ಸರ್ಕಾರ ಮಾಡದ ಕೆಲಸ ಶ್ರೀಕ್ಷೇತ್ರ ಧರ್ಮಸ್ಥಳ ನಡೆಸುತ್ತಿದೆ..!

 ವಿಜಯ ಸಂಘರ್ಷ


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಕಾರ್ಯಗಳು ನಾಗರಿಕ ಸಮಾಜಕ್ಕೆ ಮಾದರಿ, ಧರ್ಮಸ್ಥಳ ಸಂಘವು ಹೆಣ್ಣು ಮಕ್ಕಳಿಗೆ ವೃತ್ತಿಕೌಶಲ್ಯ ತರಬೇತಿ ಮಾರ್ಗದರ್ಶನ ನೀಡಿ ಆರ್ಥಿಕ ಸಬಲೀಕರಣ ಸಾಧಿಸಿ ಮುನ್ನಡೆಯಲು ವರದಾನವಾಗಿದೆ. ಅಕ್ಕಿಹೆಬ್ಬಾಳು ಗ್ರಾಮದಲ್ಲಿ ನಡೆದ 4225ನೇ ಪ್ರಗತಿಬಂಧು ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಪ್ರಾದೇಶಿಕ ನಿರ್ದೇಶಕ ಪಿ.ಗಂಗಾಧರ ರೈ ಅಭಿಮತ.


ಕೆ. ಆರ್. ಪೇಟೆ: ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ವಡ್ಡರಗುಡಿ  ಸುಜಾತ ಸಮುದಾಯ ಭವನದಲ್ಲಿ ನಡೆದ ಸಮಾರಂಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 4225ನೇ ಪ್ರಗತಿಬಂಧು ಸ್ತ್ರೀಶಕ್ತಿ ಸ್ವಸಹಾಯ ಸಂಘದ ಉದ್ಘಾಟನೆಯನ್ನು ಯೋಜನೆಯ ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕ ಪಿ. ಗಂಗಾಧರರೈ ನೆರವೇರಿಸಿ ಸಂಘದ ಪ್ರತಿನಿಧಿಗಳಿಗೆ ದಾಖಲಾತಿ ಗಳನ್ನು ಹಸ್ತಾಂತರಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರಲ್ಲಿ ಆತ್ಮ ವಿಶ್ವಾಸವನ್ನು ತುಂಬಿ ವೃತ್ತಿಕೌಶಲ್ಯದ ಮೂಲಕ ಉಪಕಸುಬುಗಳನ್ನು ಕೈಗೊಂಡು ಆರ್ಥಿಕ ಸಬಲೀಕರಣ ಸಾಧಿಸಿ ಸ್ವಾವಲಂಬಿ ಜೀವನವನ್ನು ನಡೆಸಲು ಬೇಕಾದ ಆರ್ಥಿಕ ನೆರವನ್ನು ಸಾಲಸೌಲಭ್ಯದ ಮೂಲಕ ನೀಡಿ ಕೈಹಿಡಿದು ಮುನ್ನಡೆಸುತ್ತಿದೆ. ಕೋವಿಡ್ ಸಂಕಷ್ಠದ ಸಮಯದಲ್ಲಿ ಸ್ವಸಹಾಯ ಸಂಘಗಳ ಆರ್ಥಿಕ ವ್ಯವಹಾರದ ಮೂಲಕ ಬಂದಂತಹ ಲಾಭಾಂಶವನ್ನೂ ಸಂಘದ ಪ್ರತಿನಿಧಿಗಳಿಗೆ ವಿತರಿಸಿದೆ ಎಂದು ತಿಳಿಸಿದರು.

ಕೆ.ಆರ್.ಪೇಟೆ :ತಾಲೂಕು ಸೇರಿದಂತೆ ಮಂಡ್ಯ ಜಿಲ್ಲೆಯಲ್ಲಿ ಕ್ಷೀರಕ್ರಾಂತಿ ಯಾಗಲು, ಗ್ರಾಮೀಣ ಪ್ರದೇಶದ ಜನರು ನೆಮ್ಮದಿಯ ಜೀವನ ನಡೆಸಲು ಹಸುಗಳನ್ನು ಕೊಳ್ಳಲು ಸಾಲಸೌಲಭ್ಯ ನೀಡಿ ಆಸರೆಯಾಗಿದೆ. ಬಡಜನರು ಹಾಗೂ ನಿರ್ಗತಿಕರನ್ನು ಗುರುತಿಸಿ ಮಾಸಿಕ ಮಾಶಾಸನ ನೀಡುತ್ತಿರುವ ಸಂಸ್ಥೆಯು ರೈತರು ಬೇಸಾಯವನ್ನು ಲಾಭದಾಯಕ ಉಧ್ಯಮವನ್ನಾಗಿ ಬದಲಾಯಿಸಿಕೊಳ್ಳಲು ಬೇಕಾದ ತಾಂತ್ರಿಕ ಮಾರ್ಗದರ್ಶನ ನೀಡುತ್ತಿದೆ ಎಂದು ವಿವರಿಸಿದರು..

ಅಕ್ಕಿಹೆಬ್ಬಾಳು ಗ್ರಾಮದ  ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ವಿಶ್ವನಾಥ್ ಮಾತನಾಡಿ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಪ್ರದೇಶದ ಜನರಿಗೆ ವರವಾಗಿದ್ದು ಸರ್ಕಾರದ ವಿವಿಧ ಯೋಜನೆಗಳ ಫಲವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಸೇವಾ ಪ್ರತಿನಿಧಿಗಳು ಹಾಗೂ ಮೇಲ್ವಿಚಾರಕರು ಬದ್ಧತೆಯಿಂದ ಕೆಲಸ ಮಾಡುವ ಮೂಲಕ ನಾಗರೀಕ ಸಮಾಜದ ಎಲ್ಲರಿಗೂ ಮಾದರಿ ಯಾಗಿದ್ದಾರೆ ಎಂದು ಶ್ಲಾಘಿಸಿದರು.

ರಾಜ್ಯ ಜನ ಜಾಗೃತಿ ಹೋರಾಟ ಸಮಿತಿಯ ಮಂಡ್ಯ ಜಿಲ್ಲಾ ಘಟಕದ ಸದಸ್ಯ ಎ.ಆರ್. ರಘು, ಪ್ರಸನ್ನ, ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲಕುಲಾಲ್, ತಾಲ್ಲೂಕು ಯೋಜನಾಧಿಕಾರಿ ಮಮತಾಶೆಟ್ಟಿ, ಅಕ್ಕಿಹೆಬ್ಬಾಳು ಹೋಬಳಿಯ ಮೇಲ್ವಿಚಾರಕಿ ಸರಸ್ವತಿ, ಅನ್ನಪೂರ್ಣ, ಕಾಂತಿಕಾಮಣಿ, ಕಾವ್ಯಹರೀಶ್ ಮತ್ತಿತರರು ಉಪಸ್ಥಿತರಿದ್ದರು..
ಇದೇ ಸಂದರ್ಭದಲ್ಲಿ ವಿಶೇಷಚೇತನರಿಗೆ ಸಾಧನ ಸಲಕರಣೆಗಳು, ಹಾಗೂ ವಾತ್ಸಲ್ಯ ಸಂಘಕ್ಕೆ ಅರೋಗ್ಯ ಕಾರ್ಡ್ ವಿತರಣೆ, ಮೈಕ್ರೋ ಬಚತ್ ಕ್ಲೈಮ್, ಲಾಭಾಂಶ ವಿತರಣೆಯ ಆದೇಶ ಪತ್ರಗಳನ್ನು ವಿತರಿಸಲಾಯಿತು.

  ✍🏻: ಸಿ.ಆರ್. ಜಗದೀಶ್, ಕೆ. ಆರ್. ಪೇಟೆ

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು