ಭದ್ರಾವತಿ-ಪುಸ್ತಕಗಳನ್ನು ಓದುವುದರಿಂದ ಜ್ಞಾನ ಸಂಪತ್ತು ಹೆಚ್ಚಾಗಲಿದೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಪುಸ್ತಕಗಳನ್ನು ಓದುವುದರಿಂದ ಜ್ಞಾನಾರ್ಜನೆ ಮತ್ತು ಜ್ಞಾನ ಸಂಪತ್ತು ಹೆಚ್ಚಾಗಲಿದೆ ಎಂದು ಕೆಎಂಎಫ್ ನ ನಿವೃತ್ತ ತಾಂತ್ರಿಕ ಅಧಿಕಾರಿ ಎನ್.ತಮ್ಮಯ್ಯ ಅಭಿಪ್ರಾಯ ಪಟ್ಟರು.
     
     ಅವರು ನಗರದ ಹೊಸಮನೆಯ ಭೋವಿಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಗ್ರಂಥಾಲಯಕ್ಕೆ ವಿವಿಧ ಪ್ರಕಾರದ ಸಾಹಿತ್ಯಾ ಪುಸ್ತಕ ಗಳನ್ನು ಉಚಿತವಾಗಿ ನೀಡಿ ಮಾತನಾಡಿದರು.

  ಹಿರಿಯ ಸಾಹಿತಿ ಜೆ.ಎನ್.ಬಸವ ರಾಜಪ್ಪ ಹಾಗೂ ನಾನು ಈಗಾಗಲೇ ಸಾಕಷ್ಟು ಶಾಲಾ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ದಾನವಾಗಿ ನೀಡಿದ್ದೇವೆ. ಮುಂದೆಯೂ ಈ ಒಂದು ಕಾರ್ಯ ವನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಬಳಸಿಕೊಳ್ಳ ಬೇಕು ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

   ಶಾಲಾ ಮುಖ್ಯೋಪಾಧ್ಯಾಯ ಶಿವರುದ್ರಯ್ಯ ಮಾತನಾಡಿ, ಪುಸ್ತಕ ಗಳಿಗಿಂತ ಉತ್ತಮವಾದ ಸ್ನೇಹಿತರಿಲ್ಲ. ಪುಸ್ತಕ ಕೊಡುಗೆಯ ಕಾರ್ಯಕ್ರಮವನ್ನ ನಡೆಸಿಕೊಡುತ್ತಿರುವ ತಮ್ಮಯ್ಯ ಮತ್ತು ಸಾಹಿತಿ ಜೆಎನ್ ಬಸವರಾಜಪ್ಪ ಇವರಿಗೆ ಅಭಿನಂದನೆಗಳನ್ನು ಸಲ್ಲಿಸಿ, ವಿದ್ಯಾರ್ಥಿಗಳಿಗೆ ಇದರ ಸದುಪಯೋಗ ವನ್ನು ಮಾಡಿಕೊಳ್ಳುವಂತೆ ಹೇಳಿದರು.

      ಸಹ ಶಿಕ್ಷಕಿ ಪಾರ್ವತಮ್ಮ ಮಾತ ನಾಡಿ ಈಗಾಗಲೇ ನಮ್ಮ ಶಾಲೆಯಲ್ಲಿ ರುವ ಗ್ರಂಥಾಲಯದ ಮೂಲಕ ವಿದ್ಯಾರ್ಥಿಗಳು ಪುಸ್ತಕವನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ, ನಿಮ್ಮ ಈ ಕೊಡುಗೆಯು ನಮ್ಮ ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಹುಮ್ಮಸ್ಸನ್ನು ಮೂಡಿಸಿದೆ 
ಎಂದರು.

    ಸಾಹಿತಿ ಜೆ ಎನ್ ಬಸವರಾಜಪ್ಪ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಪುಸ್ತಕದ ಜೊತೆಗೆ ಪಠ್ಯೇತರ ಪುಸ್ತಕ ಗಳನ್ನು ಓದುವುದರಿಂದ ಪ್ರಾಪಂಚಿಕ ಜ್ಞಾನ ಲಭ್ಯವಾಗುತ್ತದೆ ಎಂದರು. 

ಸಹ ಶಿಕ್ಷಕಿ ಪಾರ್ವತಮ್ಮ ಎಸ್ ಹೆಚ್, ಹೇಮಲತಾ ಜಿ, ದೀಪ ಎ ಆರ್ ಹಾಗೂ ಎಸ್ ಡಿ ಎಂ ಸಿ ಸದಸ್ಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು