ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರದ ಶ್ರೀ ತಿರುಮಲ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಜಯಂತಿ ಹಾಗೂ ಸ್ವಯಂ ನಿವೃತ್ತಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರ ಹುಟ್ಟು ಹಬ್ಬದ ಪ್ರಯುಕ್ತ ಕಾಗದ ನಗರದ ಪಶ್ಚಿಮ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ, ಪೆನ್ಸಿಲ್, ಪೆನ್ ವಿತರಿಸಲಾಯಿತು.
ನಂತರ ಈ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸ ಲಾಯಿತು.ಇದೆ ಸಂದರ್ಭದಲ್ಲಿ ಸರ್ಕಾರಿ ಶಾಲೆಯಲ್ಲಿ 10 ಸಸಿಗಳನ್ನು ನೆಡುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸ ಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಸಂಪನ್ಮೂಲ ವ್ಯಕ್ತಿ ದಯಾನಂದ್, ಚೆನ್ನಪ್ಪ , ಪೇಪರ್ ಟೌನ್ ಪೊಲೀಸ್ ಠಾಣೆಯ ಪಿಎಸ್ಐ ಕವಿತಾ,ಎಎಸ್ಐ ಕೃಷ್ಣಮೂರ್ತಿ, ಹಸಿರು ಯೋಧ ಟ್ರಾಫಿಕ್ ಹೆಡ್ ಕಾನ್ಸ್ ಟಬಲ್ ಹಾಲೇಶಪ್ಪ, ಮುಖ್ಯ ಶಿಕ್ಷಕರು ಸೇರಿದಂತೆ ಶಿಕ್ಷಕರು ಮತ್ತಿತರಿದ್ದರು.
ಹೋಮ್ ಆಫ್ ಹೋಮ್ ಜನಸ್ನೇಹಿ ಆಶ್ರಮದ ರಾಜು ನಾಯಕ್ ಕನ್ನಡಿಗ ತಿರುಮಲ ಫೌಂಡೇಶನ್ ಸಂಸ್ಥಾಪಕ ಪ್ರಶಾಂತ್, ವಿಜಯ್, ತೀರ್ಥೇಶ್, ಶರತ್, ರಂಗಸ್ವಾಮಿ,ಎಂ.ಡಿ. ಸಲ್ಮಾನ್, ಅಮ್ಜದ್, ಶಶಿ, ಯೋಗಿ ಮತ್ತಿತರಿದ್ದರು.
ಈ ರೀತಿಯಾಗಿ ಇನ್ನಿತರ ಸರ್ಕಾರಿ ಶಾಲೆಗಳ ಬಡ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಚಾಚಲು ದಾನಿಗಳ ಸಹಾಯಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಿದ್ದು, ಬದಲಾವಣೆ ಬಯಸು ವರು ಟ್ರಸ್ಟ್ ನೊಂದಿಗೆ ಕೈ ಜೋಡಿಸಲು ತಿರುಮಲ ಫೌಂಡೇಶನ್ ಸಂಸ್ಥಾಪಕ ಪ್ರಶಾಂತ್ ಮೊಬೈಲ್ ಸಂಖ್ಯೆ +91 99018 22925 ಸಂಪರ್ಕಿಸಲು ಮನವಿ ಮಾಡಿದ್ದಾರೆ.