ವಿಜಯ ಸಂಘರ್ಷ
ವಿಜಯಪುರ: ಲೋಕಸಭೆ ಹಾಗೂ ರಾಜ್ಯಸಭೆಯ ಉಭಯ ಸದನಗಳ 146 ಸಂಸದರನ್ನು ಅಮಾನತ್ತು ಗೊಳಿಸಿದ್ದನ್ನು ಖಂಡಿಸಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಡಾ.ಬಿ. ಆರ್. ಅಂಬೇಡ್ಕರ್ ವೃತ್ತದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ರಾಜು ಆಲಗೂರ ನೇತೃತ್ವದಲ್ಲಿ ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಜಿಲ್ಲಾಧ್ಯಕ್ಷ ರಾಜು ಆಲಗೂರ ಮಾತನಾಡಿ ಕೇಂದ್ರದ ಬಿಜೆಪಿ ಸರಕಾರ ಸಂವಿಧಾನ ವಿರೋಧಿಯಾಗಿದ್ದು, ಇವರಿಗೆ ಸಂವಿಧಾನದ ಮೇಲೆ ವಿಶ್ವಾಸವಿಲ್ಲ ಹಾಗೂ ರಾಷ್ಟ್ರದ ಪ್ರಜಾತಂತ್ರ ವ್ಯವಸ್ಥೆಗೆ ದಕ್ಕೆ ಮಾಡುತ್ತಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿರುವುದು. ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ರಾಜಕೀಯ ದ್ವೇಷ ಸಾಧಿಸಲು ಹೊರಟಿರುವ ಕೇಂದ್ರ ಸರಕಾರ ವಿರೋಧ ಪಕ್ಷಗಳ ಮೇಲೆ ಗದಾಪ್ರಹಾರ ಮಾಡುತ್ತಿದೆ. ಲೋಕಸಭೆ ಹಾಗೂ ರಾಜ್ಯಸಭೆಯ ಸಭಾಪತಿ ಗಳನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟು ಕೊಂಡು ವಿರೋಧ ಪಕ್ಷಗಳನ್ನು ನಿರ್ನಾಮ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಜನವಿರೋಧಿ ನೀತಿಗಳನ್ನು ಪ್ರಶ್ನೆ ಮಾಡಿದಾಗ ಹಿಂಬಾಗಿಲಿನಿoದ ಕೇಂದ್ರದ ಬಿಜೆಪಿ ಸರಕಾರ ವಿರೋಧ ಪಕ್ಷದ ಉಭಯ ಸದನಗಳ ಸಂಸದರನ್ನು ಅಮಾನತ್ತುಗೊಳಿಸು ವುದು ಯಾವುದೇ ಒಂದು ಸಣ್ಣ ವಿಷಯಕ್ಕೆ ಅನರ್ಹಗೊಳಿಸುವ ಕೃತ್ಯಗಳಿಗೆ ಕೈಹಾಕಿರುವುದು ಈ ದೇಶದ ದುರಂತಗಳಲ್ಲಿ ಒಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತ ಸ್ವತಂತ್ರಗೊoಡ ನಂತರ ಇಷ್ಟೊಂದು ಸಂಖ್ಯೆಯಲ್ಲಿ ಸಂಸದರನ್ನು ಅಮಾನತ್ತು ಗೊಳಿಸಿದ್ದು ಇದೇ ಮೊದಲ ಬಾರಿಯಾಗಿದೆ. ಈ ದೇಶದ ಜನ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುಂದಿನ 2024 ರ ಲೋಕಸಭಾ ಚುನಾವಣೆಯಲ್ಲಿ ಮತದಾರರು ತಕ್ಕಪಾಠ ಕಲಿಸಲಿದ್ದಾರೆ. ವಿರೋಧ ಪಕ್ಷಗಳನ್ನು ಹೊರಗಿಟ್ಟು, ಜನವಿರೋಧಿ ಬಿಲ್‌ಗಳನ್ನು ಮಂಡಿಸಿ ಅವುಗಳನ್ನು ಪಾಸ್ ಮಾಡಿಕೊಳ್ಳುವ ಇವರ ಹುನ್ನಾರ ಇಡೀ ದೇಶ ಗಮನಿಸಿದೆ. ಇವರ ಹುಳುಕನ್ನು ಯಾವಾಗ ಯಾವಾಗ ವಿರೋಧ ಪಕ್ಷ ಪ್ರಶ್ನೆ ಮಾಡಿದೆಯೊ ಆಗ ಇವರು ಈ ತರಹದ ಕೆಲಸ ಮಾಡಿದ್ದಾರೆ. ಇವರು ದೇಶವನ್ನು ತಮ್ಮ ಕಪಿಮುಷ್ಠಿ ಯಲ್ಲಿಟ್ಟುಕೊಂಡು ಜನವಿರೋಧಿ ನೀತಿಗಳ ಬಿಲ್‌ಗಳನ್ನು ಮಂಡಿಸಿ ಈ ದೇಶದ ಸಾಮರಸ್ಯಕ್ಕೆ ಧಕ್ಕೆ ತಂದೊಡ್ಡುವ ಪ್ರಯತ್ನ ಮಾಡುತ್ತ, ಸರ್ವಾಧಿಕಾರಿ ರಾಜನಂತೆ ವರ್ತಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಇವರ ಈ ನೀತಿಯನ್ನು ಜನರ ಮುಂದೆ ಕೊಂಡೊಯ್ದು ಇವರಿಗೆ ತಕ್ಕಪಾಠ ಕಲಿಸುತ್ತದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಕೆ.ಎಫ್. ಅಂಕಲಗಿ, ಆಜಾದ ಪಟೇಲ, ರಮೇಶ ಗುಬ್ಬೇವಾಡ, ಮಹ್ಮದರಫೀಕ ಟಪಾಲ, ಆರತಿ ಶಹಾಪೂರ, ಶಬ್ಬೀರ ಜಾಗೀರದಾರ, ಸಾಹೇಬಗೌಡ ಬಿರಾದಾರ ಮಾತನಾಡಿದರು.
ಈ ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಡಾ.ಗಂಗಾಧರ ಸಂಬಣ್ಣಿ, ಚಂದ್ರಕಾAತ ಶೆಟ್ಟಿ, ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ, ಜಮೀರಅಹ್ಮದ ಬಕ್ಷಿ, ಕಾಂಗ್ರೆಸ್ ಮುಖಂಡ ಡಿ.ಎಲ್. ಚವ್ಹಾಣ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಅಮಿತ ಚವ್ಹಾಣ, ಮಹಾನಗರಪಾಲಿಕೆ ಸದಸ್ಯ ದಿನೇಶ ಹಳ್ಳಿ, ವಿವಿಧ ಘಟಕಗಳ ಪ್ರಮುಖರಾದ ಕೃಷ್ಣಾ ಕಾಮಟೆ, ಹೊನಮಲ್ಲ ಸಾರವಾಡ, ಚನಬಸಪ್ಪ ನಂದರಗಿ, ಹಾಜಿಲಾಲ ದಳವಾಯಿ, ಸೈಯದ ಅಫ್ತಾಬ ಖಾದ್ರಿ, ಭಾರತಿ ಹೊಸಮನಿ, ಭಾರತಿ ನಾವಿ, ಮಂಜುಳಾ ಗಾಯಕವಾಡ, ಪಯಾಜ ಕಲಾದಗಿ, ಅಫ್ಜಲ್ ಜಾನವೆಕರ, ಶಂಕರಸಿAಗ ಹಜೇರಿ, ಕನ್ನಾನ ಮುಶ್ರೀಫ್, ಆಸ್ಮಾ ಕಾಲೆಬಾಗ, ಸಂತೋಷ ಬಾಲಗಾಂವಿ, ಮೊಹಮ್ಮದ ಮುಲ್ಲಾ, ಮಂಜುಳಾ ಗಾಯಕವಾಡ, ಅಬುಬಕರ ಕಂಬಾಗಿ, ಲಾಲಸಾಬ ಕೊರಬು, ಮಹೆಬೂಬ ಮುಧೋಳ, ಸಲೀಮ ಕಲಾದಗಿ, ಮಹಾದೇವ ಜಾಧವ, ಪ್ರಿಯಾಂಕಾ ತೊರವಿ, ಡಿ.ಆರ್. ಸಂಕದ, ಬಾಬುಸಾಬ ಯಾಳವಾರ, ಶಮೀಮ ಅಕ್ಕಲಕೋಟ, ಇಲಿಯಾಸ ಅಹ್ಮದ ಸಿದ್ದಿಕಿ, ಸಿದ್ದು ಹಡಪದ, ಕೃಷ್ಣಾ ಲಮಾಣಿ, ಸುಂದರಪಾಲ, ಮಹಿಬೂಬಸಾಬ ಚೌಧರಿ, ಫಿರೋಜ ಶೇಖ, ಹಮಿದಾ ಪಟೇಲ, ಪರಶುರಾಮ ಹೊಸಮನಿ, ಗಿರೀಶ ಇಟ್ಟಂಗಿ, ರಜಾಕಸಾಬ ಕಾಖಂಡಕಿ, ದಸ್ತಗೀರ ಸಾಲೋಟಗಿ, ಪೀರಾ ಜಮಖಂಡಿ, ಮಂಜುನಾಥ ನಿಡೋಣಿ, ಜಹೀರಾ ಚೌಧರಿ, ಎ.ಎನ್. ಮನಗೂಳಿ ಮುಂತಾದವರು ಉಪಸ್ಥಿತರಿದ್ದರು.
Tags:
ವಿಜಾಪುರ ಸುದ್ದಿ