ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಹಿರಿಯ ರಾಜಕೀಯ ಮುತ್ಸದ್ದಿ, ಕಾರ್ಮಿಕ ಹೋರಾಟಗಾರ ದಿವಂಗತ ಕಾಮೇಡ್ ಡಿ.ಸಿ.ಮಾಯಣ್ಣ ನವರ ಸೇವೆಯನ್ನು ಪರಿಗಣಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಾಗೂ ಸ್ಥಳೀಯ ಸಂಸ್ಥೆಗಳು ನಾಗರಿಕ ಗೌರವ ಪ್ರಶಸ್ತಿಗಳನ್ನು ನೀಡುವಂತೆ ಹಾಗೂ ಆಶ್ರಯ ನಿವೇಶನಗಳ ಗುಂಪು ಮನೆ ಗಳ ಯೋಜನೆಗೆ ಅವರ ಹೆಸರನ್ನು ನಾಮಕರಣಗೊಳಿಸುವಂತೆ ಆಗ್ರಹಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿಯಿಂದ ಫೆ.10ರ ಬೆಳಿಗ್ಗೆ 11 ಗಂಟೆಗೆ ಮನವಿ ಸಲ್ಲಿಸಲಾಗುತ್ತದೆ.
ಇತ್ತೀಚೆಗೆ ನಿಧನರಾದ ಕಾರ್ಮಿಕ ಮುಖಂಡ ರಾದ ಕಾಮ್ರೆಡ್ ಡಿ.ಸಿ ಮಾಯಣ್ಣ, ಕಾಮ್ರೆಡ್ ಅನಂತ ಸುಬ್ಬ ರಾವ್, ಕಾಮ್ರೆಡ್ ಕಾಳೇಗೌಡ ಹಾಗೂ ಕಾಮ್ರೆಡ್ ಎಸ್. ಆಂಜನೇಯ ಅವರಿಗೆ ಗೌರವ ಸಲ್ಲಿಸುವಂತಾಗ ಬೇಕು. ರಾಜ್ಯ ಸರ್ಕಾರಸಾಧಕ ಗಣ್ಯರ ಸೇವೆಯನ್ನು ಗುರುತಿಸಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಕಾರ್ಮಿಕ ಹೋರಾಟಗಾರರನ್ನು ಗುರುತಿಸಿ ಗೌರವಿಸಲು ಕಾರ್ಮಿಕ ರತ್ನ ಎಂಬ ಹೆಸರಿನಲ್ಲಿ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿ ಸರ್ಕಾರಕ್ಕೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಗುತ್ತಿದ್ದು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ಕಾರ್ಮಿಕರು, ಹೋರಾಟಗಾರರು, ಮಹಿಳೆಯರು ಆಗಮಿಸಿ ಯಶಸ್ವಿಗೊಳಿಸುವಂತೆ ಸಮಿತಿ ಅಧ್ಯಕ್ಷ ಬಿ.ಎನ್.ರಾಜು ಪ್ರಕಟಣೆಯಲ್ಲಿ ಕೋರಿದ್ದಾರೆ.