ವಿಜಯ ಸಂಘರ್ಷ
ಭದ್ರಾವತಿ: ಗುತ್ತಿಗೆ ಕಾರ್ಮಿಕರ ಜೀವನಮಟ್ಟ ಸುಧಾರಣೆಗಾಗಿ ಕಾರ್ಮಿಕರು ಒಗ್ಗಟ್ಟಾಗಬೇಕು, ಸರ್ಕಾರಿ ನೌಕರರಿಗೆ ಸಿಗುವಂತಹ ಸೌಲಭ್ಯಗಳು ಗುತ್ತಿಗೆ ಕಾರ್ಮಿಕರಿಗೂ ಸಿಗುವಂತಾಗ ಬೇಕು ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ಇಂದು ಗುತ್ತಿಗೆ ಕಾರ್ಮಿಕರ ಸಭೆಯnಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗುತ್ತಿಗೆ ಕಾರ್ಮಿಕರ ಯೋಗ ಕ್ಷೇಮದ ವಿಚಾರದ ವಿಷಯದಲ್ಲಿ ಆಸಕ್ತಿ ವಹಿಸುತ್ತಾ ಎಲ್ಲರ ಹಿತ ಕಾಪಾಡುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇನೆ,ಡಾ: ಬಿ.ಆರ್. ಅಂಬೇಡ್ಕರ್ ರವರ ಧ್ಯೇಯ ಸಂಕಲ್ಪವಾದ ಶಿಕ್ಷಣ, ಸಂಘಟನೆ ಹೋರಾಟ ಎಂಬ ಪರಿಕಲ್ಪನೆಯೊಂದಿಗೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡ ಬೇಕು, ನಿರಂತರ ನ್ಯಾಯ ಸಮ್ಮತ ಹೋರಾಟವೇ ಮನುಷ್ಯನಿಗೆ ಯಶಸ್ಸಿನ ಹಂತಕ್ಕೆ ತಲುಪಿಸುತ್ತದೆ ಎಂದರು.
ಗುತ್ತಿಗೆ ಕಾರ್ಮಿಕರ ಸಂಕಷ್ಟಗಳಿಗೆ ಭರಪೂರ ಸ್ಪಂದಿಸುವುದಾಗಿ ಹಾಗೂ ಕೆಲ ಸಮಸ್ಯೆಗಳನ್ನು ಸಭೆಯಲ್ಲಿಯೇ ಬಗೆಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಮಿಕರ ಯೋಗ ಕ್ಷೇಮ ಸಂಭಾವನೆ ಯ ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡಬಾರದು.ಈ ಸಂಬಂಧ ಸರ್ಕಾರದ ಗಮನಕ್ಕೆ ತಲುಪಿಸುವ ನಿಟ್ಟಿನಲ್ಲಿ ಪ್ರಯತ್ನಿಸುವು ದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಬಿ.ಕೆ.ಮೋಹನ್, ರಿಯಾಜ್, ಟೀಕು ಮಂಜುನಾಥ್, ಬಿ.ಟಿ.ನಾಗರಾಜ್,ಟಿಪ್ಪುಸುಲ್ತಾನ್,ಮೋಹನ್, ಬಷೀರ್ ತಹಸೀಲ್ದಾರ್ ಪ್ರದೀಪ್, ನಗರಸಭಾ ಆಯುಕ್ತ ಪರಮೇಶ್ವರ್, ಕಂದಾಯಾಧಿಕಾರಿ ರಾಜ್ ಕುಮಾರ್, ಗುತ್ತಿಗೆ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ನಾರಾಯಣ್ ಗೌಡ, ರಾಮನಗರ ಗುತ್ತಿಗೆ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಛಲಪತಿ, ಮುಖಂಡರಾದ ಎಸ್.ಎಸ್.ಭೈರೇ ಗೌಡ, ಗಂಗಾಧರ್, ಡಿ.ಟಿ.ಶ್ರೀನಿವಾಸ್, ದೇವೇಂದ್ರ, ಗುಂಡಣ್ಣ, ಗುತ್ತಿಗೆ ಕಾರ್ಮಿಕ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795