ಎಂಪಿಎಂ ಅರಣ್ಯಾಧಿಕಾರಿ ಅಕ್ರಮ: ಉನ್ನತ ತನಿಖೆಗೆ ಆಗ್ರಹ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಎಂಪಿಎಂ ಅರಣ್ಯ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಾಂತ್ರಿಕ ಸಹಾಯಕ ಮತ್ತು ಸಹಾಯಕ ಅರಣ್ಯಾಧಿ ಕಾರಿ ಎನ್.ಬಿ.ಪಾಲಾಕ್ಷಿ ರವರ ಅಕ್ರಮಗಳ ಬಗ್ಗೆ ಉನ್ನತ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್ ಗೌಡ ಅಗ್ರಹಿಸಿದರು.

    ಸೋಮವಾರ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಎನ್.ಬಿ ಪಾಲಾಕ್ಷಿ ಸರ್ಕಾರಿ ನೌಕರಿಯಲ್ಲಿ ನಿವೃತ್ತಿ ಹೊಂದಿದ್ದು, ನಿವೃತ್ತಿಯ ನಂತರದಲ್ಲಿ ಸರ್ಕಾರದ ಆದೇಶದ ಮೇರೆಗೆ ಭದ್ರಾವತಿಯ ಎಂಪಿ ಎಂ ಅರಣ್ಯ ವ್ಯಾಪ್ತಿ ಯಲ್ಲಿ ತಾಂತ್ರಿಕ ಸಹಾಯಕ ಮತ್ತು ಸಹಾಯಕ ಅರಣ್ಯಾಧಿಕಾರಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

     ಇವರು ಕಾರ್ಯ ನಿರ್ವಹಿಸುತ್ತಿರುವ ವ್ಯಾಪ್ತಿಯಲ್ಲಿ ಸುಮಾರು 35 ಜನ ವಾಚರ್ ಗಳು ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರ ದಿಂದ ಪ್ರತಿ ತಿಂಗಳು ವಾಚರ್ ಗಳಿಗೆ ರೂ.12,000 ಸಾವಿರ ರೂಪಾಯಿಗಳು ವೇತನ ನಿಗದಿ ಯಾಗಿದ್ದು, ಆದರೆ ಪ್ರತಿ ವಾಚರ್ ಗಳಿಗೆ 8.500 ಸಾವಿರ ರೂಪಾಯಿಗಳನ್ನು ವೇತನ ನಗದು ರೂಪದಲ್ಲಿ ಪಾವತಿ ಮಾಡುತ್ತಿದ್ದಾ ರೆಂದು ಆರೋಪಿಸಿದರು.

    ಈತ ಹಣ ಸಂದಾಯ ಮಾಡಿರುವ ಬಗ್ಗೆ ಯಾವುದೇ ದಾಖಲೆಗಳಾಗಲೀ ರಶೀದಿ ಗಳನ್ನಾಗಿ ನೀಡಿರುವುದಿಲ್ಲ ಹಾಗು ದಾಖಲೆ ಗಳನ್ನು ಸಹ ಇಟ್ಟು ಕೊಂಡಿರುವುದಿಲ್ಲ.

    ಇವರ ಕಾರ್ಯ ವ್ಯಾಪ್ತಿಗೆ ಒಳ ಪಡುವ ಗ್ರಾಮಗಳಾದ ಸಿದ್ಧಾಪುರ ಸರ್ವೆ ನಂ : 135/136,. ಸಿರಿಯೂರು 12/67, ಕಲ್ಲಗಹಳ್ಳಿ 41/42, ಆಗಲ ಮನೆ ಗ್ರಾಮದ ಸರ್ವೆ ನಂ : 16/36/ 35, ರಾಮನಕೊಪ್ಪ 13/14/15, ನಂಜಾಪುರ 27/25 ಸೇರಿದಂತೆ ಹಲವು ಗ್ರಾಮಗಳಲ್ಲಿ ನೀಲಗಿರಿ ಮರ ಗಳಿರುವ ಪ್ಲಾಂಟೇಷನ್ ಜಾಗದಲ್ಲಿ ನೀಲಗಿರಿ ಮರಗಳ ಸುತ್ತ ಇರುವ ಕಳೆ ಮತ್ತು ಗಿಡಗಂಟೆಗಳನ್ನು ವೀಡಿಂಗ್ (ಕಳೆ ಕೀಳುವುದು) ಮತ್ತು ಪ್ಲಾಗಿಂಗ್ ಮಾಡಲು ಸರ್ಕಾರದಿಂದ ಹಣ ನಿಗದಿ ಪಡಿಸಿದ್ದು ಈ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯ ಸಾರ್ವಜನಿಕರಲ್ಲಿ ಚರ್ಚೆ ಆಗುತ್ತಿದ್ದು, ಈ ವಿಚಾರ ನೈಜವಾಗಿರುತ್ತದೆ.

    ಎo ಪಿ ಎo ಅರಣ್ಯ ಭಾಗದಲ್ಲಿ ತಾಂತ್ರಿಕ ಸಹಾಯಕ ಮತ್ತು ಸಹಾಯಕ ಸದರಿ ಪಾಲಾಕ್ಷಿ ರವರು ಸರ್ಕಾರಿ ನೌಕರಿಯಿಂದ ನಿವೃತ್ತಿಗೊಂಡು ಭದ್ರಾವತಿ ಅರಣ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚಿನ ಮುಖ್ಯಮಂತ್ರಿಗಳ ಆದೇಶದ ನಂತರ ಸರ್ಕಾರಿ ನೌಕರಿಯಿಂದ ನಿವೃತ್ತಿ ಪಡೆದ ಅಧಿಕಾರಿಗಳು ಸರ್ಕಾರದ ಅದೀನಕ್ಕೆ ಒಳಪಡುವ ಸರ್ಕಾರಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ ಅಂತಹ ವರನ್ನು ಕೂಡಲೇ ಸೇವೆಯಿಂದ ಬಿಡುಗಡೆ ಗೊಳಿಸಿ ಇವರ ಅಧಿಕಾರಿ ಗಳನ್ನು ಸೇವೆಯಿಂದ ಬಿಡುಗಡೆ ಗೊಳಿಸುವಂತೆ ಆದೇಶಮಾಡಿರುತ್ತಾರೆ.

     ಈ ಆದೇಶವನ್ನು ಗಾಳಿಗೆ ತೂರಿ ರುವ ಇವರನ್ನು ಸೇವೆಯಿಂದ ವಜಾ ಮಾಡು ವಂತೆ ಅಗ್ರಹಿಸಿದ ಅವರು ಅಕ್ರಮಗಳ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಜರೂಗಿಸ ಬೇಕೆಂದು ಒತ್ತಾಯಿಸಿ ಉಪ ತಹಶೀಲ್ದಾರ್ ರವರ ಮುಖಾಂತರ ಮುಖ್ಯಮಂತ್ರಿರವರಿಗೆ ಮನವಿ ಸಲ್ಲಿಸಿದರು.

      ಪ್ರತಿಭಟನೆಯಲ್ಲಿ ಸ್ಥಳೀಯ ಮುಖಂಡ ರಾದ ರಘು ಸಂಕ್ಲಿಪುರ ಸೇರಿದಂತೆ ಅನೇಕರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು