ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಮಾದಕ ವಸ್ತುಗಳ ದುಷ್ಪರಿಣಾ ಮಗಳ ಕುರಿತು ಸಾರ್ವ ಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಗುರುವಾರ ಶಿವಮೊಗ್ಗ ನಗರದಲ್ಲಿ ಆಯೋಜಿಸ ಲಾಗಿದ್ದ 5 ಕಿಲೋಮೀಟರ್ ಜಾಗೃತಿ ಮ್ಯಾರಥಾನ್ ಓಟದಲ್ಲಿ ತಾಲೂಕಿನ ಹೊಳೆಹೊನ್ನೂರು ಡಣಾಯಕಪುರ ನಿವಾಸಿ ತನುಶ್ರೀ ಮೊದಲನೇ ಸ್ಥಾನ ದೊಂದಿಗೆ ಬಹುಮಾನ ತಮ್ಮದಾಗಿಸಿ ಕೊಂಡಿದ್ದಾರೆ.
ಶಿವಮೊಗ್ಗ ಡಿಎಆರ್ ಮೈದಾನದಲ್ಲಿ ಆಯೋ ಜಿಸಲಾಗಿದ್ದ ಕಾರ್ಯ ಕ್ರಮದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಬಿ. ನಿಖಿಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಎನ್. ಹೇಮಂತ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಎ.ಜಿ ಕಾರಿಯಪ್ಪ, ಕೆಎಸ್‌ಆರ್‌ಪಿ ಕಮಾಂಡೆಂಟ್ ಯುವ ಕುಮಾರ್ ಸೇರಿದಂತೆ ಇನ್ನಿತರರು ಬಹುಮಾನ ವಿತರಿಸಿ ಅಭಿನಂದಿಸಿದರು.
ತನುಶ್ರೀ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ನಗರದ ಸಂಚಾರಿ ಪೊಲೀಸ್ ಠಾಣೆಯ ಹೆಡ್‌ಕಾನ್ ಸ್ಟೇಬಲ್ ಹಸಿರು ಸೇನಾನಿ , ರಕ್ತದಾನಿ ಹಾಲೇಶಪ್ಪನವರ ಪುತ್ರಿಯಾಗಿದ್ದಾರೆ.