ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ನಗರದ ನ್ಯೂ ಕಾಲೋನಿ ಯ ಜೀವಸ್ವರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹುಡ್ಕೋಕಾಲೋನಿಯ ಸರ್.ಎಂ. ವಿಶ್ವೇಶ್ವರಾಯ ಪ್ರೌಢಶಾಲೆ ಹಾಗೂ ಹಿರಿಯೂರಿನ ಎಸ್ ಜಿಎಂಎಂ ಆರ್ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಶುಕ್ರವಾರ ಪೆನ್ನು, ಪರೀಕ್ಷಾ ರೊಟ್, ಜಾಮಿಟ್ರಿ ಬಾಕ್ಸ್ ಗಳನ್ನು ನೀಡಲಾಯಿತು.
ಜೀವಸ್ವರ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರು ಹಾಗೂ ನಗರಸಭಾ ಮಾಜಿ ಸದಸ್ಯ ಫ್ರಾನ್ಸಿಸ್ ನೇತೃತ್ವವಹಿಸಿದ್ದರು.
ಟ್ರಸ್ಟ್ ಉಪಾಧ್ಯಕ್ಷರಾದ ದಾಸ್, ಸೆಲ್ವರಾಜ್, ಕೆಂಪರಾಜು, ಡ್ಯಾನಿಯಲ್, ಅಪ್ಪು ಉಪನ್ಯಾಸಕ ಸೋಮಶೇಖರ್, ನಗರ ಯೂತ್ ಕಾಂಗ್ರೆಸ್ ಅಧ್ಯಕ್ಷ ಅಭಿ ಪ್ರಮುಖರಾದ ಪ್ರಸನ್ನ,ಜ್ಯೋತಿ ಪ್ರಸಾದ್, ಪ್ರಮೋದ್, ಶಾಮ್ ಉಪಸ್ಥಿತರಿದ್ದರು.