ವಿಜಯ ಸಂಘರ್ಷ
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಬಂಗಾರದ ಭೇಟೆ ಆಡಿದೆ. ಕ್ರೀಡಾಪಟು ನೀರಜ್ ಚೋಪ್ರಾರ ಅದ್ಭುತ ಸಾಧನೆಯಿಂದಾಗಿ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ನೀರಜ್ ಚೋಪ್ರಾ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದಿದ್ದಾರೆ. ಅರ್ಹತಾ ಸುತ್ತಿನಲ್ಲಿ ಕೇವಲ ಒಂದೇ ಒಂದು ಪ್ರಯತ್ನದಿಂದ ನೀರಜ್ ಫೈನಲ್ ತಲುಪಿದರು. ಫೈನಲ್‌ನಲ್ಲಿ ಸ್ಥಾನ ಪಡೆದ ನೀರಜ್ ಈಗ ಅಥ್ಲೆಟಿಕ್ಸ್‌ನಲ್ಲಿ ಚೊಚ್ಚಲ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದ ಎರಡನೇ ಭಾರತೀಯ ರಾದ ನಂತರ ನೀರಜ್ ಚೋಪ್ರಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಟ್ವಿಟರ್‌ನಲ್ಲಿ ಅಭಿನಂದಿಸಿದರು. ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ 87.58 ಮೀಟರ್ ಎಸೆದು ಚಿನ್ನದ ಪದಕ ಗೆದ್ದರು.
ರಾಷ್ಟ್ರಪತಿ -ಪ್ರಧಾನಿ ಅಭಿನಂದನೆ
ನೀರಜ್ ಚೋಪ್ರ ಇಂದು ಸಾಧಿಸಿದ್ದು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ಯುವ ನೀರಜ್ ಅಸಾಧಾರಣವಾಗಿ ಉತ್ತಮವಾಗಿ ಆಡಿದ್ದಾರೆ. ಅವರು ಗಮನಾರ್ಹವಾದ ಉತ್ಸಾಹದಿಂದ ಆಡಿದರು ಮತ್ತು ಅಪ್ರತಿಮ ಕ್ರೀಡಾ ಮನೋಭಾವವನ್ನು ತೋರಿಸಿದರು. ಚಿನ್ನ ಗೆದ್ದಿರುವುದಕ್ಕೆ ಅಭಿನಂದನೆಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ನೀರಜ್ ಚೋಪ್ರಾ ಅವರಿಂದ ಅಭೂತಪೂರ್ವ ಗೆಲುವು! ನಿಮ್ಮ ಜಾವೆಲಿನ್ ಎಸೆತ ಚಿನ್ನಕ್ಕಿದ್ದ ಅಡೆತಡೆಗಳನ್ನು ಮುರಿದು ಇತಿಹಾಸವನ್ನು ಸೃಷ್ಟಿಸಿದೆ. ನಿಮ್ಮ ಮೊದಲ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಪದಕವನ್ನು ನೀವು ಮನೆಗೆ ತರುತ್ತಿದ್ದೀರಿ. ನಿಮ್ಮ ಸಾಧನೆ ನಮ್ಮೆಲ್ಲ ಯುವಕರಿಗೆ ಸ್ಫೂರ್ತಿ ನೀಡುತ್ತದೆ. ಭಾರತ ಸಂಭ್ರಮಿಸಿದೆ! ಹೃತ್ಪೂರ್ವಕ ಅಭಿನಂದನೆಗಳು! ಎಂದು ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795