ಶಿವಮೊಗ್ಗದಲ್ಲಿ ಭಾರೀ ಮಳೆ : ತಗ್ಗು ಪ್ರದೇಶಗಳು ಜಲಾವೃತ–ಜನಜೀವನ ಅಸ್ತವ್ಯಸ್ತ!

 

ವಿಜಯ ಸಂಘರ್ಷ

ರಾಜಕಾಲುವೆ ಅವ್ಯವಸ್ಥೆ - ಪ್ರತಿಷ್ಠಿತ ಗೋಪಾಳಗೌಡ ಬಡಾವಣೆಯಲ್ಲಿ ಮನೆಗಳಿಗೆ ನುಗ್ಗಿದ ನೀರು!!



ಶಿವಮೊಗ್ಗ : ನಗರ ಹಾಗೂ ತಾಲೂಕಿನ ವಿವಿಧೆಡೆ ಬುಧವಾರ ಬಿದ್ದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ ಗೊಂಡಿತ್ತು. ಹಲವೆಡೆ ರಾಜ ಕಾಲುವೆ- ಚರಂಡಿಗಳು ಉಕ್ಕಿ ಹರಿದು ರಸ್ತೆ, ಮನೆಗಳು ಜಲಾವೃತವಾಗಿದ್ದವು.


ಮಂಗಳವಾರ ಸಂಜೆ ನಗರದಲ್ಲಿ ಭಾರೀ ಮಳೆಯಾಗಿತ್ತು. ನಂತರ ಬಿಡುವು ನೀಡಿದ್ದ ವರ್ಷಧಾರೆ, ಬುಧವಾರ ಬೆಳಿಗ್ಗೆಯಿಂದ ಎಡಬಿಡದೆ ಬೀಳಲಾರಂಭಿಸಿತು. ಸುಮಾರು ಎರಡು ಗಂಟೆಗೂ ಅಧಿಕ ಕಾಲ ನಿರಂತರವಾಗಿ ಮಳೆಯಾಯಿತು.

ನಗರದ ಪ್ರತಿಷ್ಠಿತ ಬಡಾವಣೆ ಗಳಲ್ಲೊಂದಾದ ಗೋಪಾಲಗೌಡ ಬಡಾವಣೆಯಲ್ಲಿ ರಾಜಕಾಲುವೆ ಉಕ್ಕಿ ಹರಿದ ಪರಿಣಾಮ, ಎ ಹಾಗೂ ಸಿ ಬ್ಲಾಕ್ ಗಳಲ್ಲಿ ಸುಮಾರು 50 ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿತ್ತು. ರಸ್ತೆಗಳು ಜಲಾವೃತವಾಗಿದ್ದವು. ಇದರಿಂದ ನಿವಾಸಿಗಳು ತೀವ್ರ ತೊಂದರೆ ಎದುರಿಸಿದರು..

‘ರಾಜಕಾಲುವೆ ಅವ್ಯವಸ್ಥೆ ಹಾಗೂ ಕೆಲವೆಡೆ ಹೂಳು ತುಂಬಿಕೊಂಡಿ ರುವುದರಿಂದ ಭಾರೀ ಮಳೆಯಾದ ವೇಳೆ ಎ ಮತ್ತು ಸಿ ಬ್ಲಾಕ್ ಗಳಿಗೆ ನೀರು ನುಗ್ಗುತ್ತಿದೆ. ರಸ್ತೆ, ಮನೆಗಳು ಜಲಾವೃತವಾಗುತ್ತಿದೆ. ಇದು ಪ್ರತಿ ವರ್ಷದ ಸಮಸ್ಯೆಯಾಗಿದೆ. ಆದರೆ ಇಲ್ಲಿಯವರೆಗೂ ಮಹಾನಗರ ಪಾಲಿಕೆ ಆಡಳಿತ ಸಮಸ್ಯೆ ಪರಿಹಾರಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಿದೆ’ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ಹೊಸಮನೆ, ಅಣ್ಣಾನಗರ ಬಡಾವಣೆ 2, 3 ನೇ ತಿರುವಿನಲ್ಲಿಯೂ ಮನೆಗಳು ಜಲಾವೃತವಾಗಿವೆ. ಸಹ್ಯಾದ್ರಿ
ಕಾಲೇಜ್ ಗೂ ಮಳೆ ನೀರು ನುಗ್ಗಿರುವ ವರದಿಗಳು ಬಂದಿವೆ.

ಕೆರೆ ಕೋಡಿ: ತಾಲೂಕಿನ ಬಸವನಗಂಗೂರು ಗ್ರಾಮದ ಹಿರೇಕೆರೆ ಮತ್ತೆ ಕೋಡಿ ಬಿದ್ದು ಹರಿಯ ಲಾರಂಭಿಸಿದೆ. ಇದರಿಂದ ತಗ್ಗುಪ್ರದೇಶ ದಲ್ಲಿರುವ ಕೆ.ಹೆಚ್.ಬಿ. ಪ್ರೆಸ್ ಕಾಲೋನಿಗೆ ಕೋಡಿ ನೀರು ನುಗ್ಗಿದೆ. ರಸ್ತೆ, ಚರಂಡಿ, ಯುಜಿಡಿ ಜಲಾವೃತವಾಗಿದೆ.

✍️ ವರದಿ : ಬಿ.ರೇಣುಕೇಶ್

ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು