ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ವಿಐಎಸ್‌ಎಲ್ ಕಾರ್ಖಾನೆ ಯಲ್ಲಿ ಮಹಿಳೆಯರಿಗೆ ಪ್ರೋತ್ಸಾಹ ಮತ್ತು ಸಹಕಾರ ನೀಡುವ ಮೂಲಕ ತಮ್ಮ ಸಾಮಾರ್ಥ್ಯವನ್ನು ಪ್ರದರ್ಶಿಸು ವಲ್ಲಿ ಸಹಕಾರಿಯಾಗಿದೆ ಎಂದು ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್.ಚಂದ್ವಾನಿ ಅಭಿಪ್ರಾಯ ವ್ಯಕ್ತ ಪಡಿಸಿದರು.
ಅವರು ನಗರದ ಸೈಲ್-ವಿಐಎಸ್‌ಎಲ್ ನಲ್ಲಿ ಶನಿವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಾರ್ಖಾನೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
ಮಹಿಳೆಯರು ಮತ್ತು ಬಾಲಕಿಯರ ಹಕ್ಕುಗಳು, ಸಮಾನತೆ ಮತ್ತು ಸಬಲತೆ ಎಂಬ ಧ್ಯೇಯದೊಂದಿಗೆ ಮಹಿಳಾ ಸಮುದಾಯದ ಪ್ರಮುಖ ಸಾಧನೆ ಗಳನ್ನು ಪ್ರಸ್ತಾಪಿಸುತ್ತಾ ಸಮಾಜಕ್ಕೆ ಮತ್ತು ಕಾರ್ಖಾನೆಗೆ ಅವರ ಕೊಡುಗೆ ಶ್ಲಾಘಿಸಿದರು.
ಮುಖ್ಯ ಮಹಾಪ್ರಬಂಧಕರು (ಸ್ಥಾವರ) ಕೆ.ಎಸ್. ಸುರೇಶ್, ಮಹಾಪ್ರಬಂಧ ಕರು (ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧ ಕರು (ಹಣಕಾಸು) ಶೋಭ ಶಿವಶಂಕರನ್, ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ, ಅಧಿಕಾರಿಗಳ ಸಂಘದ ಅಧ್ಯಕ್ಷ ಪಾರ್ಥಸಾರಥಿ ಮಿಶ್ರಾ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶೋಭ ಶಿವಶಂಕರನ್ ಮತ್ತು ಜೆ.ಜಗದೀಶ್ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಡಾ: ಸುಶ್ಮಾ, ಡಾ: ಶೋಭ,ಅಪರ್ಣ, ನಾಗರತ್ನ, ಅಮೃತಾ, ರಕ್ಷಿತಾ, ಕುಸುಮ, ಪ್ರೇಮ ಭಾಯಿ, ಗಿರಿಜಾ, ಅಮಿತಾ, ಮಂಜುಶ್ರೀ, ರಮ್ಯ, ಮತ್ತು ತ್ರಿವೇಣಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಮಹಿಳಾ ಉದ್ಯೋಗಿಗಳಿಗೆ, ಮಹಿಳಾ ಗುತ್ತಿಗೆ ಕಾರ್ಮಿಕರಿಗೆ ಮಾ: 5 ರಂದು ಆಯೋಜಿಸ ಲಾಗಿದ್ದ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಗಣ್ಯರಿಂದ ಪ್ರಶಸ್ತಿ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಉಚಿತವಾಗಿ ಹೈಬ್ರೀಡ್ ತಳಿಯ ಪಪಾಯ ಮತ್ತು ನುಗ್ಗೆ ಸಸಿಗಳನ್ನು ಮಹಿಳಾ ಕಾರ್ಮಿಕರು ವಿತರಿಸಲಾಯಿತು.
ಸಿಬ್ಬಂದಿ, ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳು ಕಾರ್ಯಕ್ರಮವನ್ನು ಆಯೋಜಿಸಿದ್ದವು. ಆಸ್ಪತ್ರೆಯ ವೈಧ್ಯಾಧಿಕಾರಿ ಡಾ:ಶೋಭ ನಿರೂಪಿಸಿದರು.