ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಈ ಸಾರಿಯ ಬಜೆಟ್ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ರಮೇಶ್ ಶೆಟ್ಟಿ ಶಂಕರ ಘಟ್ಟ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯದ ಸರ್ವತೋಮುಖ ಅಭಿವೃದ್ದಿಯ ಮುನ್ನೋಟದೊಂದಿಗೆ ಸಿದ್ದಪಡಿಸಿರುವ ಈ ಬಜೆಟ್, ಸಿಎಂ ಬಜೆಟ್ ಮಂಡನೆ ವೇಳೆ ವ್ಯಕ್ತಪಡಿಸಿ ರುವ ಆಶಯದಂತೆ, ಮುಂದಿನ ಒಂದು ವರ್ಷಗಳ ಕಾಲ ಕರ್ನಾಟಕವನ್ನು ಸಶಕ್ತಿ,ಸಮೃದ್ಧಿ, ಸ್ವಾವಲಂಬನೆಯ ಹಾದಿಯಲ್ಲಿ ಮುನ್ನಡೆಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಅವರು, ಆರ್ಥಿಕತೆಯ ಹರಿಕಾರ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಹೆಸರನ್ನು ಬೆಂಗಳೂರು ವಿವಿ ಗೆ ಪುನರ್ ನಾಮಕರಣ ಮಾಡುತ್ತಿರು ವುದು ಸ್ವಾಗತಾರ್ಹ ವಿಚಾರ ಎಂದಿದ್ದಾರೆ.