ಕರವೇ ಬಲವರ್ಧನೆಗೆ ಹಿರಿಯರ ಸಹಕಾರ ದಲ್ಲಿ ನಡೆಯುವೆ: ಎಸ್.ವೆಂಕಟೇಶ್

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಕರ್ನಾಟಕ ರಕ್ಷಣಾ ವೇದಿಕೆ ಯ (ಟಿ.ಎ.ನಾರಾಯಣ ಗೌಡ ಬಣ) ತಾಲ್ಲೂಕಿನ ನೂತನ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ತಾಲೂಕಿನ ನೂತನ ಅಧ್ಯಕ್ಷ ಎಸ್.ವೆಂಕಟೇಶ್ ಮಾತನಾಡಿ, ವೇದಿಕೆಯ ಬಲವರ್ಧನೆಗೆ ಸಂಘಟನೆ ಯ ಮುಖ್ಯಸ್ಥರು, ಹಿರಿಯರ ಮಾರ್ಗ ದರ್ಶನದಲ್ಲಿ ಸ್ನೇಹಿತರ ಸಹಕಾರ ಪಡೆದು ಸಂಘಟಿಸುವಲ್ಲಿ ಶ್ರಮಿಸುವುದಾಗಿ ತಿಳಿಸಿದ ಅವರು ನೂತನ ಪದಾಧಿಕಾರಿಗಳನ್ನು ಬರಮಾಡಿಕೊಂಡರು.
ಇದೆ ಸಂದರ್ಭದಲ್ಲಿ ತಾಲೂಕು ಮಾಧ್ಯಮ ಸಂಚಾಲಕ ಎಚ್ ವೈ. ಸುರೇಂದ್ರ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರಾದ, ಶ್ರೀನಿವಾಸ್, ಚಂದ್ರಪ್ಪ, ಮಂಜುನಾಥ್, ಯಶವಂತ ಸೇರಿದಂತೆ ಅನೇಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ತಾಲೂಕು ಮಹಿಳಾ ಅಧ್ಯಕ್ಷೆ ಮಹೇಶ್ವರಿ, ಜಿಲ್ಲಾ ಪ್ರಮುಖರಾದ ಶೈಲೇಶ್, ಲೀಲಾವತಿ, ಪ್ರಶಾಂತ್, ತಾಲೂಕ್ ಮಹಿಳಾ ಅಧ್ಯಕ್ಷೆ ಜಾನವಿ, ರೂಪ ನಾಗರಾಜ್, ಚಂದನ, ಕಲಾವತಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು