ಭದ್ರಾವತಿ-ಸ್ವಾತಂತ್ರ್ಯ ಸಿಕ್ಕಿದ್ದಲ್ಲ ಗಳಿಸಿದ್ದು: ಕೋಗಲೂರು ತಿಪ್ಪೇಸ್ವಾಮಿ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಸ್ವಾತಂತ್ರ್ಯ ಎಂಬುದು ಸ್ವೇಚ್ಚಾಚಾರವಲ್ಲ ಎಂದು ಹೇಳುತ್ತಾ ಮಹಾತ್ಮಾ ಗಾಂಧೀಜಿ ಸೇರಿದಂತೆ ಸಾವಿರಾರು ಜನರ ಬಲಿದಾನ, ಹೋರಾಟ ಗಳಿಂದ ನಾವು ಸ್ವಾತಂತ್ರ್ಯ ಗಳಿಸಿಕೊಂಡಿ ದ್ದೇವೆ ಈಗ ಉಳಿಸಿ ಕೊಂಡು ಹೋಗಬೇಕಿದೆ ಮತ್ತೆ ಕಳೆದು ಕೊಂಡರೆ ಪಡೆಯುವುದು ಕಷ್ಟ.
ದೇಶಾಭಿಮಾನ ಬೆಳೆಸಿಕೊಂಡು ಮಹಾತ್ಮರ ಉನ್ನತ ಆದರ್ಶಗಳನ್ನು ಅನುಸರಿಸಿ ಕೊಂಡು ಹೋಗುವ ತುರ್ತಿದೆ ಎಂದು ಮುಖ್ಯಶಿಕ್ಷಕ ಕೋಗಲೂರು ತಿಪ್ಪೇಸ್ವಾಮಿ ಹೇಳಿದರು.

       ತಾಲ್ಲೂಕಿನ ಯರೇಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ 80 ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳು ಗಾಂಧೀಜಿ, ಅಂಬೇಡ್ಕರ್ ಹಾಗೂ ಇತರೆ ನಾಯಕರ ಆದರ್ಶ ಗಳನ್ನು ಅರಿಯಬೇಕು.

      ಮಹಾನ್ ನಾಯಕರ ಬಗ್ಗೆ ಅಪ ಪ್ರಚಾರ ನಡೆಸುವವರ ಬಗ್ಗೆ ಜಾಗುರಾಕರಾಗಿದ್ದು ಇತಿಹಾಸ ತಿರುಚಿ ಹೇಳುವ ಜನರ ಬಗ್ಗೆ ಎಚ್ಚರಿಕೆ ಇಟ್ಟು ಕೊಂಡು ನೈಜ ಮಾಹಿತಿ ಎಲ್ಲೆಡೆ ಹರಡಿ ಸಮಾಜದ ಸ್ವಾಸ್ತ್ಯ ಕಾಪಾಡಬೇಕು ಎಂದು ಕರೆಕೊಟ್ಟರು.

    ಶಾಲಾಭಿವೃದ್ಧಿ ಅಧ್ಯಕ್ಷ ಲೋಕೇಶ್ ಧ್ವಜಾರೋಹಣ ನೆರವೇರಿಸಿದರು.
ಮಕ್ಕಳಿಂದ ಸಾಂಸ್ಕೃತಿಕ ವಿವಿಧ ಕಾರ್ಯಕ್ರಮ ನೆರವೇರಿದವು.
ವಾಣಿಶ್ರೀ ಸ್ವಾಗತಿಸಿ,ಜ್ಯೋತಿ ವಂದಿಸಿದರೆ, ಸುಮ ನಿರೂಪಿಸಿದರು.

    ನಿವೃತ್ತ ಶಿಕ್ಷಕಿ ಶಂಕರಮ್ಮ ಶಾಲೆಗೆ ಕೊಡುಗೆ ಯಾಗಿ ನೀಡಿದ ಟಿವಿ ಯನ್ನು ಮುಖ್ಯ ಶಿಕ್ಷಕರು ಸ್ವೀಕರಿಸಿ ಅಭಿನಂದಿಸಿದರು.

   ನಿಕಟ ಪೂರ್ವ ಅಧ್ಯಕ್ಷ ಕೃಷ್ಣಮೂರ್ತಿ ಸೇರಿದಂತೆ ಮಕ್ಕಳ ಪೋಷಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ವಿವಿದೆಡೆ ಸ್ವಾತಂತ್ರೋತ್ಸವ :
ಅನನ್ಯ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ:

ಭದ್ರಾವತಿ: ನಗರದ ಅಪ್ಪರ್ ಹುತ್ತಾದ ಅನನ್ಯ ಶಿಕ್ಷಣ ಸಂಸ್ಥೆಯ ಅನನ್ಯ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆ, 80 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಯನ್ನು ಆಚರಿಸಲಾಯಿತು. 

       ಕಲ್ಲೇಶ್ ಕುಮಾರ್ ಕೆ, ಮುಖ್ಯೋಪಾಧ್ಯಾಯ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು. ವಿದ್ಯಾರ್ಥಿಗಳಿಂದ ಭಾಷಣ, ನೃತ್ಯ, ಏಕಪಾತ್ರಾಭಿನಯ, ರ‍್ಯಾಂಪ್ ವಾಕ್, ಮೂಕಾಭಿನಯ ಪ್ರದರ್ಶನ, ಸ್ವತಂತ್ರ ಹೋರಾಟಗಾರರ ವೇಷಭೂಷಣ ಗಳಿಂದ ಕೂಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಕಣ್ಮನ ಸೆಳೆಯುವಂತಿತ್ತು.

    ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ನಾಗರಾಜ್ ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಅನಿಲ್ ಕುಮಾರ್ ಬಿ.ಎಸ್, ನವೀನ್ ಕುಮಾರ್ ಜಿ.ವಿ, ಭರತ್ ಕುಮಾರ್, ಸುರೇಶ್ ಕುಮಾರ್ ಜಿ, ಉಪಸ್ಥಿತರಿದ್ದರು. 

     ಕಾರ್ಯಕ್ರಮದಲ್ಲಿ ಶಾಲಾ ಆಡಳಿತಾಧಿಕಾರಿ ಮುಖ್ಯ ಶಿಕ್ಷಕ, ಉಪ ಮುಖ್ಯ ಶಿಕ್ಷಕಿ, ಶಿಕ್ಷಕ ವರ್ಗ, ಶಿಕ್ಷಕೇತರ ವರ್ಗ, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.

   ಧನಿಕ್ ಆರ್ ಸ್ವಾಗತಿಸಿ, ಹಿತಾನ್ ಪಿ ಗೌಡ ನಿರೂಪಿಸಿದರೆ,ಮನೀಶ್ ಉಪಾಧ್ಯಾಯ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು