ವಿಜಯ ಸಂಘರ್ಷ
ಮಂಡ್ಯ: ಕರೋನಾದಂತಹ ಸಂಕಷ್ಟ ಪರಿಸ್ಥಿತಿಯಲ್ಲಿ, ತಮ್ಮ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರಿಗೆ ಸರ್ಕಾರ ಕರೋನಾ ವಾರಿಯರ್ಸ್ ಎಂದು ಘೋಷಿಸಿದೆ. ಆದರೂ ಯಾವುದೇ ಸೌಲಭ್ಯಗಳನ್ನು ನೀಡದಿರುವುದು ಶೋಚನೀಯ ಸಂಗತಿ ಎಂದು ಪತ್ರಕರ್ತ ಬೂದನೂರು ಸತೀಶ್
ವಿಷಾದ ವ್ಯಕ್ತಪಡಿಸಿದರು.
ನಗರದ ಹಿಂದಿ ಸಭಾಭವನದಲ್ಲಿಂದು ಸಂಘದ ರಾಜ್ಯಾಧ್ಯಕ್ಷ ಕಲಾವಿದ ವಿಷ್ಣು ಅವರ ನಿರ್ದೇಶನದ ಮೇರೆಗೆ ಸಂಘದ ಜಿಲ್ಲಾ ಸಮಿತಿಯ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಮಾಜಮುಖಿಯಾಗಿ ಕಾರ್ಯನಿರ್ವ ಹಿಸುತ್ತಿರು ಪತ್ರಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ಸರ್ಕಾರ ವಿಶೇಷ ಕಾನೂನು ಕಾಯ್ದೆಯನ್ನು ಜಾರಿಗೊಳಿಸಿ ನಿರ್ಭೀತಿಯಿಂದ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಜಿಲ್ಲೆಯ ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ ಗೌರವಾಧ್ಯಕ್ಷರಾಗಿ ಹಿರಿಯ ಪತ್ರಕರ್ತ ವಿನಯ್‌ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಕಲ್ಪನೆ ವಾಹಿನಿ ಮುಖ್ಯಸ್ಥ ಜೈಕುಮಾರ್ ಮಾತನಾಡಿ, ಕೋವಿಡ್ ಸಂಕಷ್ಟ ಪರಿಸ್ಥಿತಿಯಲ್ಲಿರುವ ಪತ್ರಕರ್ತರ ಏಳ್ಗೆಗೆ ಸಂಘಟನಾತ್ಮಕ ಹೋರಾಟ ಮಾಡುವುದು ಇಂದಿನ ಅನಿವಾರ್‍ಯ ವಾಗಿದೆ. ಕೇರ ಸಂಘಟನೆ ಯಾವುದೇ ಸಂಘಕ್ಕೂ ಪರ್ಯಾಯವಲ್ಲ. ನೈಜತೆಯನ್ನು ಬಿಂಬಿಸುವ ಕರ್ತವ್ಯ ನಿರತರಾದ ತಮಗೆ ಸೂಕ್ತ ವೇದಿಕೆ ಕಲ್ಪಿಸದಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ ಅಸ್ತಿತ್ವಕ್ಕೆ ತರಲಾಗಿದ್ದು ಪತ್ರಿಕಾ ವಿತರಕರು, ಸುದ್ದಿವಾಹಿನಿಯವರು ಹಾಗೂ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುವ ಎಲ್ಲರಿಗೂ ಸದಸ್ಯತ್ವ ನೀಡುವುದರ ಜೊತೆಗೆ ಅವರ ಹಿತಚಿಂತನೆಗೆ ಬದ್ಧವಾಗಿದ್ದೇವೆ ಎಂದರು.
ಪಾಂಡವಪುರ ತಾಲ್ಲೂಕು ಅಧ್ಯಕ್ಷ ವಿಶ್ವನಾಥ್, ಗೌರವಾಧ್ಯಕ್ಷ ರಾಗಿಮುದ್ದನಹಳ್ಳಿ ಡಾ.ನಾಗೇಶ್, ಕೃಷ್ಣೇಗೌಡ, ರಾಜ್ಯಸಂಚಾಲಕ ಮೇಲುಕೋಟೆ ಶ್ರೀಕಾಂತ್, ಪತ್ರಕರ್ತರಾದ ಎಂ.ಶಿವಕುಮಾರ್, ಬಸರಾಳು ಕುಮಾರಸ್ವಾಮಿ, ಪಿಲಿಪ್, ಲೋಕೇಶ್, ಸುಮಾ, ಅನಿಲ್ ಕುಮಾರ್, ಶ್ರೀಕಾಂತ್, ಅಜಯ್, ಬಿ.ಕೃಷ್ಣ, ರಮೇಶ್, ಈರಣ್ಣ, ದಾಸ್ ಪ್ರಕಾಶ್ ಮತ್ತಿತರರಿದ್ದರು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795