ಎತ್ತಿನ ಗಾಡಿಯಿಂದ ಕುಸಿದು ಬಿದ್ದು ಕೂಲಿಕಾರ್ಮಿಕ ಸಾವು

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಅಡಿಕೆ ಮರ ಕಡೆದು ಕೊಂಡು ಭದ್ರಾವತಿ ಕಡೆಗೆ ತೆರಳುತ್ತಿದ್ದ ಕೂಲಿಕಾರ್ಮಿಕ ನೋರ್ವ ದಿಡೀರ್ ಎಂದು ಎತ್ತಿನ ಗಾಡಿ ಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. 

ನಗರದ ಜೇಡಿಕಟ್ಟೆ ಹೊಸೂರಿನಿಂದ ಶರವಣ (53) ಕೂಲಿಕಾರ್ಮಿಕ 20 ಅಡಿ ಉದ್ದದ ಅಡಿಕೆ ಮರವನ್ನ ಕಡಿದು ಎತ್ತಿನಗಾಡಿಯಲ್ಲಿ ಹಾಕಿಕೊಂಡು ನಗರದ ಕಡೆ ಬಂಡಿಹೊಡೆದು ಕೊಂಡು ಬರುತ್ತಿದ್ದನು. ಈ ವೇಳೆ ಜೇಡಿಕಟ್ಟೆಯ ವಿನಾಯಕ ಇಂಡಸ್ಟ್ರೀಸ್ ಬಳಿ ಶರವಣ ಎತ್ತಿನಗಾಡಿ ಯಿಂದ ಕುಸಿದು ಬಿದ್ದು ಸ್ಥಳದಲ್ಲಿಯೇ ಸಾವು ಕಂಡಿದೆ.

ಆತನ ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ವರದಿ ಯಿಂದ ಆತನ ಸಾವು ಖಚಿತಗೊಳ ಲಿದೆ. ಪ್ರಕರಣ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು