ಸುರಪುರ-ಸಣ್ಣ ಮಕ್ಕಳೂ ಹೆಲ್ಮೆಟ್ ಧರಿಸಬೇಕು: ಪಿಎಸ್ಐ ಸಿದ್ದಣ್ಣ ಯಡ್ರಾಮಿ

ವಿಜಯ ಸಂಕಷ್ಟ ನ್ಯೂಸ್ 

ಸುರಪುರ: ರಸ್ತೆಯಲ್ಲಿ ಸಂಚರಿಸುವಾಗ ಸಂಚಾರಿ ನಿಯಮಗಳನ್ನು ಪಾಲಿಸದೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಅದರಲ್ಲೂ ವಿಶೇಷವಾಗಿ ಅಪಘಾತ ಗಳಲ್ಲಿ ಮಕ್ಕಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ವಾಹನ ಚಲಾಯಿಸು ವಾಗ ಕಡ್ಡಾಯವಾಗಿ ಹೆಲ್ಮೆಟ್  ಧರಿಸಬೇಕು ಜೊತೆಗೆ ಚಿಕ್ಕ ಮಕ್ಕಳಿಗೂ ಹೆಲ್ಮೆಟ್ ಧರಿಸಿ ಅವರ ಜೀವ ಕಾಪಾಡಿ ಎಂದು ಸುರಪುರ ಠಾಣೆಯ ಪಿಎಸ್ ಐ ಸಿದ್ದಣ್ಣ ಯಡ್ರಾಮಿ ಕರೆ ನೀಡಿದರು.


ಸುರಪುರ ನಗರದ ಗಾಂಧಿ ವೃತ್ತದ ಬಳಿ ಜಾಗೃತಿ ಕಾರ್ಯಕ್ರಮ ನಡೆಸಿ ಮಾತನಾಡಿದ ಅವರು, ರಸ್ತೆಯಲ್ಲಿ ಸಂಚರಿಸುವಾಗ ಸಂಚಾರಿ ಸೂಚನಾ ಫಲಕಗಳನ್ನು ಆಧರಿಸಿ ವಾಹನ ವನ್ನು ಚಲಾಯಿಸಿ,ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ವಾಹನ ಚಲಾಯಿಸು ವಾಗ ಹೆಲ್ಮೆಟ್ ಧರಿಸಿ,ಯಾವುದೇ ಕಾರಣಕ್ಕೂ ಅತಿ ವೇಗ ಆಲಕ್ಷತನ ದಿಂದ ವಾಹನವನ್ನು ಚಲಾಯಿಸ ಬೇಡಿ,ಕುಡಿದು ವಾಹನವನ್ನು ಚಲಾಯಿಸಬೇಡಿ, ಅಪ್ರಾಪ್ತ ವಯಸ್ಸಿನ ಮಕ್ಕಳ ಕೈಯಲ್ಲಿ ವಾಹನವನ್ನು ಕೊಡಬೇಡಿ, ರಸ್ತೆ ತಿರುವುಗಳಿದ್ದಲ್ಲಿ ಎಡ ಬಲ ನೋಡಿ ವಾಹನವನ್ನು ಚಲಾಯಿಸಿ, ಶಾಲೆ ಆಸ್ಪತ್ರೆ ಇರುವ ರಸ್ತೆಯಲ್ಲಿ ವಾಹನವನ್ನು ನಿಧಾನವಾಗಿ ಚಲಾಯಿಸಿ, ತ್ರಿಬಲ್ ರೈಡಿಂಗ್ ಮಾಡಬಾರದು ಎಂದರು.

ಇನ್ನು ಮೊಬೈಲ್ ನಲ್ಲಿ ಮಾತಾಡುತ್ತಾ ಬೈಕ್ ಚಲಾಯಿಸಿಬಾರದು,ನಾಲ್ಕು ಚಕ್ರದ ವಾಹನಗಳನ್ನು ಚಲಾಯಿಸು ವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕು, ಸವಾರರು ಕಡ್ಡಾಯವಾಗಿ ಚಾಲನ ಪತ್ರ ವಾಹನ, ನೋಂದಣಿ ಪತ್ರ ವಾಹನ ವಿಮಾ ಪತ್ರ, ವಾಹನ ಎಮಿಷನ್ ಪರೀಕ್ಷೆ ಪತ್ರ ಇಟ್ಟು ಕೊಂಡಿರಬೇಕು. ಅವಸರವೇ ಅಪಘಾತಕ್ಕೆ ಕಾರಣವಾಗಿದ್ದು, ನಿಧಾನ ವಾಗಿ ಚಲಾಯಿಸಿ ಸುರಕ್ಷತೆಯಿಂದ ತಮ್ಮ ಮನೆಗೆ ತಲುಪಿ ಎಂದರು.

ಈ ಸಂದರ್ಭದಲ್ಲಿ ಎಎಸ್ಐ ಮಾನಪ್ಪ ಶಾರದಳ್ಳಿ ಎಎಸ್ಐ ಬೀರಪ್ಪ,ಮುಖ್ಯ ಪೇದೆಗಳಾದ ಶಿವರಾಜ್ ಪಾಣೆಗಾವ್, ಬಸವರಾಜ್ ಮುದುಗಲ್, ಪೊಲೀಸ್ ಪೇದೆಗಳಾದ ಸುರೇಶ್ ಕದಂ, ಹುಸೇನ್ ಬಾಷಾ,ಲಕ್ಷ್ಮಣ್ ಹಣಮಂತ ರಾಯ, ದಯಾನಂದ ಜಮಾದಾರ್, ಮಹಿಳಾ ಪೇದೆ  ಲತಾ ಸೇರಿದಂತೆ ಹಲವರು ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

✍️ವರದಿ ಶಿವು ರಾಠೋಡ್

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು