ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ಪಟ್ಟಣದ ಕೆಎಸ್ಆ ರ್ಟಿಸಿ ಡಿಪೋ ಆವರಣದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಸುದೀರ್ಘ 30 ವರ್ಷಗಳ ಕಾಲ ಸೇವೆ ಸಲ್ಲಿಸಿ *ನಿವೃತ್ತಗೊಂಡ* ಡಿ.ಜಿ ಪುಟ್ಟಣ್ಣ ಅವರನ್ನ ಹಾಗೂ ಚಾಲಕ ಕೆ.ಸಿ ರಾಮೇಗೌಡರಿಗೆ ಕೆಎಸ್ಆರ್ಟಿಸಿ ಡಿಪೋ ನೌಕರರ ಬಳಗ ನಿವೃತ್ತ ಗೊಂಡ ಇಬ್ಬರಿಗೂ ಪೇಟ, ಮಣಿ ಹಾರ ಮತ್ತು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸುವ ಮೂಲಕ ಹೃದಯ ಸ್ಪರ್ಶಿಸುವಂತೆ ಬೀಳ್ಕೊಡಲಾಯಿತು.
ಡಿಪೋ ವ್ಯವಸ್ಥಾಪಕ ಪಿ.ಎ ರವಿ ಮಾತನಾಡಿ ನಿವತ್ತಿ ಸರ್ಕಾರಿ ನೌಕರ ರಿಗೆ ಸಹಜ ಅದರಂತೆ 30-35 ವರ್ಷ ಸುದೀರ್ಘ ಸೇವೆಯಲ್ಲಿ 15 ವರ್ಷ ಚಾಲಕರಾಗಿ 12 ವರ್ಷ ಸಂಚಾರ ನಿಯಂತ್ರಕರಾಗಿ 3ವರ್ಷ ಸಹಾಯಕ ಸಂಚಾರಿ ನಿರೀಕ್ಷಕರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿ ನಿವತ್ತಿಯಾಗುತ್ತಿರುವ ಡಿ.ಜಿ ಪುಟ್ಟರಾಜು ಹಾಗೂ ಚಾಲಕ ರಾಗಿ ಹಲವು ವರ್ಷಗಳ ಕಾಲ ಸೇವೆ ಕೆ.ಸಿ ರಾಮೇಗೌಡ ರಿಗೂ ಕೂಡ ಮುಂದಿನ ತಮ್ಮ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹರಸಿದರು.
ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಡಿ.ಜಿ ಪುಟ್ಟರಾಜು ವಯಸ್ಸನ್ನು ಆಧರಿಸಿ ಸರ್ಕಾರ ನಿಗದಿಪಡಿಸಿದ ನಿಯಮದಂತೆ ನಿವೃತ್ತಿ ಆಗಲೇಬೇಕು ಯುವಕರಿಗೆ ಜಾಗ ಮಾಡಿಕೊಡ ಬೇಕು.ಸರ್ಕಾರಿ ಕೆಲಸ ದೇವರ ಕೆಲಸ ಎಂಬ ಮನೋಭಾವನೆಯಲ್ಲಿ ಸತತ 30 ವರ್ಷಗಳ ಕಾಲ ಕಾಯ ವಾಚ ಮನಸ್ಸಿನಿಂದ ಪ್ರಾಮಾಣಿಕ ಕರ್ತವ್ಯ ಸಲ್ಲಿಸಿದ್ದೇವೆ ಎಂಬುವ ತೃಪ್ತಿ ನನಗೆ ತಂದಿದೆ ಆದರೂ ಇದು ನನ್ನ ಕುಟುಂಬ ಕೊನೆ ಕ್ಷಣದಲ್ಲಿ ಗೌರವಿಸುತ್ತಿರುವುದು ನಿವೃತ್ತಿಗೊಂಡ ನಂತರವೂ ಕೂಡ ಗೌರವ ಕಾಪಾಡುಕೊಂಡು ಜೀವಿಸುವ ಜವಾಬ್ದಾರಿ ಹೆಚ್ಚಿಸುವ ಸಂಕೇತವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಟಿಸಿ ಅಧ್ಯಕ್ಷ ರೇವಣ್ಣ, ಕುಮಾರ್, ದೀಪು, ನವೀನ್ ಕಾಂತರಾಜು ಪುಟ್ಟಲಿಂಗ, ಶಶಿಧರ್, ಹಿರಿಯ ಚಾಲಕ ಕೃಷ್ಣೆಗೌಡ, ಮಂಜುನಾಥ್.ಎ.ಆರ್ ಸೇರಿದಂತೆ ಚಾಲಕರು, ನಿರ್ವಾಹಕರು, ಹಾಗೂ ಸಿಬ್ಬಂದಿವರ್ಗ ಸೇರಿದಂತೆ ಉಪಸ್ಥಿತರಿದ್ದರು.
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
Tags
ಕೆ ಆರ್ ಪೇಟೆ ವರದಿ