ರಾಜ್ಯಾದ್ಯಂತ ಇನೈದು ದಿನ ವ್ಯಾಪಕ ಮಳೆ: ಮಲೆನಾಡಲ್ಲಿ ಆರೆಂಜ್ ಅಲರ್ಟ್

 


ವಿಜಯ ಸಂಘರ್ಷ

ರಾಜ್ಯಾದ್ಯಂತ ಇನ್ನೂ ಐದು ದಿನ ವ್ಯಾಪಕ ಮಳೆ: ಕರಾವಳಿ, ಮಲೆನಾಡಲ್ಲಿ ಆರೆಂಜ್ ಅಲರ್ಟ್
ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮತ್ತು ಹಾಸನದಲ್ಲಿ ಇಂದು ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು: ರಾಜ್ಯದಲ್ಲಿ ಸುರಿಯುತ್ತಿ ರುವ ಮಳೆಯ ಆರ್ಭಟಕ್ಕೆ ಈಗಾಗಲೇ ಹಳ್ಳ ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಇದರ ಬೆನ್ನಲ್ಲೇ ಜುಲೈ 27ರವರೆಗೂ ರಾಜ್ಯಾದ್ಯಂತ ಮತ್ತಷ್ಟು ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದಲ್ಲಿ ಅಬ್ಬರಿಸುತ್ತಿರುವ ಮಳೆ ಮುಂದಿನ 5 ದಿನ ಮುಂದುವರಿ ಯಲಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗ ಳೂರು, ಕೊಡಗು, ಶಿವಮೊಗ್ಗ ಮತ್ತು ಹಾಸನದಲ್ಲಿ ಜುಲೈ 24 ರಂದು ಅತಿ ಹೆಚ್ಚು ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಈ ಏಳು ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಆರೆಂಜ್‌ ಅಲರ್ಟ್‌ ಘೋಷಿಸಿದೆ. ಜುಲೈ 25 ರಿಂದ 27ರ ವರೆಗೆ ಕೆಲವು ಕಡೆ ಮಾತ್ರ ಮಳೆಯಾಗಲಿದ್ದು, ಯಲ್ಲೋ ಆಲರ್ಟ್‌ ನೀಡಲಾಗಿದೆ.

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ ಮತ್ತು ಯಾದಗಿರಿ ಜಲ್ಲೆಗಳಿಗೆ ಜುಲೈ 24ರಂದು ಯೆಲ್ಲೋ ಅಲರ್ಟ್‌ ನೀಡಲಾಗಿದೆ. ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಸಾಧಾರಣ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಮಳೆ ಮುಂದುವರಿಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಎಲ್ಲೆಲ್ಲಿ ಭಾರಿ ಮಳೆ?
23ರ ಬೆಳಗ್ಗೆ 8 ಗಂಟೆವರೆಗೆ
- ಲೊಂಡಾ, ಬೆಳಗಾವಿ 380 ಮಿ.ಮೀ.,
- ಕದ್ರಾ, ಉ. ಕನ್ನಡ 340 ಮಿ.ಮೀ.
- ತಾಳಗುಪ್ಪ, ಶಿವಮೊಗ್ಗ 270 ಮಿ.ಮೀ.
- ಕೊಡಗು, ಹಾವೇರಿ 160 ಮಿ.ಮೀ.
- ಚಿಕ್ಕಮಗಳೂರು 160 ಮಿ.ಮೀ.
- ಎನ್‌ಆರ್‌ಪುರ 133.5 ಮಿ.ಮೀ
- ಸೊರಬ, ಶಿವಮೊಗ್ಗ 112 ಮಿ.ಮೀ

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು