ಭದ್ರಾವತಿ-"ಭದ್ರೆಯ ಸಾಧಕ ರತ್ನಗಳು"ಕೃತಿ ಲೋಕಾರ್ಪಣೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಭದ್ರಾವತಿ ತಾಲೂಕಿನ ವ್ಯಕ್ತಿಗಳ ಪರಿಚಯ ಇರುವಂತಹ ಕೃತಿ ಉತ್ತಮ ವಾಗಿದೆ ಎಂದು ಲಯನ್ಸ್ ಕ್ಲಬ್ ನ ಅಧ್ಯಕ್ಷ ಡಿ.ಶಂಕರಮೂರ್ತಿ ಹೇಳಿದರು.
ಅವರು ಲಯನ್ಸ್ ಕ್ಲಬ್ ಸಭಾಂಗಣ ದಲ್ಲಿ ಶ್ರೀಶಾ ಕಲಾ ವೇದಿಕೆ ಶಂಕರಘಟ್ಟ ಹಾಗೂ ಲಯನ್ಸ್ ಹಾಗೂ ಲಿಯೋ ಕ್ಲಬ್ ಸಹಯೋಗದಲ್ಲಿ ಆಶಾ ಶ್ರೀಧರ್ ಇವರ "ಭದ್ರೆಯ ಸಾಧಕ ರತ್ನಗಳು" ಕೃತಿ ಲೋಕಾರ್ಪಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಇನ್ನು ಹಲವಾರು ಕೃತಿಗಳು ಮೂಡಿ ಬರಲಿ ಶುಭ ಹಾರೈಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಮಾತನಾಡಿ, ಸಾಹಿತ್ಯ, ಸಂಗೀತ, ರಂಗಭೂಮಿ, ಕ್ರೀಡೆ, ವೈದ್ಯಕೀಯ, ಧ್ಯಾನ, ಸಮಾಜ ಸೇವೆ, ಭಜನೆ, ಮಿಮಿಕ್ರಿ ಹೀಗೆ ಕ್ಷೇತ್ರದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವಂತಹ ಪ್ರತಿಭೆಗಳನ್ನು ಈ ಕೃತಿಯಲ್ಲಿ ಅಳವಡಿಸಿಕೊಳ್ಳಲಾಗಿದ್ದು ಅವರು ಬೆಳೆದು ಬಂದ ಹಾದಿಯನ್ನು ಇಲ್ಲಿ ನೀಡಲಾಗಿದೆ. ಮತ್ತಷ್ಟು ಮಾಹಿತಿ ಯೊಂದಿಗೆ ವ್ಯಕ್ತಿ ಪರಿಚಯವನ್ನು ಮಾಡಿದಾಗ ಒಂದು ಉತ್ತಮ ಪುಸ್ತಕ ಆಗುತ್ತದೆ. ಈ ನಿಟ್ಟಿನಲ್ಲಿ ಲೇಖಕರು ಕಾರ್ಯನಿರತರಾಗಬೇಕು ಎಂದು ಕಿವಿಮಾತು ಹೇಳಿದರು

ಡಾ:ವೀಣಾಭಟ್, ನಾರಾಯಣ ಶೆಟ್ಟರು, ಕಾಂತಪ್ಪ, ವೈ.ಕೆ. ಹನುಮಂತಯ್ಯ, ಕ್ರೀಡಾಪಟು ವೈಶಾಖ್, ಬಹುಮುಖ ಪ್ರತಿಭೆ ಸಾನ್ವಿ, ಚಿತ್ರ ಕಲಾವಿದ ಗುರು, ಜ್ಯೂ.ಅಂಬರೀಷ್,ಲಿಂಗಾರಾಧ್ಯ, ಮಾಜಿ ಯೋಧ ಸುಧೀಂದ್ರ, ಮಹಿಳಾ ಅರ್ಚಕಿ ಶಾರದಮ್ಮ, ಸುಮಾ ಕಾರ್ತಿಕ್, ಗುಣ, ಜ್ಯೋತಿ, ಶೋಭಾ, ಹಸಿರು ಯೋಧ ಹಾಲೇಶಪ್ಪ ಇವರನ್ನು ಗೌರವಿಸಲಾಯಿತು.

ಉಮಾ, ರಮಾ ಕಲಘಟಗಿ, ಕವನ ವಾಚನ ಹಾಗೂ ನಾರಾಯಣ ಶೆಟ್ಟರು ಗುರುಗಳು ನೇತೃತ್ವದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಸಿರಿಗನ್ನಡ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ್ ಸಿ.ಎನ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ತಾ.ಕಸಾಪ ಅಧ್ಯಕ್ಷ ತಿಮ್ಮಪ್ಪ, ಜಿಲ್ಲಾ ಕಾರ್ಯದರ್ಶಿ ಡಿ.ಗಣೇಶ್, ಆರ್.ಶ್ರೀಧರ,ನಾಗರಾಜ್, ವಿನೋದ್ ಗಿರಿ, ದೇವರಾಜ್, ಕಮಲಾ ಕರ, ಪ್ರಕಾಶ್, ಮಂಜುನಾಥ ಗೌಡರು ಸೇರಿದಂತೆ ಹಲವರು ಭಾಗವಹಿಸಿದ್ದರು.

ಲೇಖಕಿ ಆಶಾ ಶ್ರೀಧರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಭಾರ್ಗವಿ ಪಿ.ಕೃತಿ ಪರಿಚಯಿಸಿದರು. ಮಹಾದೇವಿ ಪ್ರಾರ್ಥಿಸಿ, ಗುಣ ಸ್ವಾಗತಿಸಿದರೆ, ಭಾರತಿ ಜಯರಾಂ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು