ಮಹಾಪುರುಷರು ಒಂದು ಜಾತಿ,ಧರ್ಮಕ್ಕೆ ಸೀಮಿತವಾಗಿ ದುಡಿದವರಲ್ಲ: ಡಾ.ಕೆ.ಹೆಚ್.ಕುಮಾರ ಸ್ವಾಮಿ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಾಜಿ ಉಪಪ್ರಧಾನಿ ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಂ ಇಬ್ಬರೂ ಆಧುನಿಕ ಭಾರತದ ಇತಿಹಾಸ ಕಂಡ ಎರಡು ದೃವತಾರೆಗಳು ಎಂದು ಉಪನ್ಯಾಸಕ ಡಾ.ಕೆ.ಹೆಚ್. ಕುಮಾರಸ್ವಾಮಿ ಹೇಳಿದರು.

ಅವರು ಭಾನುವಾರ ತಾಪಂ ಆವರಣ ದಲ್ಲಿ ತಾಲೂಕು ಆಢಳಿತ ತಾಲೂಕು ಪಂಚಾಯತಿ, ನಗರಸಭೆ,ಮತ್ತು ಸಮಾಜಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘ,ಸಂಸ್ಥೆಗಳು ಸಂಯುಕ್ತಾ ಶ್ರಯದಲ್ಲಿ ಏರ್ಪಡಿಸಿದ್ದ ಡಾ.ಬಾಬು ಜಗಜೀವನರಾಮ್ ಅವರ 119ನೇ ಜಯಂತಿ ಕಾರ್ಯಕ್ರಮದಲ್ಲಿ ಡಾ.ಬಾಬು ಜಗಜೀವನ ರಾಮ್ ಕುರಿತ ಮುಖ್ಯ ಉಪನ್ಯಾಸ ನೀಡಿದರು.

ಡಾ.ಬಿ.ಆರ್ .ಅಂಬೇಡ್ಕರ್, ಡಾ.ಬಾಬು ಜಗಜೀವನರಾಮ್, ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರು, ಪುರಂದರ ದಾಸರು ಸೇರಿದಂತೆ ಎಲ್ಲಾ ಮಹಾ ಪುರುಷರು ಯಾವುದೋ ಇಂದು ಜಾತಿ, ಧರ್ಮಕ್ಕೆ ಸೀಮಿತವಾಗಿ ದುಡಿದವರಲ್ಲ ಅವರು ಎಲ್ಲರ ಒಳಿತಿ ಗಾಗಿ ಶ್ರಮಿಸಿದವರು. ಅವರು ಎಲ್ಲರಿಗೂ ಸೇರಿದ ಮಹಾ ಪುರುಷರು, ಆದರೆ ಇಂದು ನಾವು ನಮ್ಮಲ್ಲಿರುವ ಸಂಕುಚಿತ ಮನೋಭಾವದಿಂದಾಗಿ ಈ ಮಹಾಪುರುಷರನ್ನು ಒಂದೊಂದು ಜಾತಿಗೆ ಸೀಮಿತಗೊಳಿಸಿ ಅವರ ಜಯಂತಿಯನ್ನು ಆಚರಿಸುತ್ತಿ ರುವುದು ನೋವಿನ ಸಂಗತಿ ಎಂದರು.

ನಗರಸಭಾ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ ಮಹಾಪುರುಷರ ಜಯಂತಿಯಲ್ಲಿ ಎಲ್ಲಾ ಅಧಿಕಾರಿಗಳು, ಎಲ್ಲಾ ಜನಾಂಗದವರು ಭಾಗವಹಿಸಿ ದಾಗ ಅದು ನಿಜವಾದ ಮಹಾ ಪುರುಷರ ಜಯಂತಿ ಎನಿಸುತ್ತದೆ. ಭದ್ರಾವತಿಯಲ್ಲಿ ನಗರಸಭೆ ವತಿ ಯಿಂದ ಯಾವುದಾದರೂ ಒಂದು ವೃತ್ತಕ್ಕೆ ಡಾ.ಬಾಬು ಜಗಜೀವನರಾಂ ಹೆಸರನ್ನು ಇಡುವ ಕಾರ್ಯವನ್ನು ಮಾಡಲಾಗುವುದು ಎಂದರು.

ಶಾಸಕ ಬಿ.ಕೆ.ಸಂಗಮೇಶ್ವರ್ ಡಾ.ಬಾಬು ಜಗಜೀವನ ರಾಮ್ ಅವರ ಚಿತ್ರಪಟಕ್ಕೆ ಪುಷ್ಪನಮನ ಸಲ್ಲಿಸಿದರು.

ವೇದಿಕೆ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್ ಜ್ಯೋತಿಬೆಳಗಿಸಿ, ಡಾ.ಬಾಬು ಜಗಜೀವನ ರಾಮ್ ಅವರ ಚಿತ್ರಪಟಕ್ಕೆ ಪುಷ್ಪನಮನ ಸಲ್ಲಿಸಿ ಉದ್ಘಾಟಿಸಿದರು.

ವೇದಿಕೆಯಲ್ಲಿ ತಹಶೀಲ್ದಾರ್ ಪರಸಪ್ಪ ಕುರುಬರ, ತಾಪಂ ಪ್ರಭಾರ ಕಾರ್ಯ ನಿರ್ವಹಣಾಧಿಕಾರಿ ಆಶಾಲತಾ, ನಗರಸಭೆ ಆಯುಕ್ತ ಹೇಮಂತ್, ಕ್ಷೇತ್ರಶಿಕ್ಷಣಾಧಿಕಾರಿ ಗಣೇಶ್, ರಾಜ್ಯ ಗ್ಯಾರಂಟಿ ಯೋಜನೆಗಳ ಸಮಿತಿ ತಾಲೂಕು ಅಧ್ಯಕ್ಷ ಬಿ.ಎಸ್.ಗಣೇಶ್, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಶಿವಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಬಸಪ್ಪ, ವಿವಿಧ ದಲಿತ ಸಂಘಟನೆಗಳ ಮುಖಂಡರು ಉಪಸ್ಥಿತ ರಿದ್ದರು. 

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿ ಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. 

ದಲಿತ ಸಂಘಟನೆಗಳ ಮುಖಂಡರು ಡಾ.ಬಾಬು ಜಗಜೀವನ ರಾಮ್ ಹೆಸರಿನ ಸಮುದಾಯಭವನ ನಿರ್ಮಾಣಕ್ಕೆ ಆಗ್ರಹಿಸಿ ಶಾಸಕರಿಗೆ ಮನವಿಸಲ್ಲಿಸಿದರು. 

ಸಿದ್ಧಾರ್ಥ ಅಂಧರ ಕೇಂದ್ರದ ಯುವಕ, ಯುವತಿಯರು ನಾಡಗೀತೆಯೊಂದಿಗೆ ಪ್ರಾರ್ಥಿಸಿ,ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ಸ್ವಾಗತಿಸಿ, ಶಶಿಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಬಿ.ಹೆಚ್. ರಸ್ತೆಯ ಅಂಬೇಡ್ಕರ್ ವೃತ್ತದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಮೆರವಣಿಗೆ ಸಾಗಿತು.

ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಡೊಳ್ಳು ಕುಣಿತ ಪ್ರದರ್ಶನ ದೊಂದಿಗೆ ಡಾ.ಬಾಬು ಜಗಜೀವನ ರಾಮ್ ಅವರ ಚಿತ್ರಪಟದ ನಗರದ ಪ್ರಮುಖ ಬೀದಿಗಳ ಮೂಲಕ ವೇದಿಕೆ ಕಾರ್ಯಕ್ರಮದ ಸ್ಥಳದವರೆಗೆ ನಡೆಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು