ಶಿಲಾ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಗರ್ಭಗುಡಿ ನವೀಕರಣ ಮಹೋತ್ಸವ

ವಿಜಯ ಸಂಘರ್ಷ 
ಭದ್ರಾವತಿ: ನಗರದ ಭೂತನಗುಡಿಯ ಶ್ರೀ ಮಹಾಗಣಪತಿ, ಶ್ರೀ ಶನೈಶ್ವರಸ್ವಾಮಿ, ಶ್ರೀ ಕೆಂಚಮ್ಮ ಮತ್ತು ಭೂತಪ್ಪ ಸೇವಾ ಸಮಿತಿ 
ವತಿಯಿಂದ ನೂತನ ಶಿಲಾ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಮತ್ತು ಗರ್ಭಗುಡಿ ನವೀಕರಣ ಉದ್ಘಾಟನಾ ಕಾರ್ಯಕ್ರಮವನ್ನು 
ಸಮಾಜ ಸೇವಕ ಸಿ. ಮಹೇಶ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು.
 
ವಿಜಯಾಭ್ಯುದಯ ಶ್ರೀಮನೃಪ ಶಾಲಿವಾಹನ ಶಕ ವರ್ಷ 1946ನೇ ಶ್ರೀ ಕ್ರೋಧಿನಾಮ ಸಂವತ್ಸರದ ಚೈತ್ರ ಶುದ್ಧ ಪ್ರತಿಪದ, ಏ:16 ನೇ ಮಂಗಳವಾರ ದವರೆಗೆ ಒಂದು ವಾರ ಕಾಲ ಪರ್ಯಂತ ಹೋಮ, ಪೂಜಾ, ಕೈಂಕರ್ಯ ಸಹಿತ ಚೈತ್ರ ಶುದ್ಧ ಸಪ್ತಮಿ ದಿನಾಂಕ : 15-04-2024 ನೇ ಸೋಮವಾರ ಸೂರ್ಯೋದಯಾದಿ ಬೆಳಿಗ್ಗೆಘಂಟೆ 6-30 ರಿಂದ 7 ಘಂಟೆಯವರೆಗೆ ಸಲ್ಲುವ ಶುಭ ಮೇಷ ಲಗ್ನದ ಶಿವಸ್ಕಂದ ಕಾಲದಲ್ಲಿ ಶ್ರೀ ಮಹಾಗಣಪತಿ ಮತ್ತು ಶ್ರೀ ಪವೈಶ್ವರಸ್ವಾಮಿ ನೂತನ ಶಿಲಾವಿಗ್ರಹ ಹಾಗೂ ಶ್ರೀ ಕೆಂಚಮ್ಮ ದೇವಿಯ ಹದ್ದಾರಿ ಪ್ರಜ್ಞಾವನೆಯನ್ನು ಶ್ರೀದೇವರ ಪ್ರೇರಣಾನುಸಾರವಾಗಿ, ನೆರವೇರಿಸಲು ಸಮಿತಿಯವರು ಮತ್ತು ಭಕ್ತಾಧಿಗಳು ನಿಶ್ಚಯಿಸಿರುತ್ತಾರೆ.

ಕಾರ್ಯಕ್ರಮಗಳು ಸಂಜೆ 7 ಕ್ಕೆ ವಿಗ್ರಹಕ್ಕೆ ಗಂಗಾಭಿಷೇಕ, ಕ್ಷೀರಾಭೀಷೇಕ, ಬಿಂಬಶುದ್ಧಿ, ಸುವಾಸಿನಿಯವರಿಂದ ಪೂಜೆ, ಮಂಗಳಾರಾತಿ, ತೀರ್ಥ-ಪ್ರಸಾದ ವಿನಿಯೋಗ
10 ರ ಬುಧವಾರ ಚೈತ್ರ ಶುದ್ಧ ದ್ವಿತೀಯ
ಬೆಳಿಗ್ಗೆ 9 ಘಂಟೆಗೆ ಧ್ವಜಾರೋಹಣ, ಸ್ವಸ್ತಿವಾಚನ, ಗುರು-ಗಣಪತಿ ಪೂಜೆ, ಪುಣ್ಯಾಹಃ, ಪಂಚಗವ್ಯ ಶುದ್ಧ ಹೋಮ, ದೇವಾಲಯ ಶುದ್ದಿ, ದೇವನಾಂದಿ ನೆರವೇರಿತು. ದೇವಸ್ಥಾನದ ಅರ್ಚಕರು. ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಪಾಲ್ಗೊಂಡಿದ್ದರು.

ಸಂಜೆ 7 ಘಂಟೆಗೆ ವಾಸ್ತು ಹೋಮ, ರಾಕ್ಷೆಘ್ನ ಹೋಮ, ದಿಗ್ನಲಿ, ತೀರ್ಥ-ಪ್ರಸಾದ ವಿನಿಯೋಗ, 11 ರ ಗುರುವಾರ ಚೈತ್ರ ಶುದ್ಧ ತೃತೀಯ ವೇದಪಾರಾಯಣ, ಸ್ವಸ್ತಿವಾಚನ. ಬೆಳಿಗ್ಗೆ 9 ಘಂಟೆಗೆ ಋತ್ವಿಗರುಣ, ಕಂಕಣ ಬಂಧನ, ಶ್ರೀ ಮಹಾಗಣಪತಿ ಹವನ, ಮಹಾಸಂಕಲ್ಪ, ತಮೀವೃಕ್ಷ ಸಂಸ್ಕಾರ ಸಂಜೆ 7-00 ಘಂಟೆಗೆ ಶ್ರೀ ಮಹಾಸುದರ್ಶನ ಯಾಗ, ಪೂರ್ಣಾಹುತಿ, ತೀರ್ಥ-ಪ್ರಸಾದ ವಿನಿಯೋಗ ನಡೆಯಲಿದೆ.

12 ನೇ ಶುಕ್ರವಾರ ಚೈತ್ರ ಶುದ್ಧ ಚತುರ್ಥಿ
ಬೆಳಿಗ್ಗೆ 8 ಕ್ಕೆ ವೇದಪಾರಾಯಣ, ಸ್ವಸ್ತಿವಾಚನ, ಆಗ್ನಿಜನನ, ಯಾಗ ಶಾಲಾಪ್ರವೇಶ, ಯಜ್ಞಕುಂಡ ಸಂಸ್ಕರಣೆ, ಅಗ್ನಿ ಸಂಸ್ಕರಣೆ, ದುರ್ಗಾ ಹೋಮ, ನವಗ್ರಹ ಹೋಮ, ತೀರ್ಥ-ಪ್ರಸಾದ ವಿನಿಯೋಗ ಸಂಜೆ 7 ಘಂಟೆಗೆ ಕಲಶ ಸ್ಥಾಪನೆ, ರುದ್ರ ಪಾರಾಯಣ, ನವಗ್ರಹ ಜಪ, ತೀರ್ಥ-ಪ್ರಸಾದ ವಿನಿಯೋಗ.
13 ರ ಚೈತ್ರ ಶುದ್ಧ ಪಂಚಮಿ ಬೆಳಿಗ್ಗೆ 8 ಕ್ಕೆ ವೇದಪಾರಾಯಣ, ರುದ್ರ ಹೋಮ, ಶ್ರೀ ಶನೈಶ್ಚರ ಶಾಂತಿ ಹೋಮ, ಪೂರ್ಣಾಹುತಿ, ತೀರ್ಥ-ಪ್ರಸಾದ ವಿನಿಯೋಗ. ಸಂಜೆ 7 ಕ್ಕೆ ಬ್ರಹ್ಮ ಕಲಶ ಸ್ಥಾಪನೆ, ಮಂಡಲ ದರ್ಶನ ಪೂಜೆ, ಮಂಗಳಾರತಿ ತೀರ್ಥ-ಪ್ರಸಾದ ವಿನಿಯೋಗ ಹಾಗೂ 14 ನೇ ಭಾನುವಾರ ಚೈತ್ರ ಶುದ್ಧ ಷಷ್ಠಿ ಬೆಳಿಗ್ಗೆ 8 ಕ್ಕೆ ವೇದಪಾರಾಯಣ, ಸ್ವಸ್ತಿವಾಚನ, ಸ್ಥಾನ ಶುದ್ದಿ, ಗರ್ಭಗುಡಿ ಶುದ್ದಿ, ಪೀಠ ಶುದ್ದಿ, ಅದಿವಾಸ, ರತ್ನಾಧಿವಾಸ, ವಸ್ತಾಧಿವಾಸ, ಕ್ಷೀರಾಧಿವಾಸ, ಶಯನವಾಸ, ಸಂಜೆ 7 ಘಂಟೆಗೆ ಅದಿವಾಸ ಹೋಮ, ಮಹಾ ಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗ ನಿರಂತರ ನಡೆಲಿವೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು