ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ತಾಲೂಕಿನ ಅರಹ ತೋಳಲು ಕೈಮರ ಗ್ರಾಮದ ರಸ್ತೆಯು ಮೃತ್ಯುವಿಗೆ ಅಹ್ವಾನ ನೀಡಿದಂತಾಗಿದೆ.
ಸುಮಾರು ಒಂದು ಎರಡು ವರ್ಷಗಳಿಂದ ಈ ರಸ್ತೆಯಲ್ಲಿ ಗುಂಡಿಗಳಿಂದ ಕೊದಿರುವುದರಿಂದ ಓಡಾಡಲು ಅನಾನುಕೂಲವಾಗಿದ್ದು, ಸಾಕಷ್ಟು ಬಾರಿ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ದಿನಕ್ಕೆ ಸಾವಿರಾರು ವಾಹನಗಳು ಸಂಚಾರ ಮಾಡುವ ಕೈಮರ ಗ್ರಾಮದಲ್ಲಿo ತುಂಬಾ ದುಸ್ತರವಾಗಿದೆ.
ದಿನನಿತ್ಯ ಅಪಘಾತಗಳು ನಡೆಯು ತ್ತಿದ್ದರು ಇಲಾಖೆ ಮೌನವಾಗಿದೆ. ಕೂಡಲೇ ರಸ್ತೆ ದುರಸ್ಥಿಗೆ ಸಂಬಂಧ ಪಟ್ಟ ಇಲಾಖೆ ಮುಂದಾಗಬೇಕಿದೆ ಎಂದು ಸ್ಥಳೀಯ ನಿವಾಸಿ ನೂರ್ ಅರ್ಮನ್ ಆಗ್ರಹಿಸಿದ್ದಾರೆ.