ವಿಜಯ ಸಂಘರ್ಷ
ಭದ್ರಾವತಿ:
ಶ್ರೀ ಮೈಸೂರು ಕಾಗದ ಕಾರ್ಖಾನೆ ಕಾರ್ಮಿಕ ಸಂಘದ ಅಧ್ಯಕ್ಷ ಎಸ್.ಚಂದ್ರಶೇಖರ್ ರವರ ಮಾತೃ
ಭಾನುಮತಿ(85) ವಯೋ ಸಹಜ ಅನಾರೋಗ್ಯದ ಕಾರಣದಿಂದ ನಿನ್ನೆ ತಡರಾತ್ರಿ ಶಿವಮೊಗ್ಗದಲ್ಲಿ ನಿಧನರಾದರು.
ಮೃತರಿಗೆ ಚಂದ್ರಶೇಖರ್ ಸೇರಿದಂತೆ ಮೂವ್ವರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಬಿಟ್ಟು ಅಗಲಿದ್ದಾರೆ.ಅವರ ಅಂತ್ಯ ಕ್ರಿಯೆ ಇಂದು ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ನೆರವೇರಿತು.