ಭದ್ರಾವತಿ-ಕನ್ನಡ,ನೆಲ,ಜಲ ಸಂರಕ್ಷಣೆಗೆ ಯುವಕರು ಮುಂದಾಗಿ: ಮಧು

ವಿಜಯ ಸಂಘರ್ಷ ನ್ಯೂಸ್ 

ಭದ್ರಾವತಿ: ಕನ್ನಡ,ನೆಲ,ಜಲ ಸಂರಕ್ಷ ಣೆಗೆ ಯುವಕರು ಮುಂದಾಗಿ ಎಂದು ಕರ್ನಾಟಕ ರಕ್ಷಣಾ ವೇದಿಕೆಯ (ಟಿ.ಎ.ನಾರಾಯಣ ಗೌಡ ಬಣ) ರಾಜ್ಯ ಸಹ ಕಾರ್ಯದರ್ಶಿ ಮಧು ಕರೆ ನೀಡಿದರು. 

ಗುರುವಾರ ನಗರದ ಖಾಸಗಿ ಹೋಟೆಲ್ ನಲ್ಲಿ ನೂತನ ಕಾರ್ಯಕರ್ತ ರ ಸೇರ್ಪಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 

ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡರು ರಾಜ್ಯದ ನೆಲ ಜಲ ಸಂರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಜಲ ನೆಲದ ವಿಚಾರದಲ್ಲಿ ಹೋರಾಟ ನಡೆಸಿ ಅನೇಕ ಬಾರಿ ಸೆರೆಮನೆಯ ಕಹಿ ಅನುಭವ ಹೊಂದಿದ್ದಾರೆ. ದೃತಿಗೆಡದೆ ರಾಜ್ಯ ವ್ಯಾಪ್ತಿಯಲ್ಲಿ ಯುವಕರ ಸಂಘಟನೆಯಲ್ಲಿ ತೊಡಗಿದ್ದಾರೆ ಎಂದರು. 

ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಡಾ.ಜ್ಯೋತಿ ಸೋಮಶೇಖರ್ ಮಾತನಾಡಿ, ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡರ ನೇತೃತ್ವದ ಕರವೇ ಬಲಿಷ್ಠ ಸಂಘಟನೆಯಾಗಿದ್ದು ರಾಜ್ಯದಲ್ಲಿಡೆ, ಮಹಿಳೆಯರು ಯುವಕ ಯುವತಿಯರು, ಸಾಗರ ಪಾದಿಯಲ್ಲಿ ಸಂಘಟನೆಗೆ ಸೇರ್ಪಡೆ ಯಾಗುತ್ತಿರು ವುದು ಸ್ವಾಗತಾರ್ಹಎಂದರು.

ತಾಲ್ಲೂಕಿನ ನೂತನ ಅಧ್ಯಕ್ಷ ಎಸ್ ವೆಂಕಟೇಶ್ ಸೇರ್ಪಡೆ ಕಾರ್ಯಕ್ರಮ ದಲ್ಲಿ ಯುವಕ-ಯುವತಿಯರ ಬೃಹತ್ ಸೇರ್ಪಡೆ ಸಂತಸ ತಂದಿದೆ. ಸಂಘಟನೆ ಬಲವರ್ಧನೆಗೆ ಶ್ರಮಿಸಲು ಮುಂದಾಗುವಂತೆ ಕರೆ ನೀಡಿದರು. 

ತಾಲೂಕಿನ ನೂತನ ಅಧ್ಯಕ್ಷ ಎಸ್. ವೆಂಕಟೇಶ್ ಮಾತನಾಡಿ, ರಕ್ಷಣಾ ವೇದಿಕೆ ಸಿದ್ದಾಂತಗಳ ಒಪ್ಪಿ ಸೇರ್ಪಡೆ ಗೊಳ್ಳಲಾಗಿದೆ. ವೇದಿಕೆಯ ಬಲ ವರ್ಧನೆಗೆ ಸಂಘಟನೆಯ ಮುಖ್ಯಸ್ಥರು, ಹಿರಿಯರ ಮಾರ್ಗದರ್ಶನದಲ್ಲಿ ಸ್ನೇಹಿತರ ಸಹಕಾರ ಪಡೆದು ಸಂಘಟಿಸುವಲ್ಲಿ ಶ್ರಮಿಸುವುದಾಗಿ ತಿಳಿಸಿದರು. 

ಜಿಲ್ಲಾಧ್ಯಕ್ಷ ಕೇಬಲ್ ಮಂಜು ಮಾತನಾಡಿದರು. ಇದೆ ಸಂದರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ಮಹಿಳೆಯರು, ಯುವಕರು, ಯುವತಿಯರು ಸೇರ್ಪಡೆ ಗೊಂಡರು. 

ತಾಲೂಕು ಮಹಿಳಾ ಅಧ್ಯಕ್ಷೆ ಮಹೇಶ್ವರಿ, ಜಿಲ್ಲಾ ಉಪಾಧ್ಯಕ್ಷ ಶೈಲೇಶ್,ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಲೀಲಾವತಿ,ಶಿವಮೊಗ್ಗ ತಾಲೂಕ ಅಧ್ಯಕ್ಷ ಪ್ರಶಾಂತ್, ತಾಲೂಕ್ ಮಹಿಳಾ ಅಧ್ಯಕ್ಷೆ ಜಾನವಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರೂಪ ನಾಗರಾಜ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಂದನ, ನಗರ ಅಧ್ಯಕ್ಷೆ ಕಲಾವತಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು