ಸನ್ಮಾರ್ಗದಲ್ಲಿ ಮುನ್ನಡೆದು ಗುರಿ ಸಾಧಿಸಲು ಗುರುವಿನ ಮಾರ್ಗ ಅವಶ್ಯ: ಡಾ.ರಾಮಕೃಷ್ಣೇಗೌಡ

 

ವಿಜಯ ಸಂಘರ್ಷ



*ಕೆ.ಆರ್.ಪೇಟೆ ತಾಲ್ಲೂಕಿನ ಹೇಮಗಿರಿಯ ಆದಿಚುಂಚನಗಿರಿ ಶಾಖಾ ಮಠದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆದ ಗುರುಪೂರ್ಣಿಮಾ ಕಾರ್ಯಕ್ರಮ. ಧನ್ಯತೆ ಮೆರೆದ ಭಕ್ತಸಮೂಹ*

ಕೆ.ಆರ್.ಪೇಟೆ : ತಾಲ್ಲೂಕಿನ ಹೇಮಗಿರಿಯ ಆದಿಚುಂಚನಗಿರಿ ಶಾಖಾಮಠದ ಆವರಣದಲ್ಲಿ ಗುರುಪೂರ್ಣಿಮೆಯ ಅಂಗವಾಗಿ ಯುಗಯೋಗಿ, ಭೈರವೈಕ್ಯ, ಪದ್ಮಭೂಷಣ ಡಾ.ಶ್ರೀ.ಬಾಲಗಂಗಾ ಧರನಾಥ ಮಹಾಸ್ವಾಮೀಜಿಗಳ ಪುತ್ಥಳಿಗೆ ಪೂಜೆ, ಹೋಮ-ಹವನಗಳು ಶ್ರದ್ಧಾಭಕ್ತಿಯಿಂದ ನಡೆದವು.

ಆರೋಗ್ಯವಂತ ಸಮಾಜದ ನಿರ್ಮಾಣ ಕ್ಕೆ ಸನ್ಮಾರ್ಗದಲ್ಲಿ ಮುನ್ನಡೆದು ಗುರಿ ಸಾಧನೆ ಮಾಡಲು ಗುರುವಿನ ಮಾರ್ಗದರ್ಶನವು ಅತ್ಯಗತ್ಯವಾಗಿ ಬೇಕಾಗಿದೆ. ತ್ರಿವಿಧ ದಾಸೋಹಿಗಳಾಗಿ ಗ್ರಾಮೀಣ ಪ್ರದೇಶದ ಲಕ್ಷಾಂತರ ಬಡ ಮಕ್ಕಳಿಗೆ ಅಕ್ಷರದ ಜ್ಞಾನವನ್ನು ಕಲಿಸಿ ಊಟ, ವಸತಿ ನೀಡಿ ಕೈಹಿಡಿದು ಮುನ್ನಡೆಸಿದ್ದಲ್ಲದೇ ಬರಡಾಗಿದ್ದ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ಶ್ರೀ ಕ್ಷೇತ್ರವನ್ನು ಸುವರ್ಣಗಿರಿಯನ್ನಾಗಿಸಿ ದೇಶದಾಧ್ಯಂತ ಸಾವಿರಾರು ಶಿಕ್ಷಣ ಸಂಸ್ಥೆಗಳು ಹಾಗೂ ಮಠಮಾನ್ಯಗಳನ್ನು ಕಟ್ಟಿದ ಶ್ರೀ ಆದಿ ಚುಂಚನಗಿರಿ ಶ್ರೀಗಳ ದಿವ್ಯಚೇತ ನಕ್ಕೆ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುವ ಮೂಲಕ ಗುರುಪೂರ್ಣಿಮೆ ಕಾರ್ಯ ಕ್ರಮವನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಿರುವುದಾಗಿ ಡಾ.ರಾಮ ಕೃಷ್ಣೇಗೌಡ ಹೇಳಿದರು.

ಪಟ್ಟಣದ ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಶ್ರೀಗಳ ಪುತ್ಥಳಿ ಹಾಗೂ ಹೇಮಗಿರಿಯ ಬಿಜಿಎಸ್ ಪಬ್ಲಿಕ್ ಸ್ಕೂಲ್ ಆವರಣ ದಲ್ಲಿರುವ ಯುಗಯೋಗಿ ಶ್ರೀ ಬಾಲಗಂಗಾಧರನಾಥ ಶ್ರೀಗಳ ಪುತ್ಥಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಹೇಮಗಿರಿ ಶಾಖಾಮಠದ ಕಾರ್ಯದರ್ಶಿ ಗಳಾದ ಡಾ.ಜೆ.ಎನ್.ರಾಮಕೃಷ್ಣೇಗೌಡ ರ ನೇತೃತ್ವದಲ್ಲಿ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ಮಾಜಿಶಾಸಕ ಬಿ.ಪ್ರಕಾಶ್, ಕೆ.ಬಿ.ಚಂದ್ರಶೇಖರ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ, ಕಾಂಗ್ರೆಸ್ ಅಧ್ಯಕ್ಷ ಕಿಕ್ಕೇರಿ ಸುರೇಶ್, ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಹೆಚ್.ಟಿ.ಮಂಜು, ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ನಂಜಪ್ಪ, ಬಂಡಿಹೊಳೆ ಅಶೋಕ್ ಕುಮಾರ್, ಜಿ.ಪಂ ಮಾಜಿ ಉಪಾಧ್ಯಕ್ಷ ಬೇಲದಕೆರೆ ಪಾಪೇಗೌಡ,ನೋಟರಿಎಸ್.ಸಿ.ವಿಜಯಕುಮಾರ್, ಚಟ್ಟಂಗೆರೆ ಬಿ.ನಾಗೇಶ್, ಮುಖ್ಯ ಶಿಕ್ಷಕಿಯರಾದ  ಪವಿತ್ರ, ಅರ್ಪಿತಾ, ಪ್ರಾಂಶುಪಾಲ ಪ್ರಸಾದೇಗೌಡ ಸೇರಿದಂತೆ ನೂರಾರು ಜನರು ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುಕೃಪೆಗೆ ಪಾತ್ರರಾದರು.

ವರದಿ :ಸಿ. ಆರ್. ಜಗದೀಶ್,  ಕೆ.ಆರ್. ಪೇಟೆ

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು