ಮೌಢ್ಯತೆ ತೊರೆದು ಪ್ರಗತಿಪರ ಚಿಂತನೆ ಯುಳ್ಳ ಪತ್ರಿಕೆಗಳ ಅವಶ್ಯಕತೆ ಇದೆ: ಶಿವಬಸಪ್ಪ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಸಂವಿಧಾನ ಬದಲಿಸುವ ಮನುವಾದಿಗಳ ಕೂಗು ಆರಂಭ ಗೊಂಡಿದೆ.ಸಮಾಜದಲ್ಲಿ ಮೌಢ್ಯತೆ ತೊರೆದು ಪ್ರಗತಿಪರ ಚಿಂತನೆಯುಳ್ಳ ಬರವಣಿಗೆ ನೀಡುವ ಪತ್ರಿಕೆಗಳ ಅವಶ್ಯಕತೆ ಇದೆ. ವೈಚಾರಿಕ ಬರಹಗಳ ಮೂಲಕ, ವೈಜ್ಞಾನಿಕ, ಪ್ರಗತಿಪರ ಚಿಂತನೆಗಳ ಮೂಲಕ ರಾಜೀರಹಿತ ವಾಗಿ ಮುನ್ನಡೆಯಲಿ ಎಂದು ಪ್ರಗತಿಪರ ಚಿಂತಕ ಶಿವಬಸಪ್ಪ ಹೇಳಿದರು.

ಇಂದು ಪ್ರಜಾಪ್ರತಿನಿಧಿ ಸುರೇಶ್ ಸಾರಥ್ಯದ ಪಾಕ್ಷಿಕ ಪತ್ರಿಕೆ ವರ್ಗಸಂಘರ್ಷ ಪತ್ರಿಕೆ ಬಿಡುಗಡೆ ಗೊಳಿಸಿ ಮಾತನಾಡಿದರು.

ಬುದ್ಧ ಧಮ್ಮ ಪ್ರಚಾರಕ ಶೇಖರ್ ನಾಯ್ಕ ಮಾತನಾಡಿ, ವರ್ಗ ವರ್ಗಗಳ ನಡುವೆ ಸಂಘರ್ಷ ಬಿತ್ತದೆ ಓದುಗರ ಅಭಿರುಚಿಗೆ ತಕ್ಕಂತೆ ಸುದ್ದಿ ನೀಡುವ ಪತ್ರಿಕೆಗಳಾಗಲಿ ಎಂದರು.

ನಗರಸಭಾ ಸದಸ್ಯ ಚಿನ್ನಪ್ಪ ಮಾತ ನಾಡಿ, ದೇಶದ ನಾಲ್ಕು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ತಪ್ಪುಗಳನ್ನು ಗಮನಿಸಿ ತಿದ್ದಿ ತೀಡುವ ಜವಾಬ್ದಾರಿ 4 ನೇ ಅಂಗ ಎನಿಸಿಕೊಂಡಿರುವ ಪತ್ರಿಕಾ ರಂಗದ ಮೇಲೆ ಇದ್ದು, ಈ ನಿಟ್ಟಿನಲ್ಲಿ ಪತ್ರಿಕೆ ಯಶಸ್ವಿಯಾಗಿ ಮುನ್ನಡೆಸಲಿ ಎಂದು ಶುಭ ಕೋರಿದರು. 

ಮಾಜಿ ಸದಸ್ಯ ಬದರಿನಾರಾಯಣ, ಬಿಸಿಯೂಟ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ (ಹನುಮಮ್ಮ) ಶಾರದಮ್ಮ, ನಿವೃತ್ತ ಉಪನ್ಯಾಸಕ ಮಂಜುನಾಥ್, ಸಹಕಾರಿ ಧುರೀಣಾ ಗೊಂದಿ ಜಯರಾಮ್, ಜೆಬಿಟಿ ಬಾಬು, ಕೆ ಆರ್ ಎಸ್ ಪಕ್ಷದ ಅಧ್ಯಕ್ಷ ತೀರ್ಥೇಶ್ ಮಾತನಾಡಿ, ಪ್ರಚಲಿತ ಸುದ್ದಿಗಳು ಓದುಗರಿಗೆ ತಲುಪಿಸು ವಂತಾಗಲಿ. ಇಂದು ಆರಂಭ ಗೊಂಡ ವರ್ಗಸಂಘರ್ಷ ಪತ್ರಿಕೆ ರಾಜ್ಯ, ರಾಷ್ಟ್ರ ಮಟ್ಟದ ಪತ್ರಿಕೆಯಾಗಿ ಹೊರ ಹೊಮ್ಮಲಿ ಎಂದು ಶುಭ ಹಾರೈಸಿದರು.

ಪತ್ರಿಕೆ ಸಂಪಾದಕ ಸುರೇಶ್ ಮಾತನಾಡಿ, 25 ವರ್ಷಗಳ ಹಿಂದೆ ನನ್ನ ಸಂಪಾದತ್ವದ ಪ್ರಜಾ ಪ್ರತಿನಿಧಿ ಪತ್ರಿಕೆ ಆರಂಭ ಗೊಂಡಾಗ ಅನೇಕ ಅಡಚಣೆ ಗೊಂಡರು ಎದೆ ಗುಂದದೆ ನಡೆಸ ಲಾಗಿತ್ತು. ಓದುಗರ ಅಭಿರುಚಿಗೆ ತಕ್ಕಂತೆ ವರ್ಗ ಸಂಘರ್ಷ ಮುನ್ನಡೆ ಯಲಿದೆ ಎಂದ ಅವರು ಎಲ್ಲರ ಸಹಕಾರ ಅಗತ್ಯ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು