ಹಾಲಪ್ಪ ವೃತ್ತದ ರಸ್ತೆ ವಿಭಜಕ ಕಾಮಗಾರಿ ಸ್ಥಳದಲ್ಲಿ ಜೆಡಿಎಸ್ ಪ್ರತಿಭಟನೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ವರನಟ ಡಾ.ರಾಜ ಕುಮಾರ್ ರಸ್ತೆ, ಹಾಲಪ್ಪ ವೃತ್ತದಲ್ಲಿ ನಗರ ಸಭೆಯಿಂದ ರಸ್ತೆ ಮಧ್ಯ ಭಾಗದಲ್ಲಿ ವಿಭಜಕ ನಿರ್ಮಿಸ ಲಾಗುತ್ತಿದ್ದು, ಜೆಡಿಎಸ್ ಮುಖಂಡರು ಕಾಮಗಾರಿ ಸ್ಥಳದಲ್ಲಿ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ.

ಹಾಲಪ್ಪ ವೃತ್ತದಲ್ಲಿ ರಸ್ತೆ ಕಿರಿದಾಗಿದ್ದು, ಈಗಾಗಲೇ ಅಪಘಾತಗಳು ಸಂಭವಿ ಸುತ್ತಿವೆ. ಇಂತಹ ಸ್ಥಳದಲ್ಲಿ ರಸ್ತೆ ವಿಭಜಕ ನಿರ್ಮಿಸು ವುದರಿಂದ ಮತ್ತಷ್ಟು ಅಪಘಾತಗಳು ಹೆಚ್ಚಾಗ ಲಿವೆ. ರಸ್ತೆ ವಿಭಜಕ ಅವೈಜ್ಞಾನಿಕ ವಾಗಿದ್ದು, ತಕ್ಷಣ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.

ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ ನೇತೃತ್ವದಲ್ಲಿ ಸುಮಾರು 1 ಗಂಟೆಗೂ ಹೆಚ್ಚು ಸಮಯ ನಗರಸಭೆ ಅಧಿಕಾರಿ ಗಳೊಂದಿಗೆ ಮಾತುಕತೆ ನಡೆಸಲಾಯಿತು.

ಅಂತಿಮವಾಗಿ ಈ ಸಂಬಂಧ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿ, ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಳಿಸಿದರು.

ಜೆಡಿಎಸ್ ಪಕ್ಷದ ಪ್ರಮುಖರಾದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ, ನಗರಸಭೆ ಸದಸ್ಯರಾದ ಉದಯ್‌ ಕುಮಾ‌ರ್, ಆರ್. ಮೋಹನ್‌ ಕುಮಾ‌ರ್, ಮುಖಂಡರಾದ ಎಸ್. ಮಧುಸೂದನ್, ಸುರೇಶ್, ಧರ್ಮರಾಜ್, ಎನ್. ರಾಮಕೃಷ್ಣ, ಸಾವಿತ್ರಮ್ಮ ಪುಟ್ಟೇಗೌಡ, ಭಾಗ್ಯಮ್ಮ ಮಂಜುನಾಥ್ ನವೀನ್ ಸ್ಥಳೀಯ ವರ್ತಕರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು