ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ತಾಲೂಕಿನ ಕೂಡ್ಲಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನೂತನವಾಗಿ 12 ಜನರು ಆಯ್ಕೆ ಯಾಗಿದ್ದು, ಚುನಾವಣಾಧಿಕಾರಿ ಫಲಿತಾಂಶ ಘೋಷಿಸಿದ್ದಾರೆ.
ಕೂಡ್ಲಿಗೆರೆ ಗ್ರಾಮದ ಎಂ. ಪರಮೇಶ್ವರಪ್ಪ, ಜಿ.ಆರ್ ಪಂಚಾಕ್ಷರಿ, ಕಲ್ಪನ ಹಳ್ಳಿ ಗ್ರಾಮದ ಮಹೇಶ್ವರ ನಾಯ್ಕ, ಅರಳಿ ಹಳ್ಳಿ ಗ್ರಾಮದ ಕೆ.ಎಚ್ ರಾಜ್‌ಕುಮಾರ್ ಮತ್ತು ಕೋಡಿಹಳ್ಳಿ ಗ್ರಾಮದ ಜಿ.ಆರ್ ಸಿದ್ದೇಶಪ್ಪ ಸಾಲಗಾರರ ಕ್ಷೇತ್ರ ಸಾಮಾನ್ಯ ಸ್ಥಾನದಿಂದ ಆಯ್ಕೆ ಯಾಗಿದ್ದು, ಅರಳಿಹಳ್ಳಿ ಗ್ರಾಮದ ರಾಜಪ್ಪ ಸಾಲಗಾರರ ಕ್ಷೇತ್ರ ಹಿಂದುಳಿದ ವರ್ಗ (ಪ್ರವರ್ಗ ಎ) ಮತ್ತು ಕೂಡ್ಲಿಗೆರೆ ಗ್ರಾಮದ ಆರ್. ಎನ್. ರುದ್ರೇಶ್ ಸಾಲಗಾರರ ಕ್ಷೇತ್ರ ಹಿಂದುಳಿದ ವರ್ಗ (ಪ್ರವರ್ಗ ಬಿ) ಸ್ಥಾನದಿಂದ ಆಯ್ಕೆಯಾಗಿದ್ದಾರೆ.
ಅರಳಿಹಳ್ಳಿ ಗ್ರಾಮದ ಗಿರಿಜಮ್ಮ ಮತ್ತು ಕೂಡ್ಲಿಗೆರೆ ಗ್ರಾಮದ ವಿಜಯಲಕ್ಷ್ಮೀ ಬಾಯಿ ಸಾಲಗಾರರ ಕ್ಷೇತ್ರ ಮಹಿಳಾ ಮೀಸಲು ಸ್ಥಾನದಿಂದ ಹಾಗು ಕೂಡ್ಲಿಗೆರೆ ಗ್ರಾಮದ ಎಸ್. ವೆಂಕಟೇಶ್ ಸಾಲಗಾರರ ಕ್ಷೇತ್ರ ಪರಿಶಿಷ್ಟ ಜಾತಿ ಮತ್ತು ಬಸಲಿಕಟ್ಟೆ ಗ್ರಾಮದ ಆರ್. ಶಿವಣ್ಣ ಸಾಲಗಾರರ ಕ್ಷೇತ್ರ ಪರಿಶಿಷ್ಟ ಪಂಗಡ ಹಾಗು ಕೂಡ್ಲಿಗೆರೆ ಗ್ರಾಮದ ತಿಪ್ಪೇಸ್ವಾಮಿ ಸಾಲಗಾರ ರಲ್ಲದ ಕ್ಷೇತ್ರ ಸಾಮಾನ್ಯ ಸ್ಥಾನದಿಂದ ಆಯ್ಕೆಯಾಗಿದ್ದಾರೆ.
ಸಹಕಾರ ಸಂಘದ ಆಡಳಿತ ಮಂಡಳಿಗೆ ಡಿ.28, 2024ರಂದು ಚುನಾವಣೆ ನಡೆದಿದ್ದು, ಆದರೆ ಫಲಿತಾಂಶಕ್ಕೆ ರಾಜ್ಯ ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಅಂತಿಮವಾಗಿ ಫಲಿತಾಂಶ ಘೋಷಿಸುವಂತೆ ಆದೇಶ ಹೊರಡಿಸಿರುವ ಹಿನ್ನಲೆಯಲ್ಲಿ ಚುನಾವಣಾಧಿಕಾರಿ ಮಮತ ಫಲಿತಾಂಶ ಘೋಷಿಸಿದರು.