ಪ್ರವಾಹ ಪೀಡಿತ ಪ್ರದೇಶ ಗಳ ಸ್ಥಳಕ್ಕೆ ಸಚಿವದ್ವೇಯರ ಭೇಟಿ ಪರಿಶೀಲನೆ

 

ವಿಜಯ ಸಂಘರ್ಷ



ತೀರ್ಥಹಳ್ಳಿ: ಸಿಎಂ ಬೊಮ್ಮಾಯಿ ನಿರ್ದೇಶನದಂತೆ ಎಲ್ಲಾ ಸಚಿವರು ರಾಜ್ಯದಲ್ಲಿನ ಪ್ರವಾಹ ಪೀಡಿತ ಪ್ರದೇಶಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲು ಇಂದು ತೀರ್ಥಹಳ್ಳಿಗೆ ಭೇಟಿ ನೀಡಿರುವುದಾಗಿ  ಸಚಿವ ಈಶ್ವರಪ್ಪ ತಿಳಿಸಿದರು.

ಅವರು ಕ್ಷೇತ್ರದ ವಿವಿಧೆಡೆ ಮಳೆ ಹಾನಿಗಳ ಬಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಇದುವರೆಗೂ 27 ಜಾನುವಾರುಗಳು ಸಾವುಕಂಡಿದ್ದು, ಮನೆ ಹಾನಿಗಳ ಬಗ್ಗೆ ರಸ್ತೆ, ಸೇತುವೆ ಬ್ರಿಡ್ಜ್, ಅಂಗನವಾಡಿ ಕಟ್ಟಡ, ಜೀವ ಕಳೆದುಕೊಂಡಿರುವ ಬಗ್ಗೆ ಸ್ಥಳಾಂತರದ ಬಗ್ಗೆ ಸರ್ವೆ ಆರಂಭವಾ ಗಿದೆ ಎಂದರು.

ಜಿಲ್ಲೆಯಲ್ಲಿ 418 ಕೋಟಿ ನಷ್ಟ ಆಗಿದೆ. 4 ಜನ ಸಾವು ಕಂಡಿದ್ದಾರೆ, 478 ಮನೆಗಳು ಸಂಪೂರ್ಣ ಹಾನಿಯಾಗಿವೆ. ಭಾಗಶಃ ಮನೆಗಳು 540 ಬಿದ್ದಿವೆ. 56 ಕಿಮಿಗಳು ರಾಜ್ಯ ಹೆದ್ದಾರಿ,138 ಕಿಮಿ ಜಿಲ್ಲಾ ಮುಖ್ಯ ರಸ್ತೆ, 1243 ಗ್ರಾಮೀಣ ರಸ್ತೆ, 168 ಕಿಮಿ ನಗರ ರಸ್ತೆಗಳು, 196 ಸೇತುವೆಗಳು, 2033 ವಿದ್ಯುತ್ ಕಂಬಗಳು, 309 ಅಂಗನವಾಡಿ ಕಟ್ಟಡಗಲು, 100 ಪ್ರಾಥಮಿಕ ಶಾಲೆ, 326 ಕೆರೆಗಳು ಹಾಳಾಗಿವೆ ಎಂದರು.

ಈಗಾಗಲೇ 10 ಕೇಂದ್ರಗಳಲ್ಲಿ 640 ಜನರಿಗೆ ಆಶ್ರಯ ನೀಡಲಾಗಿದ್ದು, 242 ಜನರನ್ನ ಬೇರೆಡೆ ವಸತಿ ಒದಗಿಸ ಲಾಗಿದೆ. ಸಣ್ಣ ರೈತರ 4609 ಹೆಕ್ಟರ್ ಕೃಷಿ ಭೂಮಿ, 1132 ಹೆಕ್ಟೇರ್ ತೋಟಗಾರಿಕೆ ಭೂಮಿ, 240 ಹೆಕ್ಟೇರ್ ಇತರೆ ಕೃಷಿ ಭೂಮಿಗಳು ಮಳೆಯಿಂದ ಹಾಳಾಗಿವೆ. ಒಟ್ಟು 418 ಕೋಟಿ ರೂ.ಗಳು ನಷ್ಟವಾಗಿವೆ.

ಈ ಬಾರಿ ತೀರ್ಥಹಳ್ಳಿಯಲ್ಲಿ ಅತಿಹೆಚ್ಚು ಮಳೆ ಸುರಿದಿದೆ. ಅರ್ಧಂಬರ್ದ  ಮನೆಗಳು ಬಿದ್ದಿವೆ.  ಪರಿಹಾರ ಹೇಗೆ ನೀಡುವುದು ಎಂದು ಅಧಿಕಾರಿಗಳು ಸರ್ವೆ ಮಾಡಿ ವರದಿ ನೀಡಲಿದ್ದಾರೆ. ಇಂದು ಮತ್ತು ನಾಳೆ ತೀರ್ಥಹಳ್ಳಿ, ಸಾಗರ ಸೊರಬ ಹೊಸನಗರ ಭಾಗದಲ್ಲಿ ಪರಿಶೀಲನೆ ನೀಡಲಾಗುವುದು‌ ಎಂದರು.

ಗುಡ್ಡದಿಂದ ಮಣ್ಣು ತೆಗೆಯಲಾಗುತ್ತಿದೆ. ಹಾಗಾಗಿ ಗುಡ್ಡಕುಸಿತವಾಗುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಯನ್ನ ಅಲ್ಲಗೆಳೆದ ಸಚಿವರು ಇದಕ್ಕೆ ಸಂಬಂಧವಿಲ್ಲ. ನವೀನ್ ಎಂಬ ತೋಟ ಗುಡ್ಡ ಕುಸಿತದಿಂದ ಸಂಪೂರ್ಣ ಹಾಳಾಗಿದೆ.ಪರಿಹಾರಕ್ಕೆ ವಿಚಾರ ಮಾಡಲ್ಲ‌. ಎನ್ ಡಿ ಆರ್, ಎಫ್ ಸರ್ಕಾರದ ಮಟ್ಟದಲ್ಲಿ ಪರಿಹಾರ ನೀಡಲಾಗುವುದು ಎಂದರು.

ಗುಡ್ಡ ಕುಸಿತಕ್ಕೊಳದವರಿಗೆ ಕಷ್ಟವಿದೆ. ಎನ್ ಡಿ ಆರ್ ಎಫ್ ಪ್ರಕಾರ ಪರಿಹಾರ ಹಂಚಲು ಹೋದರೆ ಸಾಕೋಗಲ್ಲ. ಹಾಗಾಗಿ ರಾಜ್ಯದಲ್ಲಿ ವರದಿ ತರಿಸಿಕೊಂಡು ಎನ್ ಡಿ ಆರ್ ಎಫ್ ಹಣ ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದರು.

ಸಚಿವ ಆರಗ ಮಾತನಾಡಿ, ಕ್ಯಾಬಿನೆಟ್ ನಲ್ಲಿ ನಿರ್ಣಯಿಸಿದಂತೆ ಮಳೆಹಾನಿ ಪರಿಶೀಲನೆಗೆ ಸೂಚನೆ ನೀಡಲಾಗಿದೆ, ಸಚಿವ ಈಶ್ವರಪ್ಪ ನನ್ನ ಕ್ಷೇತ್ರಕ್ಕೆ ಬರುವುದರಿಂದ ಇಂದು ಇಲ್ಲಿದ್ದೇನೆ. ನಾಳೆ ಚಿಕ್ಜಮಗಳೂರಿಗೆ ಭೇಟಿ ಮಾಡಲಿದ್ದೇನೆ ಎಂದರು.

15 ದಿನದಮಳೆ ಬೀಳುವ 300 ಮಿಮಿ ಒಂದೇ ದಿನ ಬಿದ್ದಿದೆ. ಹಾಗಾಗಿ ಹಾನಿಯಾಗಿದೆ. ಒಂದು ವಾರದೊಳಗೆ ಹಾನಿಗಳ ಬಗ್ಗೆ ವರದಿಯನ್ನ ಸರ್ಕಾರಕ್ಕೆ ನೀಡಲಾಗುವುದು. ಜೆಸಿಬಿ ಕೆಲಸ ಮಾಡುವ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕಿದೆ.

ಕೊರೋನ ನಿಯಂತ್ರಣದ ಬಗ್ಗೆ ಸೋಮವಾರ ಬೆಳಿಗ್ಗೆ 10 ಗಂಟೆಗೆ ಸಭೆ ನಡೆಸಿ ನಂತರ 11-30 ಕ್ಕೆ ಶಿವಮೊಗ್ಗದಲ್ಲಿ ವಿಶೇಷವಾಗಿ ಸಭೆ ಕರೆಯಲಿದ್ದೇವೆ ಎಂದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು