ಶಿವಮೊಗ್ಗ-ಹೈಕೋರ್ಟ್ ಪೀಠ ಸ್ಥಾಪನೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಬೆಂಬಲ

ವಿಜಯ ಸಂಘರ್ಷ ನ್ಯೂಸ್ 
ಶಿವಮೊಗ್ಗ: ಮಲೆನಾಡು ಹಾಗೂ ಸುತ್ತಮುತ್ತ ಲಿನ ಜಿಲ್ಲೆಗಳ ಸಾರ್ವಜನಿಕರ ಹಿತದೃಷ್ಟಿಯಿಂದ ಶಿವಮೊಗ್ಗದಲ್ಲಿ ಸಂಚಾರಿ ಹೈಕೋರ್ಟ್ ಪೀಠವನ್ನು ಸ್ಥಾಪಿಸಬೇಕೆಂಬ ಶಿವಮೊಗ್ಗದ ವಕೀಲರ ಸಂಘದ ನ್ಯಾಯ ಸಮ್ಮತ ಹೋರಾಟಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಶಿವಮೊಗ್ಗ ಘಟಕದಿಂದ ಬೆಂಬಲ ಘೋಷಿಸಿದೆ ಎಂದು ಜಿಲ್ಲಾಧ್ಯಕ್ಷ ಡಿ.ಜಿ.ನಾಗರಾಜ್ ಹೇಳಿದರು.

    ಗುರುವಾರ ನಗರದ ವಕೀಲರ ಭವನದ ಮುಂಭಾಗದಲ್ಲಿ ಹಮ್ಮಿಕೊಳ್ಳ ಲಾಗಿದ್ದ ಪ್ರತಿಭಟನೆ ಹಾಗೂ ಹೋರಾಟದಲ್ಲಿ ಸಂಘದ ಪದಾಧಿಕಾರಿ ಗಳು ಹಾಗೂ ಸದಸ್ಯರು ಪಾಲ್ಗೊಂಡು ಹೋರಾಟಕ್ಕೆ ಧ್ವನಿಗೂಡಿಸಿ ಬೆಂಬಲ ಪತ್ರವನ್ನು ವಕೀಲರ ಸಂಘದ ಅಧ್ಯಕ್ಷ ರಿಗೆ ಬೆಂಬಲ ಸೂಚಿಸಿ, ಹೋರಾಟಕ್ಕೆ ಸಾಥ್ ನೀಡಿದ ಅವರು, ದಿನಾಂಕ 30-5-2026 ರಂದು ಶಿವಮೊಗ್ಗದಲ್ಲಿ ನಡೆಯುವ ಪ್ರತಿಭಟನಾ ರ್ಯಾಲಿ ಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.    

     ಶಿವಮೊಗ್ಗದ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಮಾತನಾಡಿ ದರು. ಶಿವಮೊಗ್ಗದಲ್ಲಿ ಸಂಚಾರಿ ಪೀಠಕ್ಕಾಗಿ ಹೆಚ್ಚಿನ ಬೆಂಬಲ ವ್ಯಕ್ತವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
     
     "ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯಾ ಗುವುದು ಇಂದಿನ ತುರ್ತು ಅಗತ್ಯವಾಗಿದೆ. ಇದರಿಂದ ಈ ಭಾಗದ ಜನರಿಗೆ ಮತ್ತು ವಕೀಲರಿಗೆ ಕಾಲಹರಣ ಹಾಗೂ ಆರ್ಥಿಕ ಹೊರೆ ತಪ್ಪಲಿದ್ದು, ಶೀಘ್ರ ನ್ಯಾಯ ಸಿಗಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

    ಸಂಘದ ಉಪಾಧ್ಯಕ್ಷ ಚಿತ್ರಪ್ಪ ಯರಬಾಳ್ ಮಾತನಾಡಿ," ನ್ಯಾಯ ದಾನ ಪ್ರಕ್ರಿಯೆ ಜನಸಾಮಾನ್ಯರ ಸನಿಹಕ್ಕೆ ಬರಬೇಕು. ಶಿವಮೊಗ್ಗ ದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಯಾಗುವ ವರೆಗೂ ನಮ್ಮ ಬೆಂಬಲ ಮುಂದುವರಿ ಯುತ್ತದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಚಿತ್ರಪ್ಪ ಯರಬಾಳ್, ಕಾರ್ಯದರ್ಶಿ ಶಿವರಾಜ್ ಬಿ.ಸಿ, ಖಜಾಂಚಿ ಗಿರೀಶ್ ಬಿ.ಸಿ, ಸಂಘಟನಾ ಕಾರ್ಯದರ್ಶಿ ಅಣ್ಣಪ್ಪ, ನಿರ್ದೇಶಕ ರಾದ ಕಮಾಲಕ್ಷಪ್ಪ, ವಿಷ್ಣು ಪ್ರಸಾದ್, ನಂದನ್ ಕುಮಾರ್ ಸಿಂಗ್, ಕಾನೂನು ಸಲಹೆಗಾರರು ಮತ್ತು ವಕೀಲರಾದ ಷಡಾಕ್ಷರಪ್ಪ ಮತ್ತಿತರರು ಹಾಜರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು