ವಿಜಯ ಸಂಘರ್ಷ
ಭದ್ರಾವತಿ : ತಾಲೂಕಿನ ಬಿಆರ್ ಪಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಭದ್ರಾ ಜಲಾಶಯಕ್ಕೆ ಇಂದು ಬಾಗಿನ ಅರ್ಪಿಸಿದರು.
69.842 ಟಿಎಂ ಸಿ ನೀರು ಸಂಗ್ರಹ ವಿರುವ ಡ್ಯಾಂ ನಲ್ಲಿ ಪ್ರಸಕ್ತ 47.152 ಟಿಎಂಸಿ ನೀರು ಸಂಗ್ರಹವಿದೆ. 186 ಅಡಿ ಎತ್ತರದ ಭದ್ರೆ ಡ್ಯಾಂನಲ್ಲಿ 184.7 ಅಡಿ ನೀರಿದೆ.
ಜಲಾಶಯಕ್ಕೆ 19402 ಕ್ಯೂಸೆಕ್ ನೀರು ಒಳಹರಿವಿದ್ದು 18465 ಕ್ಯೂಸೆಕ್ಸ್ ಹೊರಹರಿವಿದೆ. ಬಲ ಮತ್ತು ಎಡದಂಡೆಯ ಮೂಲಕ 2150 ಕ್ಯೂಸೆಕ್, ಕ್ರಸ್ಟ್ ಗೇಟ್ ಮೂಲಕ 14449 ಅಪ್ಪರ್ ಭದ್ರದ ಮೂಲಕ 700 ಕ್ಯೂಸೆಕ್, ಗೇಟ್ ಮೂಲಕ 1000 ಕ್ಯೂಸೆಕ್ ನೀರು ಹರಿಸಲಾಗಿದೆ.
ಸಂಸದರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು.?
ಭದ್ರೆಗೆ ಬಾಗಿನ ಅರ್ಪಿಸಲು ಬಂದ ಸಂಸದ ಬಿ.ವೈ.ರಾಘವೇಂದ್ರರವರಿಗೆ ಯುವ ಕಾಂಗ್ರೆಸ್ ಘಟಕ, ಬ್ಲಾಕ್ ಕಾಂಗ್ರೆಸ್ ಮತ್ತು ಸ್ಥಳೀಯರಿಂದ ಮುತ್ತಿಗೆ ಹಾಕಲಾದ್ದಾರೆ.
ಭದ್ರ ನೋಡಲು ಬರುವ ಪ್ರವಾಸಿಗರಿಗೆ ಹಾಗೂ ಭದ್ರೆಯ ಬುಡದಲ್ಲಿ ಆಗಿರುವ ಕಳಪೆ ಕಾಮಗಾರಿಯ ಬಗ್ಗೆ ಯಾವ ಮಾಹಿತಿಯೂ ಇಲ್ಲದೆ ರೈತರು ಹಾಗೂ ಡ್ಯಾಂ ಸುತ್ತಮುತ್ತಲಿನ ಜನ ಆತಂಕ ದಿಂದಬದುಕುವಂತಾಗಿದೆ ಎಂದು ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿ, ಡ್ಯಾಂನ್ನ ಕಳಪೆ ಕಾಮಗಾರಿಯಿಂದ ಉಳಿಸಿಕೊಡ ಬೇಕೆಂದು ಸಂಸದರಲ್ಲಿ ಬೇಡಿಕೆ ಇಟ್ಟಿದ್ದಾರೆ. 2017 ರಲ್ಲಿ ಜಲಾಶಯದ ಕಾಂಕ್ರೀಟ್ ಬೇಸಿನ್ ಕಾಮಗಾರಿ ಪೂರ್ಣಗೊಳಿಸಿದ್ದು, 2019 ರಲ್ಲಿ 6.5 ಕೋಟಿ ಕಾಮಗಾರಿ ನೀರಿನಲ್ಲಿ ಕೊಚ್ಚಿಕೊಂಡಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಅವಿನಾಶ್, ವಿಶ್ವನಾಥ್, ಪುನೀತ್, ಸಿಂಗನ ಮನೆ ಗ್ರಾಪಂ ಸದಸ್ಯರು ಭಾಗವಹಿಸಿದ್ದರು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795