ವಿಜಯ ಸಂಘರ್ಷ
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಜಿಲ್ಲಾವಾರು ಫಲಿತಾಂಶ ಹೇಗಿದೆ, ಯಾವ ಜಿಲ್ಲೆ ಎಷ್ಟು ಶೇಕಡವಾರು ಫಲಿತಾಂಶ ಪಡೆದಿದೆ ಎಂಬ ವಿವರ ಇಲ್ಲಿದೆ. ಪ್ರಸಕ್ತ 5,52,690 ವಿದ್ಯಾರ್ಥಿ ಗಳು ಪಾಸ್ ಆದ ಖುಷಿಯಲ್ಲಿದ್ದಾರೆ.
ಉತ್ತೀರ್ಣ ಪ್ರಮಾಣ ಶೇಕಡ 81.15 ರಷ್ಟಿದೆ. ನಗರ ಪ್ರದೇಶದ ವಿದ್ಯಾರ್ಥಿಗಳು ಶೇ 81.10ರಷ್ಟು ಸಾಧನೆ ಮಾಡಿದ್ದಾರೆ.
ಗ್ರಾಮಾಂತರದ ವಿದ್ಯಾರ್ಥಿಗಳು ಶೇಕಡ ಶೇ 81.31 ಫಲಿತಾಂಶ ತಂದುಕೊಟ್ಟಿದ್ದಾರೆ. 32 ಜಿಲ್ಲೆಗಳ ದ್ವಿತೀಯ ಪಿಯುಸಿ ಶೇಕಡವಾರು ಫಲಿತಾಂಶ ಇಲ್ಲಿದೆ.
(ಓದಿ:ದ್ವಿತೀಯ ಪಿಯುಸಿ ಫಲಿತಾಂಶ)
ದ್ವಿತೀಯ ಪಿಯುಸಿ ಜಿಲ್ಲಾವಾರು ಶೇಕಡವಾರು ಫಲಿತಾಂಶ
1)ದಕ್ಷಿಣ ಕನ್ನಡ ಈ ಬಾರಿ ಶೇಕಡ 97.37ರಷ್ಟು ಫಲಿತಾಂಶ ದಾಖಲಿಸಿದೆ. 2023ರಲ್ಲಿ ಇದು ಶೇಕಡ 95.33 ಆಗಿತ್ತು.
2)ಉಡುಪಿ ಜಿಲ್ಲೆಯು ಶೇಕಡ 96.80ರಷ್ಟು ಫಲಿತಾಂಶ ಪಡೆದಿದೆ. ಕಳೆದ ವರ್ಷ ಇದು ಶೇಕಡ 95.24 ಆಗಿತ್ತು.
3)ವಿಜಯಪುರವು ಈ ಬಾರಿ ಶೇಕಡ 94.89ರಷ್ಟು ಫಲಿತಾಂಶ ತನ್ನದಾಗಿಸಿಕೊಂಡಿದೆ. ಕಳೆದ ವರ್ಷದ ಶೇಕಡ 84.69ಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಪ್ರಗತಿ ದಾಖಲಿಸಿದೆ.
4)ಉತ್ತರ ಕನ್ನಡ ಜಿಲ್ಲೆಯು ಈ ಬಾರಿ ಶೇಕಡ 92.51ರಷ್ಟು ಫಲಿತಾಂಶ ತನ್ನದಾಗಿಸಿದೆ. ಕಳೆದ ವರ್ಷದ ಶೇಕಡ 89.74ಕ್ಕೆ ಹೋಲಿಸಿದರೆ ಈ ಬಾರಿ ತುಸು ಪ್ರಗತಿ ದಾಖಲಿಸಿದೆ.
5)ಕೊಡಗು ಜಿಲ್ಲೆಯು ಈ ಬಾರಿ ಶೇಕಡ 92.13 ರಿಸಲ್ಟ್ ಪಡೆದಿದೆ. ಕಳೆದ ವರ್ಷ ಶೇಕಡ 90.55 ಫಲಿತಾಂಶ ಪಡೆದಿತ್ತು.
6)ಬೆಂಗಳೂರು ದಕ್ಷಿಣ ಶೇಕಡ 89.57 ಫಲಿತಾಂಶ ಪಡೆದಿದೆ. ಕಳೆದ ವರ್ಷ ಶೇಕಡ 82.3 ಫಲಿತಾಂಶ ಪಡೆದಿತ್ತು.
7)ಜಿಲ್ಲಾವಾರು ಫಲಿತಾಂಶದಲ್ಲಿ ಬೆಂಗಳೂರು ಉತ್ತರ ಶೇಕಡ 88.67ರಷ್ಟು ಫಲಿತಾಂಶ ಪಡೆದಿದೆ. ಇದಕ್ಕೂ ಹಿಂದಿನ ವರ್ಷ ಶೇಕಡ 82.25 ಫಲಿತಾಂಶ ದಾಖಲಿಸಿತ್ತು.
8)ಶಿವಮೊಗ್ಗ ಜಿಲ್ಲೆ ಶೇಕಡ 88.58ರಷ್ಟು ಫಲಿತಾಂಶ ತನ್ನದಾಗಿಸಿದೆ. ಕಳೆದ ವರ್ಷ ಶೇಕಡ 83.13 ಫಲಿತಾಂಶ ಪಡೆದಿತ್ತು.
9)ಚಿಕ್ಕಮಗಳೂರು ಜಿಲ್ಲೆಯು ಶೇಕಡ 88.20 ಫಲಿತಾಂಶ ಪಡೆದಿದೆ. ಕಳೆದ ವರ್ಷ ಶೇಕಡ 83.28 ಫಲಿತಾಂಶ ತನ್ನದಾಗಿಸಿಕೊಂಡಿತ್ತು.
10)ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಈ ಬಾರಿ ಶೇಕಡ 87.55 ಫಲಿತಾಂಶ ಪಡೆದಿದೆ. ಕಳೆದ ವರ್ಷ ಶೇಕಡ 83.04 ಫಲಿತಾಂಶ ಪಡೆದಿದೆ.
11)ಬಾಗಲಕೋಟೆ ಜಿಲ್ಲೆ ಈ ವರ್ಷ: ಶೇಕಡ 87.54, ಕಳೆದ ವರ್ಷ: 78.79
12)ಕೋಲಾರ: ಈ ವರ್ಷ: 86.12, ಕಳೆದ ವರ್ಷ: 79.2
13)ಹಾಸನ: ಈ ವರ್ಷ- ಶೇಕಡ 85.83, ಕಳೆದ ವರ್ಷ- 83.14
14)ಚಾಮರಾಜನಗರ ಜಿಲ್ಲೆ: ಈ ವರ್ಷ ಶೇಕಡ 84.99 ಮತ್ತು ಕಳೆದ ವರ್ಷ ಶೇಕಡ 81.92
15)ಚಿಕ್ಕೋಡಿ ಜಿಲ್ಲೆ ಈ ವರ್ಷ- ಶೇಕಡ 84.10 ಕಳೆದ ವರ್ಷ ಶೇಕಡ 78.76
16)ರಾಮನಗರ ಜಿಲ್ಲೆ ಈ ವರ್ಷ- ಶೇಕಡ 83.58 ಮತ್ತು ಕಳೆದ ವರ್ಷ- ಶೇಕಡ 78.12
17)ಮೈಸೂರು: ಈ ವರ್ಷ ಶೇಕಡ 83.13, ಕಳೆದ ವರ್ಷ- 79.89
18)ಚಿಕ್ಕಬಳ್ಳಾಪುರ: ಈ ವರ್ಷ ಶೇಕಡ 82.84, ಕಳೆದ ವರ್ಷ ಶೇಕಡ 77.77
19)ಬೀದರ್: ಈ ವರ್ಷ ಶೇಕಡ 81.69 ಕಳೆದ ವರ್ಷ- ಶೇಕಡ 78
20)ತುಮಕೂರು: ಈ ವರ್ಷ- ಶೇಕಡ 81.03, ಕಳೆದ ವರ್ಷ- ಶೇಕಡ 74.5
21)ದಾವಣಗೆರೆ: ಈ ವರ್ಷ ಶೇಕಡ 80.96, ಕಳೆದ ವರ್ಷ ಶೇಕಡ 75.72
22)ಕೊಪ್ಪಳ: ಈ ವರ್ಷ ಶೇಕಡ 80.83, ಕಳೆದ ವರ್ಷ ಶೇ 74.8
23)ಧಾರವಾಡ: ಈ ವರ್ಷ ಶೇ 80.70, ಕಳೆದ ವರ್ಷ ಶೇ 73.54
24)ಮಂಡ್ಯ: ಈ ವರ್ಷ ಶೇ 80.56, ಕಳೆದ ವರ್ಷ ಶೇ 77.47
25)ಹಾವೇರಿ: ಈ ವರ್ಷ ಶೇ 78.36, ಕಳೆದ ವರ್ಷ ಶೇ 74.13
26)ಯಾದಗಿರಿ: ಈ ವರ್ಷ ಶೇ 77.29, ಕಳೆದ ವರ್ಷ ಶೇ 62.98
27)ಬೆಳಗಾವಿ: ಈ ವರ್ಷ- ಶೇ 77.20, ಕಳೆದ ವರ್ಷ ಶೇ 73.98
28)ಕಲಬುರಗಿ: ಈ ವರ್ಷ- ಶೇ 75.48, ಕಳೆದ ವರ್ಷ ಶೇ 69.37
29)ಬಳ್ಳಾರಿ: ಈ ವರ್ಷ ಶೇ 74.70, ಕಳೆದ ವರ್ಷ ಶೇ 69.55
30)ರಾಯಚೂರು: ಈ ವರ್ಷ ಶೇಕಡ 73.11, ಕಳೆದ ವರ್ಷ ಶೇ 66.21
31)ಚಿತ್ರದುರ್ಗ: ಈ ವರ್ಷ ಶೇಕಡ 72.92, ಕಳೆದ ವರ್ಷ ಶೇಕಡ 69.5 ಫಲಿತಾಂಶ
32)ಗದಗ: ಈ ವರ್ಷ ಶೇ 72.86 ಫಲಿತಾಂಶ ಪಡೆದಿದೆ, ಕಳೆದ ವರ್ಷ ಶೇಕಡ 66.91 ಪಡೆದಿತ್ತು.
Tags:
ರಾಜ್ಯದ ಪಿಯು ರಿಸಲ್ಟ್