ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರದ ಬಲಿಜ ಸಮಾಜದ ಬಲವರ್ಧನೆಗಾಗಿ ಯುವಕ ಪಡೆ ರಚಿಸಿ ಯುವಕರನ್ನು ಪ್ರೋತ್ಸಾಹಿಸಲು ಅವಕಾಶ ಕಲ್ಪಿಸಲು ಜಿಲ್ಲಾ ಸಮಿತಿ ಮುಂದಾಗಬೇಕೆಂದು ಸಮಾಜದ ತಾಲ್ಲೂಕಿನ ಮುಖಂಡರು ತಾಲೂಕು ಸಮಿತಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ನಗರದಲ್ಲಿ ಸುಮಾರು 20ಕ್ಕೂ ಹೆಚ್ಚು ಮಂದಿ ಯುವಕರು ಉತ್ಸಾಹಿಗಳಿದ್ದು ಯುವ ಸಂಘಟನೆಗೆ ಅನುಮತಿ ನೀಡಿದ್ದಲ್ಲಿ ಮತ್ತಷ್ಟು ಯುವಕರಿಗೆ ಪ್ರೋತ್ಸಾಹ ನೀಡಿದಂತೆ ಆಗುತ್ತದೆ ಎಂದು ಸಮಾಜದ ಮುಖಂಡರು ಆಗ್ರಹಿಸಿ ಸಮಾಜದ ತಾಲೂಕು ಅಧ್ಯಕ್ಷರಲ್ಲಿ ಮನವಿ ಮಾಡಿದ್ದಾರೆ.