ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಶಿವಮೊಗ್ಗ ಹಾಗೂ ಭದ್ರಾವತಿ ಘಟಕದಿಂದ ಶಿವಮೊಗ್ಗ-ಭದ್ರಾವತಿ ವಯಾ ಸಿದ್ದಾಪುರ, ಮಿಲ್ಟ್ರಿಕ್ಯಾಂಪ್, ಜಯಶ್ರೀ ಸರ್ಕಲ್ ಮಾರ್ಗವಾಗಿ ನಗರ ಸಾರಿಗೆ ಬಸ್ ಗಳನ್ನು ಕಾರ್ಯಾಚರಣೆ ಮಾಡಲಾ ಗುತ್ತಿದ್ದು, ಪ್ರಯಾಣಿಕರು ಈ ಸಾರಿಗೆಯ ಪ್ರಯೋಜನವನ್ನು ಪಡೆದು ಕೊಳ್ಳುವಂತೆ ವಿಭಾಗೀಯ ನಿಯಂತ್ರ ಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದ ಕಡದಕಟ್ಟೆಯ ರೈಲ್ವೆ ಮೇಲ್ಸೇತುವೆಯ ಕಾಮಗಾರಿ ಹಿನ್ನಲೆ ಯಲ್ಲಿ ಕಳೆದ ಮೂರು ವರ್ಷಗಳಿಂದ ಸಿದ್ದಾಪುರದ ಮೇಲೆ ನಗರ ಸಂಚಾರಿ ಬಸ್ ಗಳು ನಗರವನ್ನ ಪ್ರವೇಶಿ ಸುತ್ತಿತ್ತು. ಇದರಿಂದ ಹುಡ್ಕೋ, ಕಾಗದ ನಗರ, ಮಿಲ್ಟ್ರಿಕ್ಯಾಂಪ್, ಬುಳ್ಳಾಪುರ, ನ್ಯೂಟೌನ್ ಸೇರಿದಂತೆ ಸುತ್ತ ಮುತ್ತಲಿನ ಪ್ರದೇಶಗಳಿಂದ ಸಂಚಾರ ಮಾಡುತ್ತಿದ್ದ ನೂರಾರು ವಿದ್ಯಾರ್ಥಿ ಗಳಿಗೆ, ಸಾರ್ವಜನಿಕರಿಗೆ ಜನರಿಗೆ ಅನುಕೂಲವಾಗಿತ್ತು.
ಈಗ ಕಡದಕಟ್ಟೆ ರೈಲ್ವೆ ಮೇಲ್ಸೇತುವೆ ಉದ್ಘಾಟನೆಗೊಂಡ ಕಾರಣ ಎಲ್ಲಾ ಸಾರಿಗೆ ಸಂಸ್ಥೆ ಬಸ್ ಗಳು ಮತ್ತು ನಗರ ಸಂಚಾರಿ ಬಸ್ ಗಳು ಈ ಮಾರ್ಗವಾಗಿ ನಗರ ಪ್ರವೇಶಿಸುತ್ತಿದೆ. ಅಲ್ಲದೆ ಈ ಭಾಗದ ಹಲವರು ಸಂಬಂಧಿತ ಇಲಾಖೆಗೆ ಮನವಿ ಮಾಡಲಾಗಿತ್ತು.
ಈ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಸಿದ್ದಾಪುರದ ಮೇಲೆ ಸಂಚರಿಸುವರಿಗೆ ತೊಂದರೆ ಆಗದಂತೆ ನಾಲ್ಕು ಬಸ್ ಗಳನ್ನ ಸಂಸ್ಥೆ ಸಂಚರಿಸಲು ಅನುವು ಮಾಡಿಕೊಟ್ಟಿದೆ. ನಾಳೆಯಿಂದ ಈ ನಾಲ್ಕು ಬಸ್ ಗಳು ಅಧಿಕೃತವಾಗಿ ಸಂಚರಿಸಲಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಆತ್ಮೀಯರೇ ಸಾರಿಗೆ ಡಿಪೋದವರಿಗೆ ಈ ಮೂಲಕ ಧನ್ಯವಾದಗಳು ಹೇಳಬಹುದಲ್ಲವೇ 🙏 ಸಕಾಲಿಕ ಹಾಗೂ ಉತ್ತಮ ವರದಿಯನ್ನು ನೀಡಿದ್ದಕ್ಕೆ ಸಾರ್ವಜನಿಕವಾಗಿ ತಿಳುವಳಿಕೆಯನ್ನು ಮೂಡಿಸಿದ್ದಕ್ಕೆ ವಿಜಯ ಸಂಘರ್ಷ ಅಭಿನಂದನೀಯ
ಪ್ರತ್ಯುತ್ತರಅಳಿಸಿJnb 🙋♂️