕೊಳ್ಳು ವದರಲ್ಲಿ ಬಹು ದೊಡ್ಡ ಕೊಡುಗೆಯನ್ನು ನೀಡಿದೆ ಎಂದರು. 

ಇನ್ನು ಕೆಲವೇ ದಿನಗಳಲ್ಲಿ ಆಕಾಶ ವಾಣಿಯ ಪ್ರಸಾರಣ ಸಾಮರ್ಥ್ಯ, ಶಿವಮೊಗ್ಗದಲ್ಲಿ ಸ್ಥಾಪನೆಯಾಗುತ್ತಿರುವ 10ಕಿಲೊವ್ಯಾಟ್ ಸಾಮರ್ಥ್ಯದ ಎಫ್ ಎಂ ಟ್ರಾನ್ಸ್ಮಿಟ್ಟರ್ ನಿಂದಾಗಿ ಹೆಚ್ಚು ವ್ಯಾಪ್ತಿಯನ್ನು ತಲುಪಲು ಅವಿರತ ವಾಗಿ ಶ್ರಮಿಸುತ್ತಿರುವ ಸಂಸದ ಬಿ.ವೈ.ರಾಘವೇಂದ್ರರವರನ್ನು ನೆನಪಿಸಿಕೊಳ್ಳುತ್ತ, ಅವರ ಪಾತ್ರ ದೊಡ್ಡದು ಈ ಹಂತದಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸ ಲಾಗುತ್ತಿದೆ ಎಂದರು.

ಆಕಾಶವಾಣಿ ಭದ್ರಾವತಿ ಮತ್ತು ಚಿತ್ರದುರ್ಗ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಸುಬ್ರಾಯ ಆರ್ ಭಟ್ ತಿಳಿಸಿದರು. 

ವಿಶೇಷ ಆಹ್ವಾನಿತರಾಗಿ ಅಂಬೇಡ್ಕರ್ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ. ನೆಲ್ಲಿಕಟ್ಟೆ ಸಿದ್ದೇಶ್, ಶಿವಮೊಗ್ಗದ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಗೋಪಿನಾಥ್, ಪಿ.ಇ.ಎಸ್ ಸಮೂಹ ಸಂಸ್ಥೆಯ ಮುಖ್ಯ ಸಂಯೋಜಕ ಡಾ. ನಾಗರಾಜ್ ಆರ್, ಐ.ಎಂ.ಎ ಕಾರ್ಯದರ್ಶಿ ಹಾಗು ಸುಬ್ಬಯ್ಯ ಸಮೂಹ ಸಂಸ್ಥೆಯ ಸಿ.ಇ.ಒ ಡಾ. ವಿನಯ ಶ್ರೀನಿವಾಸ್ ಉಪಸ್ಥಿತರಿದ್ದರು. 

ಕಥಾ ಸ್ವರ್ಧೆಯಲ್ಲಿ ವಿಜೇತರಾದ ದೀಪ್ತಿ ಭದ್ರಾವತಿ, ಕೆ.ಎಂ.ಶ್ರೇಯ ಹಾಗೂ ಸಂತೆಬೆನ್ನೂರು ಫೈಜ್‌ನಟ್ರಾಜ್ ಮತ್ತು ಪಾಕಸ್ಪರ್ಧೆಯಲ್ಲಿ ವಿಜೇತರಾದ ಗಿರಿಜಾ ಹೆಗಡೆ, ಎಂ.ಎನ್.ಸುಶೀಲ, ಡಾ. ಮೈತ್ರೇಯಿ ಅವರಿಗೆ ಪ್ರಶಸ್ತಿ ಪತ್ರವನ್ನು ನೀಡಲಾಯಿತು. ಇದೇ ಸಂದರ್ಭದಲ್ಲಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್.ಚಾಂದ್‌ವಾನಿ, ಮತ್ತು ಮುಖ್ಯಮಹಾ ಪ್ರಭಂಧಕ ಸ್ತಾವರ ಕೆ.ಎಸ್. ಸುರೇಶ್, ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಮಾನವ ಸಂಪನ್ಮೂಲ ಮಹಾ ಪ್ರಬಂಧಕ ಎಲ್.ಪ್ರವೀಣ್‌ಕುಮಾರ್, ಮಹಾಪ್ರಭಂಧಕರು, ಪರಿಸರ ವಿಭಾಗ ಮುತ್ತಣ್ಣ ಸುಬ್ಬರಾವ್ ಹಾಗು ಸಹಾಯಕ ಮಹಾಪ್ರಭಂಧಕ ವಿಕಾಸ್ ಬಸೀರ್ ಮತ್ತು ಇತರ ಸಿಬ್ಬಂದಿ ವರ್ಗದವರು, 60ವರ್ಷದ ಸವಿನೆನಪಿಗೆ 60 ಸಸಿಗಳನ್ನು ವಿತರಿಸಿದರು.
 ಆಕಾಶವಾಣಿ ಕೇಂದ್ರದಲ್ಲಿ ನಿವೃತ್ತ ಹೊಂದಿದವರಿಗೆ ಮತ್ತು ಹಾಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂಧಿವರ್ಗ ದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ರಾಜ್ಯದ ಬೇರೆ ಬೇರೆ ಭಾಗಗಳಿಂದ ಆಗಮಿಸಿದ ಕೇಳುಗರು ತಮ್ಮ ಅಭಿಪ್ರಾಯ ಗಳನ್ನು ಹಂಚಿಕೊoಡರು.

ಶೋಭ ಮತ್ತು ತಂಡದವರಿoದ ಸ್ವಾಗತಗೀತೆ ಯೊಂದಿಗೆ ಆರಂಭಿಸಿದರೆ, ಕಾರ್ಯಕ್ರಮ ಅಧಿಕಾರಿ ಎಸ್.ಎಲ್. ರಮೇಶ್‌ಪ್ರಸಾದ್ ಸ್ವಾಗತಿಸಿದರು. ಡಾ.ಗಣೇಶ್ ಆರ್ ಕೆಂಚನಾಳ ಪ್ರಾಸ್ತವಿಕ ನುಡಿಗಳನ್ನಾಡಿದರೆ, ಶಕೀಲ್ ಅಹ್ಮದ್ ಮತ್ತು ಮೀನ ನಿರೂಪಿಸಿ ದರು. ಆಕಾಶವಾಣಿಯ ಎಲ್ಲಾ ಸಿಬ್ಬಂದಿ ವರ್ಗದವರು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು