ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಕೇಂದ್ರ ಸರ್ಕಾರ ಮತದಾರರ ಪಟ್ಟಿಯ ವಿಶೇಷ ತೀವ್ರತೆ ಪರೀಕ್ಷರಣೆ (ಎಸ್‌ಐಆರ್) ಹೆಸರಿನಲ್ಲಿ ಮತದಾನದ ಹಕ್ಕು ಕಸಿಯುವ ಕೆಲಸಕ್ಕೆ ಕೈಹಾಕಿದೆ ಎಂದು ಅಂಬೇಡ್ಕರ್ ವೈಚಾರಿಕ ವೇದಿಕೆಯ ಸಂಚಾಲಕ ಪಿ.ಮೂರ್ತಿ ಹೇಳಿದರು.
ಅವರು ನಗರದ ಡಾ:ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗ ಅಂಬೇಡ್ಕರ್ ವೈಚಾರಿಕ ವೇದಿಕೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ಯನ್ನುದ್ದೇಶಿಸಿ ಮಾತನಾಡಿದರು.
ತನ್ನ ಮತ ಬ್ಯಾಂಕ್ ಅಲ್ಲದ ಅಲ್ಪಸಂಖ್ಯಾ ತರು. ಅದಿವಾಸಿಗಳು, ದಲಿತರು, ಅಲೆಮಾರಿ ಗಳು, ಇನ್ನಿತರ ಅಲಕ್ಷಿತ ಸಮುದಾಯಗಳನ್ನು ಮತದಾರರ ಪಟ್ಟಿಯಿಂದ ಹೊರಹಾಕು ವುದಕ್ಕಾಗಿ ಈ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.
ಪ್ರಜಾಪಭುತ್ವ ದೇಶದಲ್ಲಿ ಮತದಾನದ ಹಕ್ಕು, ನಾಗರೀತ್ಯದ ಹಕ್ಕು ಬಹಳ ಮಹತ್ವ ಪಡೆದುಕೊಂಡಿವೆ. ಮತದಾನದ ಹಕ್ಕು ಇರುವ ಕಾರಣ ಕ್ಕಾಗಿ ರಾಜಕಾರಣಿಗಳು (ಜನಪ್ರತಿ ನಿಧಿಗಳು) ದೇಶದ ನಾಗರೀಕರಿಗೆ ಕನಿಷ್ಠ ಗೌರವ ಕೊಡುತ್ತಿದ್ದಾರೆ.
ಈ ಅವೈಜ್ಞಾನಿಕ ಜನವಿರೋದಿ ನಡೆಯನ್ನು ಅಂಬೇಡ್ಕರ್ ವೈಚಾರಿಕ ವೇದಿಕೆ ಕರ್ನಾಟಕ (ಎವೈವಿಕೆ) ತೀವ್ರವಾಗಿ ಖಂಡಿಸುತ್ತದೆ ಮತ್ತು ಎಸ್ ಐ ಆರ್ ಅನ್ನು ಕೇಂದ್ರ ಸರ್ಕಾರ ರದ್ದು ಮಾಡಬೇಕೆಂದು ಆಗ್ರಹಿಸಿ ಹೋರಾಟ ನಡೆಸುತ್ತದೆ ಎಂದು ಎಚ್ಚರಿಸಿದರು.
ರೇಷನ್ ಕಾರ್ಡ್, ಆಧಾರ್ ಕಾರ್ಡ್ ಇಲ್ಲದೆ ಇರುವಂತಹ ಅಲ್ಪಸಂಖ್ಯಾ ತರು, ಆದಿವಾಸಿಗಳು, ಅಲೆಮಾರಿಗಳು, ಬಡವರು, ದಲಿತರು, ವಿವಾಹಿತ ಮಹಿಳೆಯರು ಇನ್ನೂ ಭಾರತದಲ್ಲಿ ಲಕ್ಷಾಂತರ ಜನರು ಇದ್ದಾರೆ. ಇಂತಹ ಪರಿಸ್ಥಿಯಲ್ಲಿ ಎಸ್ ಐ ಆರ್ ನಲ್ಲಿ ಮತದಾನದ ಹಕ್ಕನ್ನು ಪಡೆಯಲು 11 ದಾಖಲೆಗಳನ್ನು ಕೊಡಬೇಕಾಗಿದೆ. ದಾಖಲೆಗಳಲ್ಲಿ ಯಾವುದೇ ಅಕ್ಷರ, ದಿನಾಂಕ, ಅಪ್ಪ-ಅಮ್ಮರ ಹೆಸರಿನಲ್ಲಿ ತಪ್ಪುಗಳಿಲ್ಲದೆ ಎಲ್ಲಾರು ಒದಗಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿಸಿದರು.
ದೇಶದಲ್ಲಿ ಇದುವರೆಗೂ 13 ರಾಜ್ಯಗಳಲ್ಲಿ ಎಸ್ ಐ ಆರ್ ಪ್ರಕ್ರಿಯೆ ನಡೆದಿದ್ದು ಪಶ್ಚಿಮ ಬಂಗಾಳದಲ್ಲಿ 92 ಲಕ್ಷ, ಉತ್ತರ ಪ್ರದೇಶದಲ್ಲಿ 2.3 ಕೋಟಿ, ಬಿಹಾರದಲ್ಲಿ 67 ಲಕ್ಷ ಜನರು ಸೇರಿದಂತೆ ಒಟ್ಟು 6 ಕೋಟಿ ಜನರು ಮತದಾನದ ಹಕ್ಕನ್ನು ಕಳೆದುಕೊಂಡಿ ದ್ದಾರೆ. ಉಳಿದ ರಾಜ್ಯಗಳಿಂದ ಇನ್ನೂ ಆರು ಕೋಟಿ ಜನರು ಮತದಾನದ ಹಕ್ಕನ್ನು ಕಳೆದು ಕೊಳ್ಳಲಿದ್ದಾರೆ ಎಂದು ಊಹಿಸಲಾಗಿದೆ ಎಂದರು.
ಬಿಹಾರ ಮತ್ತು ಪಶ್ಚಿಮ ಬಂಗಾಳದ ಸದರಿ ಮುಖ್ಯಮಂತ್ರಿಗಳು ಮತದಾನದ ಹಕ್ಕನ್ನು ಕಳೆದುಕೊಂಡ ವರಿಗೆ ಸರ್ಕಾರಿ ಸೌಲಭ್ಯ ಗಳನ್ನು ತಡೆಹಿಡಿಯಲಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಮತದಾನದ ಹಕ್ಕನ್ನು ನೀಡುವಂತೆ ಪಶ್ಚಿಮ ಬಂಗಾಳದ 27 ಲಕ್ಷ ಜನ ವಿದ್ಯಾವಂತರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದರೆ ಸುಪ್ರೀಂ ಕೋರ್ಟ್ ಮುಂದಿನ ಸಾರಿ ಮತದಾನ ಮಾಡಿ ಎಂದು ತುಂಬಾ ಲಘುವಾಗಿ ಮಾತನಾಡಿದೆ. ಈ ಮೂಲಕ ಸಂವಿಧಾನದ ಆಶಯಗಳನ್ನು ಗಾಳಿಗೆ ತೊರಿದೆ. ಇಲ್ಲಿಯವರೆಗೆ ದೇಶದಲ್ಲಿ ಮತದಾರರು ಸರ್ಕಾರವನ್ನು ಆಯ್ಕೆ ಮಾಡುತ್ತಿದ್ದರು. ಈಗ ಎಸ್‌ಐಆರ್ ನ ಜಾರಿ ಮೂಲಕ ಸರ್ಕಾರ ಮತದಾರ ರನ್ನು ಆಯ್ಕೆ ಮಾಡುತ್ತಿದೆ ವಿರುದ್ಧ ಬೇಡವಾದವರನ್ನು ಕೈ ಬಿಡುತ್ತಿದೆ ಎಂದು ಆರೋಪಿಸಿದರು.
18 ವರ್ಷ ಪೂರ್ಣಗೊಂಡ ಭಾರತೀಯ ರೆಲ್ಲರಿಗೂ ಮತದಾನ ಮಾಡುವ ಹಕ್ಕನ್ನು ನಿರಾಕರಿಸುವ ಮೂಲಕ ಪೌರತ್ವವನ್ನು ಕಸಿದುಕೊಳ್ಳು ತ್ತಿರುವ ಎಸ್ ಐ ಆರ್ ಪ್ರಕ್ರಿಯೆ ರದ್ದಾಗುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಸುರೇಶ್, ತೀರ್ಥೇಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.