ವಿಜಯ ಸಂಘರ್ಷ
ಕೊರಟಗೆರೆ : ತಾಲ್ಲೂಕಿನ ಚನ್ನರಾಯನ ದುರ್ಗ ಹೋಬಳಿಯ ಕಲ್ಲುಗುಟ್ಟರಹಳ್ಳಿ ಗ್ರಾಮದ ಸರ್ವೇ ನಂಬರ್ 20/5 ಬಳವೀರನ ಹಳ್ಳಿ ಸರ್ವೆ ನಂಬರ್ 9/5 ರ ಖಾತೆಗೆ ಸಂಬಂಧಿಸಿದಂತೆ ತಕರಾರು ವ್ಯಾಜ್ಯವು ತಹಸೀಲ್ದಾರ್ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದ್ದು ಕಚೇರಿ ಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕೇಸ್ ವರ್ಕರ್ ಸ್ವಾಮಿ ಎಂಬುವವರು ಖಾತೆ ಮಾಡಿ ಕೊಡುತ್ತೇನೆ ಎಂದು ಹೇಳಿ 20000/- ಲಂಚಕ್ಕೆ ಬೇಡಿಕೆ ಇಟ್ಟಿರು ತ್ತಾರೆ ಎಂದು ನೀಡಿದ್ದ ದೂರಿನ ಮೇರೆಗೆ ತುಮಕೂರು ಎಸಿಬಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿತ್ತು.
ಸೆ : 7 ರ ಇಂದು ಸಂಜೆ ಕೊರಟಗೆರೆ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ವಡ್ಡಗೆರೆ ರಸ್ತೆಯ ಶ್ರೀಕಂಠಪ್ಪ ಟೀ ಸ್ಟಾಲ್ ಬಳಿ ಆರೋಪಿ ಸ್ವಾಮಿ ಗ್ರಾಮ ಲೆಕ್ಕಾಧಿಕಾರಿ (ಕೇಸ್ ವರ್ಕರ್) ರವರು ಜೊತೆಯಲ್ಲಿದ್ದ ರವಿಕಿರಣ್ ಎಂಬವರಿಗೆ ಲಂಚದ ಹಣ 10000/- ರೂ ಕೊಡು ವಂತೆ ಪಿರ್ಯಾದಿಗೆ ಸೂಚಿಸಿದ್ದು. ಅದರಂತೆ ರವಿಕಿರಣ್ ಲಂಚದ ಹಣ ಪಡೆದುಕೊಳ್ಳುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ ಲಂಚದ ಹಣ ಪಡೆಯುತ್ತಿದ್ದ ರವಿಕಿರಣ್ ರನ್ನ ವಶಕ್ಕೆ ಪಡೆದಿರುತ್ತಾರೆ.
ತುಮಕೂರು ಎಸಿಬಿ ಡಿವೈಎಸ್ಪಿ ಎಸ್.ಮಲ್ಲಿಕಾರ್ಜುನ ಚುಕ್ಕಿ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಎಂ.ವೀರೇಂದ್ರ, ವಿಜಯಲಕ್ಷ್ಮಿ ಹಾಗೂ ಸಿಬ್ಬಂದಿಗಳಾದ ನರಸಿಂಹ ರಾಜು, ಕೆ.ಪಿ.ಶಿವಣ್ಣ, ಎಂ.ಚಂದ್ರ ಶೇಖರ್, ನರಸಿಂಹರಾಜು, ಗಿರೀಶ್ ಕುಮಾರ್, ಯಶೋಧ ರಮೇಶ್, ಮಹೇಶ್ ಕುಮಾರ್ ದಾಳಿಯಲ್ಲಿ ಭಾಗವಹಿಸಿರುತ್ತಾರೆ.
ವರದಿ:ಮಂಜುಸ್ವಾಮಿ.ಎಂ.ಎನ್.
ಜಿಲ್ಲಾ ವರದಿಗಾರರು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795