ಸರ್ಕಾರಿ ವೈದ್ಯಕೀಯ ಕಾಲೇಜ್ ಚನ್ನಗಿರಿಯಲ್ಲಿ ಆರಂಭಿಸಿ: ಬಸವರಾಜು ಒತ್ತಾಯ

 

ವಿಜಯ ಸಂಘರ್ಷ



ಚನ್ನಗಿರಿ: ದಾವಣಗೆರೆ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜ್ ಆರಂಭಿಸಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜು ವಿ ಶಿವಗಂಗಾ ತಿಳಿಸಿದ್ದಾರೆ.

ಇಂದು ಮಾಧ್ಯಮದೊಂದಿಗೆ ಮಾತನಾಡಿ, ಹರಿಹರ ಹಾಗೂ ದಾವಣಗೆರೆ ಅವಳಿ ನಗರಗಳಾಗಿದ್ದು ಕೇವಲ 12 ಕಿಲೋ ಮೀಟರ್ ಅಂತರವಿದೆ. ಆದರೆ ಚನ್ನಗಿರಿ ತಾಲ್ಲೂಕು ಗಡಿ ಭಾಗದಲ್ಲಿರುವುದರಿಂದ
ದಾವಣಗೆರೆ ನಗರಕ್ಕೆ 80 ಕಿಲೋ ಮೀಟರ್ ದೂರವಾಗುತ್ತದೆ. ಇದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಎಲ್ಲತರಹದ ವ್ಯವಹಾರಗಳಿಂದ ವಂಚಿತವಾಗಿದೆ.

ಪಟ್ಟಣದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಆರಂಭಿಸುವುದರಿಂದ ಆಸ್ಪತ್ರೆ ಕೂಡ ಉನ್ನತ ದರ್ಜೆಗೆ ಏರಿಸಲ್ಪಡುತ್ತದೆ. ಈ ಭಾಗದ ರೋಗಿಗಳು ಮತ್ತು ವೈದ್ಯಕೀಯ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿ ಗಳಿಗೂ ಅನುಕೂಲ ವಾಗಲಿದೆ ಎಂದರು.

ಈ ಭಾಗದ ವಿದ್ಯಾರ್ಥಿಗಳು ಮೆಡಿಕಲ್ ಮಾಡಬೇಕೆಂದಲ್ಲಿ  ದಾವಣಗೆರೆ,  ಶಿವಮೊಗ್ಗಕ್ ಅಥವಾ ಹೊರಜಿಲ್ಲೆಗಳಿಗೆ ಹೋಗಬೇಕಾಗಿದೆ. ಇಲ್ಲಿನ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆಗುವ ತೊಂದರೆಗಳನ್ನ ತಪ್ಪಿಸಬಹುದು ಎಂದರು.

ಇಲ್ಲಿ ಮೆಡಿಕಲ್ ಕಾಲೇಜ್ ಆರಂಭ ಮಾಡುವುದರಿಂದ ತಾಲ್ಲೂಕ್ ಶೈಕ್ಷಣಿಕವಾಗಿ ಮುಂದುವರೆಯುತ್ತದೆ,  ಸರ್ಕಾರ ದಾವಣಗೆರೆ ಜಿಲ್ಲೆಯಲ್ಲಿ ಆರಂಭಿಸಲು ಮುಂದಾದ ವೈದ್ಯಕೀಯ ಕಾಲೇಜ್ ನ್ನ ಚನ್ನಗಿರಿಯಲ್ಲೇ ಸ್ಥಾಪಿಸಿ ಈ ಭಾಗದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಬೇಕೆಂದು ಒತ್ತಾಯಿಸಿದ್ದಾರೆ.

ವರದಿ:-ಅರುಣ್ ಚನ್ನಗಿರಿ

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು