ಉಕ್ಕಿನ ನಗರಿಯಲ್ಲಿ ಮಳೆಯ ಆರ್ಭಟ : ಕೆ ಸಿ ಬ್ಲಾಕ್ ನಲ್ಲಿ ಮನೆಗಳಿಗೆ ನುಗ್ಗಿದ ನೀರು

 

ವಿಜಯ ಸಂಘರ್ಷ



ಭದ್ರಾವತಿ : ಉಕ್ಕಿನ ನಗರಿ ಭದ್ರಾವತಿಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ನಿನ್ನೆ ರಾತ್ರಿಯಿಂದ ಸುರಿದ ಮಳೆ ಇಂದು ಮಧ್ಯಾಹ್ನ ವರೆಗೂ ಮುಂದುವರೆದಿದೆ.



ನಿನ್ನೆ ರಾತ್ರಿಯಿಂದ ಬಹುತೇಕ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು, ತಡರಾತ್ರಿ ಆರಂಭವಾದ ಮಳೆ ಆರ್ಭಟ ಇನ್ನೂ ಮುಂದುವರೆಯಿತು

ನಗರದ ಜನ್ನಾಪುರ, ಕೆ.ಸಿ.ಬ್ಲಾಕ್, ನ್ಯೂಟೌನ್, ಪೇಪರ್ ಟೌನ್, ಸುರಿಗೀತೋಪು, ಹೊಸಮನೆ, ಸಾದತ್ ಕಾಲೋನಿ, ಅನ್ವರ್ ಕಾಲೋನಿ,  ಸೇರಿದಂತೆ ಗ್ರಾಮಾಂತರ ಪ್ರದೇಶಗಳ ಹಲವೆಡೆ ಮಳೆ ಸುರಿದಿದೆ.



ಇದರಿಂದ ಜನ್ನಾಪುರ ಕೆಸಿ ಬ್ಲಾಕ್ ನ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ನದಿಯಂತಾದ ರಸ್ತೆಗಳಲ್ಲಿ ಸಂಚರಿಸಲಾಗದೆ ವಾಹನ ಸವಾರರು ಪರದಾಡಿದರು. ಅಲ್ಲದೆ ಮುಂಜಾನೆ ವರೆಗೂ ಸುರಿದ ಮಳೆರಾಯ ಇಂದು ಬೆಳಗ್ಗೆ ಕೊಂಚ ಬ್ರೇಕ್ ಕೊಟ್ಟಿದ್ದ ನಾದರೂ ಬಿಡುವಿನ ನಂತರ ಮತ್ತೆ ತನ್ನ ಆರ್ಭಟ ಮುಂದುವರೆಸಿದ್ದಾನೆ.

ಪರಿಣಾಮ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ. ಮಳೆಯಿಂದ ಕೆಲವು ಪ್ರದೇಶಗಳಲ್ಲಿ ಮರಗಳು ಬಿದ್ದಿದ್ದು, ಇನ್ನು ಕೆಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಇಲ್ಲಿನ ಕೆಸಿ ಬ್ಲಾಕ್ ನಿವಾಸಿಗಳು ನಗರಸಭೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು