ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಪರಿಸರವನ್ನು ಅದರ ಪಾಡಿಗೆ ಬಿಟ್ಟರೆ ಸಾಕು ಪರಿಸರ ಸಂರಕ್ಷಣೆ ಆಗುತ್ತದೆ. ಹಂತ ಹಂತವಾಗಿ ಪ್ಲಾಸ್ಟಿಕ್ ಉಪಯೋಗ ಕಡಿಮೆ ಯಾಗಬೇಕು, ಹೆಚ್ಚು ಸಸಿ ನೆಡಬೇಕು ನೆಟ್ಟ ಗಿಡಗಳಿಗೆ ನೀರು ಎರೆದು ಕಾಪಾಡಬೇಕು ಎಂದು ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಡಾ.ಹರಿಣಾಕ್ಷಿ ಹೇಳಿದರು.
ಅವರು ಶನಿವಾರ ಅರಳಿಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಕೋ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪರಿಸರ ಸಮತೋಲನ ಮತ್ತು ಕಾಪಾಡುವಿಕೆಯ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳ ನೇರ ಪಾತ್ರ ಎಂಬ ವಿಷಯದ ಬಗ್ಗೆ ಮಾತನಾಡಿದರು.
ಶಾಲಾ ವಿದ್ಯಾರ್ಥಿಗಳಿಗೆ ಗಿಡಗಳನ್ನು ನೆಡುವ ಜವಾಬ್ದಾರಿ ನೀಡಲಾಯಿತು. ಮುಖ್ಯ ಶಿಕ್ಷಕ ಎಂ.ದಿವಾಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಕಾಶ್ ಮತ್ತಿತರರು ಇದ್ದರು.ವಿದ್ಯಾರ್ಥಿಗಳು ಪರಿಸರ ಗೀತೆ ಹಾಡಿದರು.ರೇಣುಕಾ ಸ್ವಾಗತಿಸಿ, ಪಲ್ಲವಿ ನಿರೂಪಿಸಿದರೆ, ರಂಗರಾಜು ವಂದಿಸಿದರು. ಸಂಚಾಲಕ ಶಿಕ್ಷಕಿಯರಾದ ರೇಣುಕಾ, ಸುಮಿತ್ರಾ, ಪಲ್ಲವಿ ಮತ್ತಿತರರಿದ್ದರು.